Dailyhunt Logo
  • Light mode
    Follow system
    Dark mode
    • Play Story
    • App Story
2026ರ ಐಪಿಎಲ್‌ ಗೆಲುವನ್ನು ಕಳೆದ ವರ್ಷದ ಕಾಲ್ತುಳಿತದ ಸಂತ್ರಸ್ತರಿಗೆ ಅರ್ಪಿಸಿದ ಪಾಟಿದಾರ್

2026ರ ಐಪಿಎಲ್‌ ಗೆಲುವನ್ನು ಕಳೆದ ವರ್ಷದ ಕಾಲ್ತುಳಿತದ ಸಂತ್ರಸ್ತರಿಗೆ ಅರ್ಪಿಸಿದ ಪಾಟಿದಾರ್

Vishwavani 3 weeks ago

ಹಮದಾಬಾದ್‌, ಜೂ.1: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಎರಡನೇ ಐಪಿಎಲ್ ಪ್ರಶಸ್ತಿಯನ್ನು ನಾಯಕ ರಜತ್ ಪಾಟಿದಾರ್(Rajat Patidar) ಅವರು ಕಳೆದ ವರ್ಷ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಅಭಿಮಾನಿಗಳಿಗೆ ಅರ್ಪಿಸಿದರು.

ಅಹಮದಾಬಾದ್‌ನಲ್ಲಿ ಪಟಾಕಿ ಸಿಡಿಸುತ್ತಾ ಸಾವಿರಾರು ಆರ್‌ಸಿಬಿ ಬೆಂಬಲಿಗರು ಮತ್ತೊಂದು ಚಾಂಪಿಯನ್‌ಶಿಪ್ ಆಚರಿಸುತ್ತಿದ್ದಂತೆ, ನಾಯಕ ಪಾಟೀದಾರ್‌ ಫ್ರಾಂಚೈಸಿಯ ಚೊಚ್ಚಲ ಪ್ರಶಸ್ತಿ ಗೆಲುವಿನ ವೇಳೆ ನಡೆದ ದುರಂತವನ್ನು ನೆನಪಿಸಿಕೊಂಡರು. ಗೆಲುವಿನ ಬಳಿಕ ಭಾವುಕರಾಗಿ ಮಾತನಾಡಿದ ಅವರು, ಈ ಗೆಲುವು ವೀಕ್ಷಿಸಲು ನಮ್ಮ ಮುಂದೆ ಇಲ್ಲದವರಿಗೆ ಸೇರಿದ್ದು ಎಂದು ಹೇಳುವ ಮೂಲಕ ಮಡಿದ 11 ಮಂದಿ ಅಭಿಮಾನಿಗಳಿಗೆ ಅರ್ಪಿಸಿದರು.

"ನಾವು ಈ ಟ್ರೋಫಿಯನ್ನು ನಮ್ಮ ಅಭಿಮಾನಿಗಳಿಗೆ ಅರ್ಪಿಸುತ್ತೇವೆ, ವಾಸ್ತವವಾಗಿ ಅಭಿಮಾನಿಗಳಿಗೆ ಅಲ್ಲ, ಆದರೆ ದುರಂತದಲ್ಲಿ ಮಡಿದ ಕುಟುಂಬ ಸದಸ್ಯರಿಗೆ. ಈ ಟ್ರೋಫಿಯನ್ನು ಅವರಿಗೆ ಅರ್ಪಿಸಬೇಕೆಂದು ನಾನು ಯಾವಾಗಲೂ ಬಯಸುತ್ತಿದ್ದೆ. ಆ ಭಾವನೆಯನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ" ಎಂದು ಪಾಟಿದಾರ್ ಹೇಳಿದರು.

ಕಳೆದ ವರ್ಷ, ಆರ್‌ಸಿಬಿಯ ಬಹುನಿರೀಕ್ಷಿತ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಆಚರಿಸಲು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಾವಿರಾರು ಜನರು ಜಮಾಯಿಸಿದಾಗ ಉಂಟಾದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಐತಿಹಾಸಿಕವಾಗಿ ಸಂಭ್ರಮಿಸಲು ಉದ್ದೇಶಿಸಲಾಗಿದ್ದ ಈ ಕಾರ್ಯಕ್ರಮ ಇತಿಹಾಸದ ಕರಾಳ ದಿನಗಳಲ್ಲಿ ಒಂದಾಗಿ ಮಾರ್ಪಟ್ಟಿತ್ತು.

IPL 2026 Final: ಚಾಂಪಿಯನ್‌ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿದ ಬದ್ಧ ಎದುರಾಳಿ ಸಿಎಸ್‌ಕೆ

ಇದೇ ಕಾರಣಕ್ಕೆ ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಶಾಂತ ಮತ್ತು ಸುರಕ್ಷಿತವಾಗಿ ಮನೆಯಿಂದಲೇ ಸಂಭ್ರಮಾಚರಣೆ ಮಾಡುವಂತೆ ಟ್ವೀಟ್‌ ಮೂಲಕ ಮನವಿ ಮಾಡಿಕೊಂಡಿತು. ರಾಜ್ಯಾದ್ಯಂತ ಪೊಲೀಸರು ಹೈ ಅಲರ್ಟ್‌ ಆಗಿದ್ದರು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ಮಧ್ಯೆಯೂ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಕೆಲವು ಯುವಕರು ಹಳೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸರಕು ಸಾಗಣೆ ಲಾರಿಗಳ ಮೇಲೆ ಏರಿ ಪ್ರಾಣದ ಹಂಗು ತೊರೆದು ಮೊಂಡಾಟ ಮೆರೆದರು. ಲಾರಿಗಳ ಚಲನೆಗೆ ಅಡ್ಡಿಪಡಿಸಿ ರಸ್ತೆಯಲ್ಲೇ ಅತಿರೇಕದ ಸಂಭ್ರಮಾಚರಣೆ ಮುಂದುವರಿಸಿದರು. ಸಾರ್ವಜನಿಕರ ಜೀವಕ್ಕೆ ಆಪತ್ತು ತರುವಂತೆ ವರ್ತಿಸಿದ ಜನರನ್ನು ಹತೋಟಿಗೆ ತರಲು ಪೊಲೀಸರು ಅಂತಿಮವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಆರ್‌ಸಿಬಿ ಈ ಬಾರಿ ಟೂರ್ನಿಯುದ್ದಕ್ಕೂ ರಕ್ಷಣಾತ್ಮಕ ಆಟವಾಡದೆ, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿತು. ಹಲವು ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾದರೂ, ತನ್ನ ಆಕ್ರಮಣಕಾರಿ ಆಟವನ್ನು ಬಿಡಲಿಲ್ಲ. ಮಾತ್ರವಲ್ಲದೆ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಸಮತೋಲನ ಕಾಯ್ದುಕೊಂಡಿತು.

Dailyhunt
Disclaimer: This content has not been generated, created or edited by Dailyhunt. Publisher: Vishwavani