Dailyhunt Logo
  • Light mode
    Follow system
    Dark mode
    • Play Story
    • App Story
250th Independence of USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ

250th Independence of USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ

Vishwavani 2 weeks ago

ಡಾ.ಚಂದ್ರಶೇಖರ್ ಚೌಗಲಾ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್‌ಎ)- ಈ ಹೆಸರನ್ನು ಕೇಳಿದ ತಕ್ಷಣ ಇಡೀ ಜಗತ್ತಿಗೆ ನೆನಪಾಗುವುದು ಅದರ ಆರ್ಥಿಕ ಬಲ, ಅತ್ಯಾಧುನಿಕ ತಂತ್ರಜ್ಞಾನ, ಹಾಲಿವುಡ್ ಸಿನಿಮಾಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಡೀ ವಿಶ್ವವನ್ನೇ ನಡುಗಿಸಬಲ್ಲ ಅದರ ಬೃಹತ್ ಮಿಲಿಟರಿ ಶಕ್ತಿ.

ಜಾಗತಿಕ ರಾಜಕಾರಣದಲ್ಲಿ ಅಮೆರಿಕ ತನ್ನನ್ನು ತಾನು ಪ್ರಜಾಪ್ರಭುತ್ವದ ರಕ್ಷಕ, ಮಾನವ ಹಕ್ಕುಗಳ ಹರಿಕಾರ ಮತ್ತು ಜಗತ್ತಿನ ಏಕೈಕ ಮಹಾಶಕ್ತಿ ದೇಶ, ಜಗತ್ತಿನ ದೊಡ್ಡಣ್ಣ ಎಂದು ಬಿಂಬಿಸಿಕೊಳ್ಳುತ್ತಾ ಬಂದಿದೆ. ವಿಶ್ವದ ಒಟ್ಟು ಮಿಲಿಟರಿ ವೆಚ್ಚದ ಬಹುದೊಡ್ಡ ಪಾಲನ್ನು ಅಮೆರಿಕ ಒಂದೇ ಭರಿಸುತ್ತದೆ.

ಜಗತ್ತಿನಾದ್ಯಂತ ನೂರಾರು ದೇಶಗಳಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಹೊಂದಿರುವ ಅಮೆರಿಕಕ್ಕೆ ಸದಾ ಯುದ್ಧದ ಉತ್ಸಾಹ. ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಸಂಘರ್ಷ ನಡೆದರೂ ಅಲ್ಲಿ ಮೂಗು ತೂರಿಸುವುದು ಅಥವಾ ತಾನೇ ಸ್ವತಃ ಯುದ್ಧಕ್ಕೆ ನಾಂದಿ ಹಾಡುವುದು ಅಮೆರಿಕದ ಹಳೆಯ ಚಾಳಿ. ಆದರೆ, ಇತಿಹಾಸದ ಪುಟಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ದ್ವಿತೀಯ ಮಹಾ ಯುದ್ಧದ ನಂತರ ಅಮೆರಿಕ ತನ್ನದೇ ಆದ ಬಲದಿಂದ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಗೆದ್ದ ಪ್ರಮುಖ ಯುದ್ಧ ಒಂದೂ ಇಲ್ಲ.

ಹಾಗಾದರೆ, ಇಷ್ಟೊಂದು ಬೃಹತ್ ಸೈನ್ಯ, ಸೌರಶಕ್ತಿ, ಉಪಗ್ರಹ ತಂತ್ರಜ್ಞಾನ ಮತ್ತು ಅಣುಬಾಂಬು ಗಳನ್ನು ಹೊಂದಿರುವ ದೇಶವೊಂದು ಸರಣಿ ಸೋಲುಗಳನ್ನು ಅನುಭವಿಸುತ್ತಿರುವುದರ ಹಿಂದಿನ ರಹಸ್ಯವೇನು? ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುವ ಈ ಯುದ್ಧೋನ್ಮಾದದ ಅಸಲಿ ಮುಖ ವೇನು? ಇವುಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸೋಣ.

Dr Chandrashekher Chaugala Column: ಯುದ್ಧದ ಜ್ವಾಲೆಯಲ್ಲಿ ಕರಗುತ್ತಿರುವ ಪರಿಸರ

ಯುದ್ಧಪ್ರಿಯತೆಯ ಮೂಲ: ಅಮೆರಿಕದ ಇತಿಹಾಸವನ್ನು ಗಮನಿಸಿದರೆ, ಈ ದೇಶದ ಅಸ್ತಿತ್ವವೇ ರಕ್ತಪಾತ ಮತ್ತು ಯುದ್ಧಗಳ ಮೇಲೆ ನಿಂತಿದೆ ಎಂಬುದು ಸ್ಪಷ್ಟ. ಬ್ರಿಟಿಷರ ವಸಾಹತುಶಾಹಿಯಿಂದ ಮುಕ್ತಿ ಪಡೆಯಲು ನಡೆದ ಅಮೆರಿಕನ್ ಕ್ರಾಂತಿಯಿಂದ ಹಿಡಿದು, ದೇಶದ ಒಳಗೇ ನಡೆದ ಭೀಕರ ಅಂತರ್‌ಯುದ್ಧದವರೆಗೆ ಅಮೆರಿಕನ್ನರು ಸದಾ ಆಯುಧಗಳೊಂದಿಗೇ ಬದುಕಿದವರು. ತನ್ನ ದೇಶ ಸ್ಥಾಪನೆಯಾದ ದಿನದಿಂದ (1776) ಇಂದಿನವರೆಗೆ ಅಮೆರಿಕವು ತನ್ನ ಇತಿಹಾಸದ ಶೇ.90ಕ್ಕಿಂತ ಹೆಚ್ಚು ವರ್ಷಗಳನ್ನು ಯಾವುದಾದರೊಂದು ಯುದ್ಧ, ಮಿಲಿಟರಿ ಕಾರ್ಯಾಚರಣೆ ಅಥವಾ ರಹಸ್ಯ ಹಸ್ತಕ್ಷೇಪದ ಕಳೆದಿದೆ.

ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಮೇಲೆ ಅಣುಬಾಂಬ್ ಹಾಕಿ ಜಗತ್ತಿನ ಅತಿ ದೊಡ್ಡ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿದ ನಂತರ, ಅಮೆರಿಕದ ಈ ಯುದ್ಧದ ಹಸಿವು ಮತ್ತಷ್ಟು ಹೆಚ್ಚಾಯಿತು. ಆದರೆ, ಈ ಯುದ್ಧಪ್ರಿಯತೆಯ ಹಿಂದೆ ಕೇವಲ ಸೈದ್ಧಾಂತಿಕ ಕಾರಣಗಳಿಲ್ಲ, ಬದಲಿಗೆ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಅಡಗಿವೆ.

ಮಿಲಿಟರಿ-ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್: ಅಮೆರಿಕ ಏಕೆ ಸದಾ ಯುದ್ಧ ಮಾಡಲು ಉತ್ಸುಕವಾ ಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ಮಿಲಿಟರಿ-ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ (ಶಸ್ತ್ರಾಸ್ತ್ರ ಕಂಪನಿಗಳ ಲಾಭ) ಎಂಬ ಪರಿಕಲ್ಪನೆಯ ಬಗ್ಗೆ ತಿಳಿಯಬೇಕು. ಅಮೆರಿಕ ದಲ್ಲಿ ಲಾಕ್‌ಹೀಡ್ ಮಾರ್ಟಿನ್, ಬೋಯಿಂಗ್, ರೇಥಿಯಾನ್‌ನಂತಹ ಬೃಹತ್ ಖಾಸಗಿ ಕಂಪನಿಗಳು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತವೆ. ಈ ಕಂಪನಿಗಳಿಗೆ ಲಾಭವಾಗಬೇಕಾದರೆ ಜಗತ್ತಿನಲ್ಲಿ ಎದರೂ ಯುದ್ಧ ನಡೆಯುತ್ತಲೇ ಇರಬೇಕು. ಯುದ್ಧ ನಡೆದರೆ ಮಾತ್ರ ಇವರ ಬಾಂಬು ಗಳು, ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳು ಮಾರಾಟವಾಗುತ್ತವೆ. ಈ ಕಂಪನಿಗಳು ಅಮೆರಿಕದ ರಾಜಕಾರಣಿಗಳಿಗೆ (ಸಂಸದರು ಮತ್ತು ಅಧ್ಯಕ್ಷರ ಚುನಾವಣೆಗಳಿಗೆ) ಕೋಟ್ಯಂತರ ಡಾಲರ್ ಹಣವನ್ನು ದೇಣಿಗೆಯಾಗಿ ನೀಡುತ್ತವೆ. ‌

ಪ್ರತಿಯಾಗಿ, ರಾಜಕಾರಣಿಗಳು ರಕ್ಷಣಾ ಬಜೆಟ್ ಅನ್ನು ಹೆಚ್ಚಿಸುತ್ತಾರೆ ಮತ್ತು ಹೊಸ ಹೊಸ ಯುದ್ಧ ಗಳನ್ನು ಸೃಷ್ಟಿಸಲು ಪ್ರಚೋದನೆ ನೀಡುತ್ತಾರೆ. ಹೀಗಾಗಿ ಅಮೆರಿಕಕ್ಕೆ ಯುದ್ಧವನ್ನು ಗೆಲ್ಲುವುದು ಮುಖ್ಯವಲ್ಲ, ಯುದ್ಧವನ್ನು ದೀರ್ಘಕಾಲ ಮುಂದುವರಿಸುವುದು ಮುಖ್ಯ. ಏಕೆಂದರೆ ಯುದ್ಧ ಮುಂದುವರಿದಷ್ಟೂ ಶಸ್ತ್ರಾಸ್ತ್ರ ಉದ್ಯಮಕ್ಕೆ ಬಿಲಿಯನ್ ಡಾಲರ್‌ಗಟ್ಟಲೇ ಲಾಭ ಸಿಗುತ್ತದೆ. ಇದು ಅಮೆರಿಕದ ಯುದ್ಧೋತ್ಸಾಹದ ಅಸಲಿ ಆರ್ಥಿಕ ರಹಸ್ಯ.

ಮುಖಭಂಗದ ಪ್ರಮುಖ ಇತಿಹಾಸಗಳು: ದ್ವಿತೀಯ ಮಹಾಯುದ್ಧದ ನಂತರ ಅಮೆರಿಕ ನೇರವಾಗಿ ಭಾಗವಹಿಸಿದ ಅಥವಾ ಮುನ್ನಡೆಸಿದ ಪ್ರಮುಖ ಯುದ್ಧಗಳ ಇತಿಹಾಸವನ್ನು ನೋಡಿ ದರೆ, ಅದು ಹೇಗೆ ವೈಫಲ್ಯದ ಇತಿಹಾಸವಾಗಿದೆ ಎಂಬುದು ಅರ್ಥವಾಗುತ್ತದೆ. ದ್ವಿತೀಯ ಮಹಾ ಯುದ್ಧ ಮುಗಿದ ಕೆಲವೇ ವರ್ಷಗಳಲ್ಲಿ ಅಮೆರಿಕ ಕಮ್ಯುನಿಸಂ ಸಿದ್ಧಾಂತವನ್ನು ತಡೆಯುವ ಹೆಸರಿನಲ್ಲಿ ಕೊರಿಯಾ ದ್ವೀಪಕಲ್ಪದ ಯುದ್ಧಕ್ಕೆ (ಕೊರಿಯಾ ಯುದ್ಧ 1950-1953) ಧುಮುಕಿತು. ಉತ್ತರ ಕೊರಿಯಾವನ್ನು ಬೆಂಬಲಿಸುತ್ತಿದ್ದ ಸೋವಿಯತ್ ಯೂನಿಯನ್ ಮತ್ತು ಚೀನಾ ವಿರುದ್ಧ ಅಮೆರಿಕ ನೇರ ಸಂಘರ್ಷಕ್ಕೆ ಇಳಿಯಿತು. ಮೂರು ವರ್ಷಗಳ ಕಾಲ ನಡೆದ ಈ ಭೀಕರ ಯುದ್ಧದಲ್ಲಿ ಲಕ್ಷಾಂತರ ಜನ ಸತ್ತರು. ಆದರೆ ಅಂತಿಮವಾಗಿ ಅಮೆರಿಕಕ್ಕೆ ಯಾವುದೇ ನಿರ್ಣಾಯಕ ಗೆಲುವು ಸಿಗಲಿಲ್ಲ. ಯುದ್ಧ ಆರಂಭವಾಗುವ ಮೊದಲು ಕೊರಿಯಾ ಹೇಗೆ ಇತ್ತೋ, ಯುದ್ಧ ಮುಗಿದ ಮೇಲೂ ಹಾಗೆಯೇ ಉಳಿಯಿತು. ಕೊನೆಗೆ ಯಾವುದೇ ಶಾಂತಿ ಒಪ್ಪಂದವಿಲ್ಲದೆ, ಕೇವಲ ಒಂದು ಕದನ ವಿರಾಮದೊಂದಿಗೆ ಯುದ್ಧ ಕೊನೆಗೊಂಡಿತು. ಕೊರಿಯಾ ದೇಶ ಇಬ್ಬಾಗವಾಗಿ (ಉತ್ತರ ಮತ್ತು ದಕ್ಷಿಣ ಕೊರಿಯಾ) ಉಳಿಯಿತು. ಇದು ಅಮೆರಿಕದ ಮೊದಲ ದೊಡ್ಡ ವೈಫಲ್ಯ.

ನಂತರ ಅಮೆರಿಕದ ಇತಿಹಾಸದ ಅತ್ಯಂತ ಕಪ್ಪು ಚುಕ್ಕೆ ಮತ್ತು ಅತಿ ದೊಡ್ಡ ಅವಮಾನ ಎಂದರೆ ಅದು ವಿಯೆಟ್ನಾಂ ಯುದ್ಧ (1955-1975). ಕಮ್ಯುನಿಸ್ಟ್ ಶಕ್ತಿಗಳು ವಿಯೆಟ್ನಾಂ ಅನ್ನು ಆಕ್ರಮಿಸ‌ ದಂತೆ ತಡೆಯಲು ಅಮೆರಿಕ ತನ್ನ ಇಡೀ ಸೈನ್ಯವನ್ನು ಅಲ್ಲಿಗೆ ರವಾನಿಸಿತು. ಬಿಲಿಯನ್‌ಗಟ್ಟಲೇ ಡಾಲರ್ ಹಣ, ಅತ್ಯಾಧುನಿಕ ರೇಡಾರ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಘೋರ ರಾಸಾಯನಿಕ ಅಸಗಳನ್ನು ಅಮೆರಿಕ ಬಳಸಿತು. ಆದರೆ, ವಿಯೆಟ್ನಾಂನ ಬಡ ಮತ್ತು ಪುಟ್ಟ ಸೈನಿಕರು (ವಿಯೆಟ್ ಕಾಂಗ್) ಅಮೆರಿಕದ ಬೃಹತ್ ಸೇನೆಯ ಮುಂದೆ ಮಂಡಿಯೂರಿಲ್ಲ. ಅವರು ದಟ್ಟವಾದ ಕಾಡು ಗಳನ್ನು ಬಳಸಿ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಅಮೆರಿಕಕ್ಕೆ ಸಿಂಹಸ್ವಪ್ನವಾದರು.

ಸುಮಾರು 20 ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ 58000 ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಪ್ರಾಣ ಕಳೆದುಕೊಂಡರು. ದೇಶದ ಒಳಗೇ ಅಮೆರಿಕನ್ ಸರಕಾರದ ವಿರುದ್ಧ ತೀವ್ರ ಪ್ರತಿಭಟನೆಗಳು ಆರಂಭವಾದವು. ಅಂತಿಮವಾಗಿ 1975ರಲ್ಲಿ ಅಮೆರಿಕನ್ ಪಡೆಗಳು ಸೈಗೊನ್ ನಗರದಿಂದ ಹೆಲಿಕಾಪ್ಟರ್ ಹತ್ತಿ ಪ್ರಾಣ ಉಳಿಸಿಕೊಳ್ಳಲು ಓಡಿಹೋಗಬೇಕಾಯಿತು.

ಇಡೀ ವಿಯೆಟ್ನಾಂ ಕಮ್ಯುನಿ ವಶವಾಯಿತು. ಇದು ಅಮೆರಿಕದ ಅಹಂಕಾರಕ್ಕೆ ಬಿದ್ದ ಅತಿ ದೊಡ್ಡ ಪೆಟ್ಟು. ಬಳಿಕ, 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ಉಗ್ರರ ದಾಳಿಯ (9/11) ನಂತರ, ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಭಯೋತ್ಪಾದನೆ ವಿರುದ್ಧ ಜಾಗತಿಕ ಯುದ್ಧ ಘೋಷಿಸಿದರು. ‌

ಅಲ್-ಖೈದಾ ಮತ್ತು ಅದಕ್ಕೆ ಆಶ್ರಯ ನೀಡಿದ್ದ ತಾಲಿಬಾನ್ ಅನ್ನು ನಿರ್ಮೂಲನೆ ಮಾಡಲು ಅಮೆರಿಕ ಅಫಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು. ಅಮೆರಿಕ ಅಫ್ಘಾನಿಸ್ತಾನದಲ್ಲಿ ಬರೋ ಬ್ಬರಿ 20 ವರ್ಷಗಳ ಕಾಲ ಬೀಡುಬಿಟ್ಟಿತ್ತು. ಅಲ್ಲಿ ಪ್ರಜಾಪ್ರಭುತ್ವ ಸರಕಾರವನ್ನು ಸ್ಥಾಪಿಸಿತು, ತನ್ನದೇ ಆದ ಸೈನ್ಯವನ್ನು ತರಬೇತಿಗೊಳಿಸಿತು. ಈ ಯುದ್ಧಕ್ಕಾಗಿ ಅಮೆರಿಕ ಸುರಿದ ಹಣ ಎಷ್ಟು ಗೊತ್ತೇ? ಸುಮಾರು 2 ಟ್ರಿಲಿಯನ್ ಡಾಲರ್ (ಲಕ್ಷ ಕೋಟಿ ರುಪಾಯಿಗಳು)! ಆದರೆ 2021ರಲ್ಲಿ ಅಮೆರಿಕನ್ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ಕಿತ್ತ ತಕ್ಷಣವೇ, ಅಮೆರಿಕ ಬೆಂಬಲಿತ ಸರಕಾರ ನೆಲಕಚ್ಚಿತು. ತಾವು ಯಾರನ್ನು ಸೋಲಿಸಲು ಬಂದಿದ್ದರೋ, ಅದೇ ತಾಲಿಬಾನ್ ಸಂಘಟನೆ ಮತ್ತೆ ಕಬೂಲ್‌ನಲ್ಲಿ ಅಧಿಕಾರ ಹಿಡಿಯಿತು.

ಅಮೆರಿಕದ 20 ವರ್ಷಗಳ ಶ್ರಮ, ಹಣ ಮತ್ತು ಸೈನಿಕರ ಬಲಿ ಸಂಪೂರ್ಣ ವ್ಯರ್ಥವಾಯಿತು. ಇದನ್ನು ಅಮೆರಿಕದ ಆಧುನಿಕ ಇತಿಹಾಸದ ಅತ್ಯಂತ ದೊಡ್ಡ ಮಿಲಿಟರಿ ವೈಫಲ್ಯವೆಂದೇ ವಿಶ್ಲೇಷಿಸ ಲಾಗಿದೆ. ಇನ್ನು, 2003ರಲ್ಲಿ ಅಮೆರಿಕ ಮತ್ತೊಂದು ದೊಡ್ಡ ಸುಳ್ಳನ್ನು ಜಗತ್ತಿಗೆ ಹೇಳಿತು. ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಬಳಿ ಜಾಗತಿಕ ವಿನಾಶಕಾರಿ ಜೈವಿಕ ಮತ್ತು ರಾಸಾಯನಿಕ ಅಸ್ತ್ರ ಗಳಿವೆ ಎಂದು ಸುಳ್ಳು ನೆಪ ಒಡ್ಡಿ ಇರಾಕ್ ಮೇಲೆ ಆಕ್ರಮಣ ಮಾಡಿತು.

ಸದ್ದಾಂ ಹುಸೇನ್ ಸರಕಾರವನ್ನು ಉರುಳಿಸಿ, ಅವರನ್ನು ಗಲ್ಲಿಗೇರಿಸಲಾಯಿತು. ಆದರೆ ಅಮೆರಿಕ ಹೇಳಿದ ಯಾವುದೇ ಜೈವಿಕ ಅಸ್ತ್ರಗಳು ಇರಾಕ್‌ನಲ್ಲಿ ಸಿಗಲೇ ಇಲ್ಲ. ಅಮೆರಿಕ ಇರಾಕ್ ಅನ್ನು ಕ್ರಮಿಸಿತೇ ವಿನಃ ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಅದರಿಂದ ಸಾಧ್ಯವಾಗಲಿಲ್ಲ.

ಬದಲಿಗೆ ಇಡೀ ದೇಶವನ್ನು ಅರಾಜಕತೆಗೆ ತಳ್ಳಿತು. ಇರಾಕ್ʼನ ಸೈನ್ಯವನ್ನು ವಿಸರ್ಜಿಸಿದ್ದರಿಂದ, ಅಲ್ಲಿನ ಅತೃಪ್ತ ಸೈನಿಕರೇ ಸೇರಿಕೊಂಡು ಜಗತ್ತಿನ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆಯಾದ 'ಐಸಿಸ್' (ISIS) ಅನ್ನು ಸ್ಥಾಪಿಸಿದರು. ಅಮೆರಿಕದ ಒಂದು ತಪ್ಪು ನಿರ್ಧಾರ ಇಡೀ ಮಧ್ಯ ಪ್ರಾಚ್ಯ ವನ್ನು ರಕ್ತದ ಮಡುವಿಗೆ ತಳ್ಳಿತು. ಇರಾಕ್ʼನಲ್ಲಿ ಪ್ರಜಾಪ್ರಭುತ್ವವೂ ಬರಲಿಲ್ಲ, ಶಾಂತಿಯೂ ಸಿಗಲಿಲ್ಲ; ಬದಲಿಗೆ ಅಮೆರಿಕಕ್ಕೆ ಅಲ್ಲಿಂದಲೂ ಅಪಮಾನದೊಂದಿಗೆ ಹಿಂದೆ ಸರಿಯಬೇಕಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Vishwavani