Dailyhunt
5 ತಿಂಗಳ ಅಂತರದಲ್ಲಿ ರಿಲೀಸ್‌ ಆಗಲಿವೆ ರಜನಿಕಾಂತ್‌ ನಟನೆಯ ಎರಡು ಬಿಗ್‌ ಬಜೆಟ್‌ ಸಿನಿಮಾಗಳು! ʻತಲೈವಾʼ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ!

5 ತಿಂಗಳ ಅಂತರದಲ್ಲಿ ರಿಲೀಸ್‌ ಆಗಲಿವೆ ರಜನಿಕಾಂತ್‌ ನಟನೆಯ ಎರಡು ಬಿಗ್‌ ಬಜೆಟ್‌ ಸಿನಿಮಾಗಳು! ʻತಲೈವಾʼ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ!

Vishwavani 1 week ago

ಸೂೂಪರ್‌ಸ್ಟಾರ್ʼ ರಜನಿಕಾಂತ್ ಅವರು ನೆಲ್ಸನ್ ದಿಲೀಪ್‌ ಕುಮಾರ್ ನಿರ್ದೇಶನದ 'ಜೈಲರ್ 2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.‌ ಇದು ಅವರ ನಟನೆಯ 172ನೇ ಸಿನಿಮಾ. ಈ ಚಿತ್ರಕ್ಕಾಗಿ ಕಾದುಕುಳಿತಿದ್ದಾರೆ. ಕಳೆದ ವರ್ಷ ಬಂದ ಅವರ ಕೂಲಿ ಅಷ್ಟೇನು ರಂಜಿಸಿರಲಿಲ್ಲ.

ಆದರೆ ಈ ಬಾರಿ ಕೇವಲ ಐದು ತಿಂಗಳ ಅಂತರದಲ್ಲಿ ಎರಡು ಬಿಗ್‌ ಬಜೆಟ್‌ ಸಿನಿಮಾಗಳನ್ನು ರಿಲೀಸ್‌ ಮಾಡುವ ಟಾರ್ಗೆಟ್‌ ಇಟ್ಟುಕೊಂಡಿದ್ದಾರೆ ʻತಲೈವಾʼ. ಆ ಕುರಿತ ಮಾಹಿತಿ ಇಲ್ಲಿದೆ.

75 ಆದರೂ ಎನರ್ಜಿ ಕುಂದಿಲ್ಲ

ರಜನಿಕಾಂತ್‌ ಅವರಿಗೆ ಈಗ ವಯಸ್ಸು 75 ವರ್ಷ. ಆದರೂ ಅವರ ಎನರ್ಜಿ ಮಾತ್ರ ಕುಂದಿಲ್ಲ. ಸದ್ಯ ʻಜೈಲರ್‌ 2ʼ ಸಿನಿಮಾದ ಭಾಗಶಃ ಶೂಟಿಂಗ್‌ ಮುಗಿಸಿರುವ ಅವರು, ಆಗಲೇ ಮುಂದಿನ ಸಿನಿಮಾಗಳ ಕಡೆಗೆ ಗಮನ ನೀಡುತ್ತಿದ್ದಾರೆ. ಅವರು ನಟಿಸಲಿರುವ ಮುಂದಿನ ಒಂದು ಸಿನಿಮಾವನ್ನು ಕಮಲ್‌ ಹಾಸನ್‌ ನಿರ್ಮಾಣ ಮಾಡಿದರೆ, ಮತ್ತೊಂದನ್ನು ಉದಯನಿಧಿ ಸ್ಟಾಲಿನ್‌ ಮಗ ಇನ್ಬನಿಧಿ ಸ್ಟಾಲಿನ್ ನಿರ್ಮಾಣ ಮಾಡಲಿದ್ದಾರೆ.

5 ತಿಂಗಳ ಅಂತರದಲ್ಲಿ ಎರಡು ಸಿನಿಮಾ

ಸದ್ಯ ಭಾರಿ ನಿರೀಕ್ಷೆ ಹುಟ್ಟಿಸಿರುವ ರಜನಿಕಾಂತ್‌ ಅವರ ಜೈಲರ್‌ 2 ಸಿನಿಮಾವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ದಾಖಲೆ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ಸನ್‌ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿದೆ. "ಜೈಲರ್ 2 ಚಿತ್ರದ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಇನ್ನು 2-3 ದಿನಗಳ ಚಿತ್ರೀಕರಣ ಬಾಕಿ ಇದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಲಿದೆ" ಅಂತ ರಜನಿಕಾಂತ್‌ ತಿಳಿಸಿದ್ದಾರೆ.‌

ಆಗಸ್ಟ್‌ನಲ್ಲಿ ಜೈಲರ್‌ 2 ಬಿಡುಗಡೆಯಾದರೆ, ಅದಾಗಿ ಐದು ತಿಂಗಳಿಗೆ, ಅಂದರೆ ಜನವರಿಯ ಸಂಕ್ರಾಂತಿ ಹಬ್ಬಕ್ಕೆ ಕಮಲ್ ಹಾಸನ್ ನಿರ್ಮಾಣದ, 'ಡಾನ್' ಸಿನಿಮಾ ಖ್ಯಾತಿಯ ಸಿಬಿ ಚಕ್ರವರ್ತಿ ನಿರ್ದೇಶನದ ರಜನಿಕಾಂತ್‌ ಅವರ 173ನೇ ಸಿನಿಮಾ ರಿಲೀಸ್‌ ಆಗಲಿದೆ. ಈ ಚಿತ್ರದ ಪ್ರೊಮೋ ಶೂಟಿಂಗ್ ಏಪ್ರಿಲ್ 27ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ. ನಂತರ ಸತತವಾಗಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಚಿತ್ರೀಕರಣವು ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 2027 ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್‌ ಕಮಲ್‌ ಹಾನಸ್‌ ಅವರದ್ದು. ಶೀಘ್ರದಲ್ಲೇ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.

ಹೀಗೆ ಐದು ತಿಂಗಳ ಅಂತರದಲ್ಲಿ ಇವೆರಡೂ ಸಿನಿಮಾಗಳನ್ನು ರಿಲೀಸ್‌ ಮಾಡಲು ಪ್ಲ್ಯಾನ್‌ ಮಾಡಿಕೊಂಡಿರುವ ರಜನಿಕಾಂತ್‌, ಆಗಸ್ಟ್‌ ಕೊನೆಗೆ ಭಾರಿ ನಿರೀಕ್ಷೆ ಹುಟ್ಟಿಸಿರುವ RKxKH ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದು 46 ವರ್ಷಗಳ ನಂತರ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಎಂಬುದು ವಿಶೇಷ.

Dailyhunt
Disclaimer: This content has not been generated, created or edited by Dailyhunt. Publisher: Vishwavani