Dailyhunt Logo
  • Light mode
    Follow system
    Dark mode
    • Play Story
    • App Story
AA23: ಭಾರಿ ಸದ್ದು ಮಾಡಿದ್ದ ಅಲ್ಲು ಅರ್ಜುನ್‌ ನಟನೆಯ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ನಿಂತುಹೋಯ್ತಾ? ಅಸಲಿ ಸತ್ಯ ಇಲ್ಲಿದೆ!

AA23: ಭಾರಿ ಸದ್ದು ಮಾಡಿದ್ದ ಅಲ್ಲು ಅರ್ಜುನ್‌ ನಟನೆಯ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ನಿಂತುಹೋಯ್ತಾ? ಅಸಲಿ ಸತ್ಯ ಇಲ್ಲಿದೆ!

Vishwavani 4 days ago

ಸೋಶಿಯಲ್‌ ಮೀಡಿಯಾದಲ್ಲಿ ಯಾವುದಾದರು ಒಂದು ಸುದ್ದಿ ವೈರಲ್‌ ಆಯ್ತು ಅಂದರೆ, ಅದೇ ನಿಜ ಎಂದು ಬಹುತೇಕತರು ನಂಬಿಬಿಡುತ್ತಾರೆ. ಅದನ್ನೇ ಹಂಚಿಕೊಂಡು ಸಂಭ್ರಮಿಸುತ್ತಾರೆ. ಇದೀಗ ಅಲ್ಲು ಅರ್ಜುನ್‌ ಅವರ ಬಹುನಿರೀಕ್ಷಿತ ಸಿನಿಮಾವೊಂದರ ಬಗ್ಗೆ ಇಂಥದ್ದೇ ಗಾಸಿಪ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಷ್ಟಕ್ಕೂ ಯಾವುದು ಆ ಸಿನಿಮಾ? 'AA23'

ನಿಂತುಹೋಯ್ತಾ ಬಹುನಿರೀಕ್ಷಿತ ಸಿನಿಮಾ?

ಹೌದು, ಅಲ್ಲು ಅರ್ಜುನ್‌ ಮತ್ತು ತಮಿಳಿನ ಸ್ಟಾರ್‌ ನಿರ್ದೇಶಕ ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಘೋಷಣೆ ಆಗಿತ್ತು. ಅದು ಅಲ್ಲು ಅರ್ಜುನ್‌ ಅವರ 23ನೇ ಸಿನಿಮಾವಾಗಿತ್ತು. ಕೆಲ ತಿಂಗಳ ಹಿಂದೆ ಅಫಿಷಿಯಲ್‌ ಆಗಿ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆ ಘೋಷಣೆ ಮಾಡಿತ್ತು. ಆದರೆ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪ ಅಂದ್ರೆ, ಈ ಸಿನಿಮಾ ಬಹುನಿರೀಕ್ಷಿತ ಸಿನಿಮಾವು ನಿಂತುಹೋಗಿದೆ ಎಂಬುದು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ನಿಂತುಹೋಗಿದ್ದು ನಿಜವೇ? ಖಂಡಿತ ಇಲ್ಲ. ಇದೆಲ್ಲಾ ಗಾಸಿಪ್ಪಿಗರ ಕೈಚಳಕ ಅಷ್ಟೇ.

Allu Arjun: ಅಲ್ಲು ಅರ್ಜುನ್ ಬರ್ತ್‌ಡೇ ; ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

ಪ್ರಿ-ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿವೆ

ಕಳೆದ ದಿನದಿಂದಲೂ ಪ್ಯಾನ್-ಇಂಡಿಯಾ ಹೀರೋ ಮತ್ತು ಕ್ರೇಜಿ ನಿರ್ದೇಶಕರೊಬ್ಬರ ಬಿಗ್ ಪ್ರಾಜೆಕ್ಟ್ ಒಂದು ಕೈಬಿಡಲಾಗಿದೆ ಎಂಬ ವದಂತಿ ಜೋರಾಗಿ ಹರಡುತ್ತಿತ್ತು. ನೆಟ್ಟಿಗರು ತಕ್ಷಣವೇ ಇದನ್ನು 'AA23' ಚಿತ್ರಕ್ಕೆ ಲಿಂಕ್ ಮಾಡಲು ಶುರುಮಾಡಿದರು. ಯಾವುದೇ ಅಧಿಕೃತ ಪ್ರಕಟಣೆ ಇಲ್ಲದಿದ್ದರೂ, ಎಲ್ಲರೂ ಇದನ್ನು ನಿಜವೆಂದೇ ನಂಬಿ, ಸುಳ್ಳು ಮಾಹಿತಿಯನ್ನು ಮತ್ತಷ್ಟು ಹರಡಲು ಆರಂಭಿಸಿದರು. ಸದ್ಯ ಆ ರೀತಿ ಏನೂ ಇಲ್ಲ. ಈ ಬಿಗ್‌ ಪ್ಯಾನ್‌ ಇಂಡಿಯಾ ಬಜೆಟ್‌ ಸಿನಿಮಾವು ನಿಂತಿಲ್ಲ. ಸದ್ಯ ಪ್ರಿ-ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿವೆ.

Allu Arjun: ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ಅಲ್ಲು ಅರ್ಜುನ್

ಬರಹಗಾರನಿಂದ ಸಿಕ್ತು ಕ್ಲಾರಿಟಿ

ಬರಹಗಾರ ರತ್ನಕುಮಾರ್ ಈಗ AA23 ಸಿನಿಮಾ ನಿಂತಿಲ್ಲ, ಅದು ಖಂಡಿತಾ ಸೆಟ್ಟೇರಲಿದೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅವರು ಈ ವದಂತಿಗಳು ಅಥವಾ ಊಹಾಪೋಹಗಳ ಬಗ್ಗೆ ನೇರವಾಗಿ ಮಾತನಾಡದಿದ್ದರೂ, ಲೋಕೇಶ್ ಕನಕರಾಜ್ ನಿರ್ದೇಶನದ 'ವಿಕ್ರಮ್' ಸಿನಿಮಾ 4 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ AA23 ಸೆಟ್ಟೇರುವುದು ಕನ್ಫರ್ಮ್ ಎಂದಿದ್ದಾರೆ.

ರತ್ನಕುಮಾರ್‌ ಟ್ವೀಟ್‌

ಹೌದು, ನಿರ್ದೇಶಕ ಲೋಕೇಶ್ ಅವರನ್ನು ಹೊಗಳಿರುವ ರತ್ನಕುಮಾರ್, "ನಾನು AA23 ಚಿತ್ರಕ್ಕಾಗಿ ಇನ್ನು ಕಾಯಲು ಸಾಧ್ಯವಿಲ್ಲ.. ಬೇಗನೇ ಆರಂಭಿಸೋಣ" ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಒಂದು ಸಾಲು ಅಲ್ಲು ಅರ್ಜುನ್‌ ಸಿನಿಮಾ ರದ್ದಾಗಿಲ್ಲ, ಬದಲಿಗೆ ಪ್ರಿ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani