Dailyhunt Logo
  • Light mode
    Follow system
    Dark mode
    • Play Story
    • App Story
Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

Vishwavani 4 months ago

ವಿಘ್ನೇಶ್ ರಾಜ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ 'ಕರ' (Kara) ಬಿಡುಗಡೆಗೆ ಧನುಷ್ (Dhanush) ಸಜ್ಜಾಗುತ್ತಿದ್ದಾರೆ . ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ, ಧನುಷ್ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಪಹಾಸ್ಯಕ್ಕೊಳಗಾಗಿದ್ದ ಘಟನೆ ಬಗ್ಗೆ ವಿವರಿಸಿದ್ದಾರೆ.

ಆದರೆ ಎಷ್ಟೇ ಅಪಹಾಸ್ಯ ಆಗಿದ್ದರೂ (mocked early in his career) ನನ್ನ ಮೇಲೆ ಯಾವಾಗಲೂ ನಂಬಿಕೆ ಇತ್ತು ಎಂದು ಹೇಳಿಕೊಂಡಿದ್ದಾರೆ.

ಧನುಷ್ ಹೇಳಿದ್ದೇನು?

ಸಮಾರಂಭದಲ್ಲಿ, ಧನುಷ್‌ಗೆ ತಮ್ಮ ಪೊಲ್ಲಾಧವನ್ ಚಿತ್ರದ ಸಂಕೇತವಾಗಿ ಬೈಕ್ ನಂಬರ್ ಪ್ಲೇಟ್ ನೀಡಿದಾಗ, ನಟ ಅದನ್ನು ಸ್ಥಳದಲ್ಲಿದ್ದ ಪ್ರೇಕ್ಷಕರಿಗೆ ತೋರಿಸಿ ಮುಗುಳ್ನಕ್ಕರು. ಈ ಆಕ್ಷನ್ ಥ್ರಿಲ್ಲರ್ ಪ್ರಭುಶಂಕರ್ (ಧನುಷ್) ಎಂಬ ವ್ಯಕ್ತಿಯ ಕಥೆ. ಈ ಚಿತ್ರವು ವೆಟ್ರಿಮಾರನ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು , ಬಿಡುಗಡೆಯಾದ ನಂತರ ಹೆಚ್ಚಿನ ಪ್ರಶಂಸೆಯನ್ನು ಪಡೆಯಿತು.ಧನುಷ್ ಈ ಚಿತ್ರ ತಮ್ಮ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಎಂದು ಒಪ್ಪಿಕೊಂಡರು.

Michael Jackson Biopic: ʻಮೈಕೆಲ್ʼ ಪಾತ್ರಕ್ಕೆ ಫರಾಹ್ ಖಾನ್ ಸಾಥ್‌; ಜಾಫರ್ ಜಾಕ್ಸನ್‌ಗೆ ಆಸ್ಕರ್ ಸಲ್ಲಲೇ ಬೇಕು ಎಂದ ಸ್ಟಾರ್‌ ನಿರ್ದೇಶಕಿ!

"ಪೊಲ್ಲಾಧವನ್ ನನಗೆ ಒಂದು ಮಹತ್ವದ ತಿರುವು. ಅದಕ್ಕೂ ಮೊದಲು ಜನರು ನನ್ನನ್ನು ತುಂಬಾ ಸಣ್ಣಗೆ ಇದ್ದೀಯಾ ಎಂದು ಕರೆಯುತ್ತಿದ್ದರು. ನಾನು ಇದ್ದಕ್ಕಿದ್ದಂತೆ ಸಿಕ್ಸ್ ಪ್ಯಾಕ್‌ನೊಂದಿಗೆ ಕಾಣಿಸಿಕೊಂಡಾಗ, ಜನರು ನನ್ನ ದೇಹಕ್ಕೆ ಚಪ್ಪಾಳೆ ತಟ್ಟಿದ್ದು ಅದೇ ಮೊದಲು. ಶಿಳ್ಳೆಗಳು ಕೇಳಿಬಂದವು. ಇದು ನನಗೆ ವಿಶೇಷ ಚಿತ್ರವಾಗಿತ್ತು" ಎಂದು ಹೇಳಿದರು.

ಅದೇ ಕಾರ್ಯಕ್ರಮದಲ್ಲಿ, ನಟ 'ನೀವು ಏನು ಯೋಚಿಸುತ್ತೀರೋ, ನೀವು ಆಗುತ್ತೀರಿ'. ಯಶಸ್ಸಿನ ಬಗ್ಗೆ ನಮಗೆ ಯಾವುದೇ ಸಂದೇಹ ಇರಬಾರದು. ಅದನ್ನು ನಿಜವಾಗಿಯೂ ನಾವೇ ವ್ಯಕ್ತಪಡಿಸಬೇಕು. 2002-2003ರ ಸುಮಾರಿಗೆ ನನಗೆ ರಾಷ್ಟ್ರೀಯ ಪ್ರಶಸ್ತಿ ಸಿಗುತ್ತದೆ ಎಂದು ನಾನು ಅವರಿಗೆ ಹೇಳಿದ್ದರೆ ಎಲ್ಲರೂ ನಗಬಹುದಿತ್ತು. ಆದರೆ ಒಂದು ದಿನ ನಾನು ರಾಷ್ಟ್ರೀಯ ಪ್ರಶಸ್ತಿ ಗೆದ್ದು ಪ್ರೂವ್‌ ಮಾಡಿದೆ ಎಂದು ಈ ವೇಳೆ ಹೇಳಿದ್ದಾರೆ.

ಆಡುಕಲಂ (2010) ಚಿತ್ರದಲ್ಲಿ ಜಾಕಿಯಾಗಿ ನಟಿಸಿದ್ದಕ್ಕಾಗಿ ಧನುಷ್ ತಮ್ಮ ಮೊದಲ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಅಸುರನ್ (2019) ಚಿತ್ರಕ್ಕಾಗಿ ಅದೇ ವಿಭಾಗದಲ್ಲಿ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು.

ಕರಾ ಚಿತ್ರದಲ್ಲಿ ಮಮಿತಾ ಬೈಜು ಮತ್ತು ಸೂರಜ್ ವೆಂಜರಮೂಡು ಕೂಡ ನಟಿಸಿದ್ದಾರೆ. ವಿಘ್ನೇಶ್ ರಾಜಾ ನಿರ್ದೇಶನದ 'ಕರ' ಚಿತ್ರವನ್ನು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ನಿರ್ಮಿಸಿದ್ದು, ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

Mythological films: ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಚಲನಚಿತ್ರಗಳದ್ದೇ ಹವಾ; ಬಾಕ್ಸ್ ಆಫೀಸ್‌ನಲ್ಲಿ ಹೊಸ ಟ್ರೆಂಡ್!

ಥೇಣಿ ಈಶ್ವರ್ ಛಾಯಾಗ್ರಹಣ ನಿರ್ವಹಿಸಿದರೆ, ಶ್ರೀಜಿತ್ ಸಾರಂಗ್ ಸಂಕಲನ ನಿರ್ವಹಿಸಿದ್ದಾರೆ. ಇದು ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani