Dailyhunt Logo
  • Light mode
    Follow system
    Dark mode
    • Play Story
    • App Story
ಅದ್ದೂರಿಯಾಗಿ ಬಿಡುಗಡೆಯಾಯ್ತು 'ಕರಾವಳಿ' ಟ್ರೈಲರ್: ಕಂಬಳದ ಕ್ರೀಡೆ, ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ

ಅದ್ದೂರಿಯಾಗಿ ಬಿಡುಗಡೆಯಾಯ್ತು 'ಕರಾವಳಿ' ಟ್ರೈಲರ್: ಕಂಬಳದ ಕ್ರೀಡೆ, ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ

Vishwavani 3 weeks ago

ಕರಾವಳಿʼ ಸಿನಿಮಾದ ಅಧಿಕೃತ ಟ್ರೈಲರ್‌ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ಭಾರಿ ಕುತೂಹಲ ಮೂಡಿಸಿದ್ದ 'ಕರಾವಳಿ' ಚಿತ್ರದ ಭರ್ಜರಿ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬೆಳಗ್ಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ ಟ್ರೈಲರ್ ಪ್ರೀಮಿಯರ್ ಮಾಡುವ ಮೂಲಕ ಚಿತ್ರತಂಡ ಧಮಾಕಾ ಎಬ್ಬಿಸಿತ್ತು.

ಅದೇ ದಿನ ಸಂಜೆ ಯೂಟ್ಯೂಬ್‌ನಲ್ಲಿ ಆಫಿಷಿಯಲ್ ಟ್ರೈಲರ್ ಅನ್ನು ಹಂಚಿಕೊಳ್ಳಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ.

ಕಂಬಳದ ಕ್ರೀಡೆಯೇ ಹೈಲೈಟ್

ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯ ಕ್ರೀಡೆಯಾದ 'ಕಂಬಳ'ವನ್ನು ಅತ್ಯಂತ ಅದ್ಭುತವಾಗಿ, ರೋಮಾಂಚಕಾರಿಯಾಗಿ ಕಟ್ಟಿಕೊಡಲಾಗಿದೆ. ಸಿನಿಮಾಕ್ಕಾಗಿ ಸುಮಾರು 380ಕ್ಕೂ ಹೆಚ್ಚು ಕೋಣಗಳನ್ನು ಬಳಸಿ ಚಿತ್ರೀಕರಣ ನಡೆಸಿರುವುದು ವಿಶೇಷ.

ʻಕರಾವಳಿʼ ಚಿತ್ರಕ್ಕಾಗಿ ಪ್ರಜ್ವಲ್‌ ದೇವರಾಜ್ ಪಡೆದ ಸಂಭಾವನೆ ಎಷ್ಟು? ಫ್ಯಾನ್ಸ್‌ ಗಲಾಟೆ ಬಗ್ಗೆ ರಾಜ್‌ ಬಿ. ಶೆಟ್ಟಿ ಹೇಳಿದ್ದೇನು?

ಹೆಚ್ಚಿದ ಕುತೂಹಲ, ಪ್ರಜ್ವಲ್ ಡಬ್ಬಿಂಗ್ ಗೊಂದಲ!

ಟ್ರೈಲರ್ ವೀಕ್ಷಿಸಿದ ಪ್ರೇಕ್ಷಕರಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಡುವಿನ ಸಂಬಂಧವೇನು? ಇಬ್ಬರ ನಡುವೆ ನಡೆಯುವ ಜುಗಲ್‌ಬಂದಿ ಎಂಥದ್ದು? ಎನ್ನುವ ಕುತೂಹಲ ದುಪ್ಪಟ್ಟಾಗಿದೆ. ಚಿತ್ರತಂಡ ಕಥೆಯ ಸಸ್ಪೆನ್ಸ್ ಅನ್ನು ಹಾಗೇ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ, ಟ್ರೈಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅವರು ಏಕೆ ಡಬ್ಬಿಂಗ್ ಮಾಡಿಲ್ಲ ಎಂಬ ಗೊಂದಲ, ಗಲಾಟೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಅದಾಗ್ಯೂ ಟ್ರೈಲರ್ ಮಾತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಯಾರೆಲ್ಲಾ ನಟಿಸಿದ್ದಾರೆ?

ಉಳಿದಂತೆ ರಮೇಶ್ ಇಂದಿರ, ಮಿತ್ರ, ಸಂಪದಾ, ಸುಷ್ಮಿತಾ ಭಟ್ ಹಾಗೂ 'ಸಿದ್ಲಿಂಗು' ಶ್ರೀಧರ್ ಮುಂತಾದ ಪ್ರತಿಭಾವಂತ ಕಲಾವಿದರು ಇಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಹಾಗೂ ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲರಿಂದ ಭರಪೂರ ಮೆಚ್ಚುಗೆ ಗಳಿಸುತ್ತಿದೆ.

'ಗಾಣಿಗ ಫಿಲ್ಮ್ಸ್' ಮತ್ತು 'ವಿಕೆ ಫಿಲ್ಮ್ಸ್' ಜಂಟಿಯಾಗಿ ಕರಾವಳಿ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಅರ್ಪಿಸುವುದರ ಜೊತೆಗೆ ಅದ್ಧೂರಿಯಾಗಿ ವಿತರಣೆ ಮಾಡುತ್ತಿದೆ. ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಮಾಡಿರುವ 'ಕರಾವಳಿ' ಸಿನಿಮಾ ಮುಂಬರುವ ಜುಲೈ 24 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani