ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ರೋಚಕ ಟ್ವಿಸ್ಟ್ ಪಡೆದು ಕಥೆ ಸಾಗುತ್ತಿದೆ. ಸೀರಿಯಲ್ ಅಂತಿಮ ಹಂತದ ಎಪಿಸೋಡ್‌ಗಳು ಪ್ರಸಾರವಾಗುತ್ತಿರುವಂತೆ ಕಾಣುತ್ತಿದೆ. ಗೌತಮ್ ದಿವಾನ್‌ಗೆ (Gowtham diwan) ಆರೋಗ್ಯ ಹಾಳಾಗಿದೆ ಎಂಬ ಎಳೆಯನ್ನೂ ತೆಗೆದುಕೊಂಡು ಕಥೆ ಮಾಡಲಾಗಿದೆ.
ಆದರೆ ಈ ತಿರುವು ಅನೇಕರಿಗೆ ಇಷ್ಟವಾಗುತ್ತಿಲ್ಲ. ಇದೀಗ ಹೊಸ ಪ್ರೋಮೋದಲ್ಲಿಯೂ (New Promo) ಹೊಸ ಹಿಂಟ್ ಕೊಟ್ಟಂತಿದೆ.
ಭೂಮಿಯ ಚಿಂತೆ ಇದು!
ಹೌದು ಭೂಮಿ ಹಾಗೂ ಗೌತಮ್ ಈಗ ಸಂತೋಷದಲ್ಲಿ ಜೀವನ ಕಳೆಯಲು ಮುಂದಾಗಿದ್ದಾರೆ. ಅದ್ಯಾಕೋ ಏನೋ ಭೂಮಿಗೆ ಕೆಟ್ಟ ಆಲೋಚನೆ ಬಂದಿದೆ. ಎಲ್ಲ ಸರಿ ಆಗೋ ಹೊತ್ತಲ್ಲಿ ಇನ್ನೇನಾದರೂ ಸಮಸ್ಯೆ ಬರುತ್ತಾ ಅನ್ನೋ ಚಿಂತೆ ಭೂಮಿಯದ್ದು.
ಅಮೃತಧಾರೆಯ ಇತ್ತೀಚಿನ ಸಂಚಿಕೆಗಳನ್ನ ನೋಡುತ್ತಿದ್ದರೆ ಈ ಧಾರಾವಾಹಿ ಮುಗಿಯುತ್ತಿದೆಯಾ ಎಂಬ ಅನುಮಾನವೂ ಕಾಡುತ್ತಿದೆ. ಅನೇಕರು ಇದೇ ಮಾತನ್ನ ಹೇಳುತ್ತಿದ್ದಾರೆ. ಜೀ ಕನ್ನಡದಲ್ಲಿ ಹೊಸ ಧಾರಾವಾಹಿಗಳು ಬರಲು ಸಿದ್ಧವಾಗಿದ್ದು, ಅಮೃತಧಾರೆ ಮತ್ತು ಬ್ರಹ್ಮಗಂಟು ಸೀರಿಯಲ್‌ಗಳು ಮುಕ್ತಾಯಗೊಳ್ಳಬಹುದು ಎಂದು ವೀಕ್ಷಕರು ಅಂದಾಜು ಮಾಡುತ್ತಿದ್ದಾರೆ.
Kiara Advani: 'ಟಾಕ್ಸಿಕ್' ಚಿತ್ರದ 'ತಬಾಹಿ' ವಿಡಿಯೋ ಸಾಂಗ್ ಇಂದೇ ರಿಲೀಸ್!
ಭೂಮಿಗೆ ಸರ್‌ಪ್ರೈಸ್ ಕೊಟ್ಟ ಗೌತಮ್
ಭೂಮಿಕಾ ಒಲವಿನಧಾರೆಗೆ ಪುಸ್ತಕ ರೂಪ ಕೊಟ್ಟು, ಸರ್‌ಪ್ರೈಸ್ ನೀಡಲು ಗೌತಮ್ ನಿರ್ಧಾರ ಮಾಡುತ್ತಾನೆ. ಭೂಮಿಕಾಳ ಡೈರಿಯನ್ನು ಪುಸ್ತಕ ರೂಪದಲ್ಲಿ ತರಲು ಹಿರಿಯ ಪತ್ರಕರ್ತ ಹರೀಶ್ ನಾಗರಾಜು, ಜೋಗಿ ಅವರ ಎಂಟ್ರಿಯಾಗಿದೆ. ಈ ಎಲ್ಲಾ ತಿರುವುಗಳು ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಿಸಿವೆ.
ಜೋಗಿ ಸರ್ ಎಂದರೆ ಸೀರಿಯಲ್ನಲ್ಲಿ ಭೂಮಿಕಾಗೆ ಸಿಕ್ಕಾಪಟ್ಟೆ ಆಪ್ತರು. ಇದೇ ಕಾರಣಕ್ಕೆ ಈ ಹಿಂದೆಯೂ ಗೌತಮ್ ಇವರನ್ನು ಪರಿಚಯ ಮಾಡಿಸಿ ಭೂಮಿಕಾಗೆ ಸರ್‌ಪ್ರೈಸ್ ನೀಡಿದ್ದರೆ, ಇದೀಗ ಅಮೃತಧಾರೆ ಪುಸ್ತಕದ ಬಿಡುಗಡೆಗೂ ಅವರನ್ನೇ ಆಹ್ವಾನಿಸಿರುವ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಗೌತಮ್ಗೆ ಏನೋ ಕಾಯಿಲೆ ಇರುವಂತೆ ತೋರಿಸಲಾಗಿದೆ.

