ಜೀ ಕನ್ನಡದ (Zee Kannada) ಅಮೃತಧಾರೆ ಸೀರಿಯಲ್‌ನಲ್ಲಿ (Amruthadhaare Serial) ಮಹಾಸತ್ಯದ ಸ್ಪೋಟ ಯಾವಾಗ ಅನಾವರಣಗೊಳ್ಳೋತ್ತೇ ಅನ್ನೋ ಕುತೂಹಲ ವೀಕ್ಷರಲ್ಲಿದೆ. ನಕಲಿ ಜೋಡಿಗೆ ಗೌತಮ್ ಬಿಗ್ ಶಾಕ್ ನೀಡಿದ್ದು, ಡಿಎನ್‌ಎ ಪರೀಕ್ಷೆ ಮಾಡುವಂತೆ ಸವಾಲು ಹಾಕಿದ್ದಾನೆ.
ಅಷ್ಟೇ ಅಲ್ಲ ಸಾಫ್ಟ್ ಆಗಿ ಮನವಿಯನ್ನೂ ಮಾಡಿದ್ದಾನೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಮಿಂಚು (Minchu) ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ ಆಗಿದೆ.
ಹೌದು. ಈಗ ಧಾರಾವಾಹಿಯಲ್ಲಿ ಮಿಂಚು ಜನ್ಮರಹಸ್ಯ ಬಗ್ಗೆಯೇ ಕಥೆ ಸಾಗುತ್ತಿದೆ. ಮಿಂಚು ಜನ್ಮರಹಸ್ಯ ತಿಳಿದಿರುವ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ. ಅಪಾಯದಲ್ಲಿದ್ದ ಮಗಳನ್ನು ರಕ್ಷಿಸಲು ಭೂಮಿಕಾ ಚಾಮುಂಡಿಯಾಗಿ ಬದಲಾಗಿ, ಅಪಹರಣಕಾರರನ್ನು ಹೊಡೆದುರುಳಿಸಿದ್ದನು. ಮಿಂಚು ಕಿಡ್ನ್ಯಾಪ್ ಆಗಿದ್ದರಿಂದ ಗೌತಮ್ ಸಹ ಜೈಲಿನಿಂದ ಹೊರ ಬಂದಿದ್ದಾನೆ.
ಈಗ ಎಲ್ಲದರ ನಡುವೆ ಮಿಂಚು ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ ಆಗಿದೆ. ಕರ್ಣ, ಪಾರು, ಶಿವು, ಭೂಮಿ, ಗೌತಮ್ ಈಗ ಒಂದಾಗಿದ್ದಾರೆ.
Bigg Boss Kannada 13: ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ವಾಹಿನಿಯಿಂದ ವಿಶೇಷ ಸೂಚನೆ!
ಗೌತಮ್ ಬೇಸರ
ದುಡ್ಡು ಬೇಕಾ? ಮನೆ ಬೇಕಾ? ಕಾರು ಬೇಕಾ? ಅಂತ ಕೇಳಿದ್ದೆ. ಮಿಂಚುನಾ ಮಾತ್ರ ದೂರ ಮಾಡಬೇಡಿ ಎಂದು ಗೌತಮ್, ನಕಲಿ ತಂದೆ ಬಳಿ ಮನವಿ ಮಾಡಿರೋದಾಗಿ ಭೂಮಿ ಬಳಿ ಹೇಳಿದ್ದಾನೆ. ಮಿಂಚು ವಿಷಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಭಯವಾಗುತ್ತಿದೆ ಎಂದಿದ್ದಾನೆ ಗೌತಮ್. ಮಿಂಚು ನೋಡ್ತಾ ನೋಡ್ತಾ ನಮ್ಮ ಜೀವನದ ಭಾಗ ಆಗಿ ಹೋದಳು. ಅವಳು ಇಲ್ಲದೇ ಇರೋ ಮನೆಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ಹೊರ ಹಾಕಿದ್ದಾನೆ ಗೌತಮ್.
ಅಣ್ಣಯ್ಯ ಧಾರಾವಾಹಿ ಪಾರು, ಇನ್ನೊಂದು ಅವಳಿ ಮಕ್ಕಳ ಡೆಲಿವರಿ ಮಾಡುವ ಸಮಯದಲ್ಲಿ ಭೂಮಿಕಾ ಮೇಡಂ ನೆನಪು ಮಾಡಿಕೊಳ್ಳುತ್ತಾಳೆ. ಭೂಮಿಕಾ ಮೇಡಂಗೂ ಅವಳಿ ಮಕ್ಕಳಾಗಿತ್ತು, ಆದರೆ ಒಂದು ಮಗು ಕಾಣೆಯಾಗಿತ್ತು.
ಆದರೆ, ಆ ಮಗುವಿನ ಕೈಯಲ್ಲಿ ತ್ರಿಶೂಲದ ಮಚ್ಚೆ ಇತ್ತು ಅನ್ನೋದನ್ನು ನೆನಪಿಸಿಕೊಳ್ಳುತ್ತಾಳೆ. ಮಗುವಿನ ಬಗ್ಗೆ ತಿಳಿಯಲು ಭೂಮಿಕಾಗೆ ಫೋನ್ ಮಾಡುವ ಪಾರು, ಮಗುವಿನ ಬಗ್ಗೆ ವಿಚಾರಿಸುತ್ತಾಳೆ. ಮಗುವಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಭೂಮಿಕಾ ಹೇಳುತ್ತಾಳೆ. ಆ ಸಂದರ್ಭದಲ್ಲಿ ಪಾರು ಮೇಡಂ ಖಂಡಿತವಾಗಿಯೂ ನಿಮ್ಮ ಮಗು ಶೀಘ್ರದಲ್ಲಿ ನಿಮ್ಮ ಕೈ ಸೇರಲಿದೆ ಎನ್ನುತ್ತಾಳೆ
ಕಾಡಿನಲ್ಲಿ ಕಳೆದು ಹೋಗಿದ್ದ ಭೂಮಿಕಾಗೆ ಡೆಲಿವರಿ ಮಾಡಿಸಿದ್ದು ಡಾಕ್ಟರ್ ಕರ್ಣ ಮತ್ತು ಪಾರು. ಹಾಗಾಗಿ ಅವರಿಂದಲೇ ಭೂಮಿಕಾ-ಗೌತಮ್ ಮಗು ಮಿಂಚು ಎನ್ನುವ ವಿಷಯ ರಿವೀಲ್ ಆಗುವ ಎಲ್ಲಾ ಸಾಧ್ಯತೆ. ಇದೆ.
Amruthadhaare Serial: ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ - ಭೂಮಿ!
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

