Dailyhunt Logo
  • Light mode
    Follow system
    Dark mode
    • Play Story
    • App Story
Amruthadhaare Serial: ಸುನಿ ಕಥೆ ಮುಗಿಸಲು ಸಂಚು ಹೂಡಿದ ಜೈದೇವ್‌! ಆನಂದ್‌ ಶಾಕ್‌

Amruthadhaare Serial: ಸುನಿ ಕಥೆ ಮುಗಿಸಲು ಸಂಚು ಹೂಡಿದ ಜೈದೇವ್‌! ಆನಂದ್‌ ಶಾಕ್‌

Vishwavani 2 months ago

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ತಿರುವು ಪಡೆದುಕೊಂಡಿದೆ. ಜೈದೇವ್‌ಗೆ ಗೌತಮ್‌ ಎಷ್ಟೇ ವಾರ್ನ್‌ ಮಾಡಿದ್ದರೂ ಬದಲಾದಂತಿಲ್ಲ. ತನ್ನ ಕುತಂತ್ರ ಬುದ್ದಿಯನ್ನು ಪ್ರದರ್ಶಿಸುತ್ತಲೇ ಇದ್ದಾನೆ.

ಹನಿಮೂನ್ಗೆ ಹೊರಟ ಮಲ್ಲಿ ಮತ್ತು ಸುನಿಗೆ ಕಂಟಕ ಆಗಿದ್ದಾನೆ ಜೈದೇವ್‌ (Jaidev). ಸುನಿ ಕಥೆ ಮುಗಿಸಬೇಕು ಅಂತ ರೌಡಗಳನ್ನ ಛೂ ಬಿಟ್ಟಿದ್ದಾನೆ.

ಜೈದೇವ್‌ ಇನ್ನೂ ಮಾಸ್ಟರ್‌ ಪ್ಲ್ಯಾನ್‌

ಮಲ್ಲಿ ಮದುವೆ ಬಳಿಕ ಗೌತಮ್‌ ಕೆಲವು ಹನಿಮೂನ್‌ ಸ್ಥಳಗಳನ್ನು ಆಯ್ಕೆ ಮಾಡಿ ಇಟ್ಟಿದ್ದ. ಆಗ ಮಲ್ಲಿ ಕೂಡ ಒಂದು ಡಿಮ್ಯಾಂಡ್‌ ಇಟ್ಟಿದ್ದಾಳೆ. ನಾವು ಹನಿಮೂನ್‌ಗೆ ಹೋಗಬೇಕು ಅಂದರೆ ಭೂಮಿಕಾ ಹಾಗೂ ಗೌತಮ್‌ ಕೂಡ ಬರಬೇಕು ಎನ್ನುತ್ತಾಳೆ. ಇತ್ತ ಇವರು ಸಂತೋಷದಲ್ಲಿ ಇದ್ದರೆ, ಅತ್ತ ಜೈದೇವ್‌ ಇನ್ನೂ ಮಾಸ್ಟರ್‌ ಪ್ಲ್ಯಾನ್‌ ಮಾಡ್ತಾನೆ ಇದ್ದಾನೆ.

Reels Ajji: ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಸೂರಜ್; ಮುತ್ತಜ್ಜಿ ಅಂತಿಮ ಆಸೆ ಏನಾಗಿತ್ತು?

ಸುನಿ ಕಥೆ?

ಹನಿಮೂನ್‌ಗೆ ಭೂಮಿಕಾ ಹಾಗೂ ಗೌತಮ್‌ ಕೂಡ ಹೋಗಿದ್ದಾರೆ. ತಮ್ಮ ಹನಿಮೂನ್‌ ದಿನಳನ್ನು ನೆಎಸಿಕೊಂಡು ಖುಷ್‌ ಆಗಿದ್ದಾರೆ. ಅತ್ತ ಆನಂದ್‌ ಬಳಿ ಮಾವ ಬಂದು ಜೈದೇವ್‌ ಕುಂತ್ರವನ್ನು ರಿವೀಲ್‌ ಮಾಡಿದ್ದಾನೆ. ಸುನಿಯನ್ನ ಮುಗಿಸಲು ರೌಡಿಗಳನ್ನು ಛೂ ಬಿಟ್ಟಿದ್ದಾನೆ ಎಂದು ಹೇಳಿದ್ದಾನೆ. ಈ ಸುದ್ದಿ ಕೇಳಿ ಆನಂದ್‌ ಶಾಕ್‌ ಆಗಿದ್ದಾನೆ.

ಇದೀಗ ಸುನಿ ಪ್ರಾಣಾಪಾಯಕ್ಕೆ ತೊಂದರೆ ಆಗುತ್ತಾ? ಗೌತಮ್‌ ಈ ಬಗ್ಗೆ ಕಣ್ಣಿಟ್ಟಿದ್ದಾನಾ? ಗೌತಮ್‌ ಮುಂದಿನ ನಡೆಯೇನು? ಆನಂದ್‌ ಈ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾನೆ? ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani