Dailyhunt Logo
  • Light mode
    Follow system
    Dark mode
    • Play Story
    • App Story
ಅನಯಾ ಬಂಗೇರ್‌ಗೆ ಮಹಿಳಾ ತಂಡದಲ್ಲಿ ಆಡಲು ಅವಕಾಶ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಟೀಕಿಸಿದ ಮರಿಜಾನ್ನೆ ಕಾಪ್‌

ಅನಯಾ ಬಂಗೇರ್‌ಗೆ ಮಹಿಳಾ ತಂಡದಲ್ಲಿ ಆಡಲು ಅವಕಾಶ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಟೀಕಿಸಿದ ಮರಿಜಾನ್ನೆ ಕಾಪ್‌

Vishwavani 2 weeks ago

ಸಿಡ್ನಿ, ಆ.28: ಅನಯಾ ಬಂಗಾರ್ ಅವರನ್ನು ಆಸ್ಟ್ರೇಲಿಯಾದಲ್ಲಿ ಮಹಿಳಾ ಕ್ರಿಕೆಟ್ ಆಡಲು ಅನುಮತಿ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರವನ್ನು ದಕ್ಷಿಣ ಆಫ್ರಿಕಾದ ತಾರೆ ಮರಿಜಾನ್ನೆ ಕಾಪ್ ಟೀಕಿಸಿದ್ದಾರೆ, ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾವು ಆಸ್ಟ್ರೇಲಿಯಾದಾದ್ಯಂತ ಮಹಿಳಾ ಸಮುದಾಯ ಮತ್ತು ಪ್ರೀಮಿಯರ್ ಕ್ರಿಕೆಟ್ ಆಡಲು ಅನುಮತಿ ನೀಡಿದ ನಂತರ ಮರಿಜಾನ್ನೆ ಕಾಪ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ್ದಾರೆ.

"ಇದು ಸಂಪೂರ್ಣವಾಗಿ ಹಾಸ್ಯಾಸ್ಪದ, ಇದನ್ನು ಅನುಮತಿಸಬಾರದು" ಎಂದು ಕಾಪ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಮತ್ತು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಯೋಜನೆಗಳ ಬಗ್ಗೆ ಅನಯಾ ಸಾರ್ವಜನಿಕವಾಗಿ ಮಾತನಾಡಿದ ಕೆಲವು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ.

ಕಾಪ್‌ ಈ ನಿರ್ಧಾರದ ವಿರುದ್ಧ ಮಾತನಾಡಿದ ಮೊದಲ ಮಹಿಳಾ ಕ್ರಿಕೆಟ್‌ ಆಟಗಾರ್ತಿ. ಒಂದು ದಶಕಕ್ಕೂ ಹೆಚ್ಚು ಕಾಲ ಎಲ್ಲಾ ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ್ತಿಯಾಗಿರುವ ಕಾಪ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಫ್ರಾಂಚೈಸಿ ಸ್ಪರ್ಧೆಗಳ ಮೂಲಕ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯ ಭಾಗವಾಗಿದ್ದಾರೆ.

ಲಿಂಗ ಪರಿವರ್ತನೆಗೂ ಮುನ್ನ ಆರ್ಯನ್ ಬಂಗಾರ್ ಆಗಿದ್ದ ಅವರು, ದೇಶಿಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿಯೂ ಪ್ರದರ್ಶನ ತೋರಿದ್ದರು. 19 ವರ್ಷದೊಳಗಿನವರ ದೇಶಿಯ ಕ್ರಿಕೆಟ್‌ ಸೇರಿ ವಿವಿಧ ಕ್ಲಬ್‌ಗಳ ಪರವಾಗಿಯೂ ಆಡಿದ್ದರು. 2019 ಹಾಗೂ 2020ರಲ್ಲಿ ಮುಂಬೈ ಅಂಡರ್-19 ತಂಡದಲ್ಲಿದ್ದ ತಾರಾ ಆಟಗಾರರಾದ ಸರ್ಫರಾಜ್ ಖಾನ್ ಹಾಗೂ ಮುಶೀರ್ ಖಾನ್ ಅವರ ಜತೆಗೆ ಡ್ರೆಸ್ಸಿಂಗ್ ರೂಮ್‌ ಹಂಚಿಕೊಂಡಿದ್ದರು. ಆ ಬಳಿಕ ಅವರು 2023 ರಲ್ಲಿ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಪ್ರಾರಂಭಿಸಿದ್ದರು ಮತ್ತು ನಂತರ 2026 ರಲ್ಲಿ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಿದರು.

ʻಕೇವಲ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲʼ: ಭಾರತ ತಂಡವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌!

19 ವರ್ಷದೊಳಗಿನವರ 'ಕೂಚ್ ಬೆಹಾರ್' ಟೂರ್ನಿಯಲ್ಲಿ ಪುದುಚೇರಿ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಇವರು, 5 ಪಂದ್ಯಗಳಲ್ಲಿ 300 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕ (150 ರನ್‌) ಹಾಗೂ 2 ಅರ್ಧ ಶತಕ ಸೇರಿವೆ. ಇದೇ ಟೂರ್ನಿಯಲ್ಲಿ ಸ್ಪಿನ್ ಬೌಲಿಂಗ್ ಮಾಡುವ ಮೂಲಕ 5 ಪಂದ್ಯಗಳಲ್ಲಿ 20 ವಿಕೆಟ್ ಪಡೆದುಕೊಂಡಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾ ಈಗ ಅವರಿಗೆ ಎಲ್ಲಾ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಮಹಿಳಾ ಸಮುದಾಯ ಮತ್ತು ಪ್ರೀಮಿಯರ್ ಕ್ರಿಕೆಟ್ ಆಡಲು ಅನುಮತಿ ನೀಡಿದೆ. ಆದರೂ ಯಾವುದೇ ತಂಡದಲ್ಲಿ ಸ್ಥಾನ ಖಚಿತವಾಗಿಲ್ಲ ಎಂದು ಅನಯಾ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani