Dailyhunt Logo
  • Light mode
    Follow system
    Dark mode
    • Play Story
    • App Story
ಅಂದು ಶಾರುಖ್‌ ನಟನೆಯ ʻಜೀರೋʼ ಎದುರು ಗೆದ್ದು ಅಬ್ಬರಿಸಿದ್ದ ಯಶ್‌;‌ ಮತ್ತೆ ʻಟಾಕ್ಸಿಕ್‌ʼ ಮೂಲಕ ʻಕಿಂಗ್‌ಖಾನ್‌ʼಗೆ ಠಕ್ಕರ್‌ ಕೊಡ್ತಾರಾ ʼರಾಕಿ ಭಾಯ್‌ʼ?

ಅಂದು ಶಾರುಖ್‌ ನಟನೆಯ ʻಜೀರೋʼ ಎದುರು ಗೆದ್ದು ಅಬ್ಬರಿಸಿದ್ದ ಯಶ್‌;‌ ಮತ್ತೆ ʻಟಾಕ್ಸಿಕ್‌ʼ ಮೂಲಕ ʻಕಿಂಗ್‌ಖಾನ್‌ʼಗೆ ಠಕ್ಕರ್‌ ಕೊಡ್ತಾರಾ ʼರಾಕಿ ಭಾಯ್‌ʼ?

Vishwavani 3 months ago

ಟ ಯಶ್ ಅವರಿಗೆ 'ಕೆಜಿಎಫ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತು. 2018ರ ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆಯಾದಾಗ, ಅಂದು ಎದುರಾಳಿಯಾಗಿ ಬಂದಿದ್ದು ಬಾಲಿವುಡ್‌ನ ಶಾರುಖ್ ಖಾನ್ ನಟನೆಯ 'ಜೀರೋ' ಸಿನಿಮಾ!

ಆದರೆ ಶಾರುಖ್ ಚಿತ್ರವನ್ನು ಹಿಂದಿಕ್ಕಿ ಯಶ್ ಸಿನಿಮಾ ವಿಶ್ವಮಟ್ಟದಲ್ಲಿ ಅಬ್ಬರಿಸಿತ್ತು. ಈಗ ಇತಿಹಾಸ ಮರುಕಳಿಸುವ ಲಕ್ಷಣಗಳು ಕಾಣುತ್ತಿದ್ದು, ಡಿಸೆಂಬರ್‌ನಲ್ಲಿ ಯಶ್ ಮತ್ತು ಶಾರುಖ್ ಖಾನ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಟಾಕ್ಸಿಕ್‌ ಸಿನಿಮಾಕ್ಕೆ ಸಿಕ್ಕಿದೆ ಹೊಸ ರಿಲೀಸ್‌ ಡೇಟ್?

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾವು ಡಿಸೆಂಬರ್ 24ರಂದು ತೆರೆಗೆ ಬರಲಿದೆಯಂತೆ. ವಿಶೇಷವೆಂದರೆ, ಅದೇ ದಿನದಂದು ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಕಿಂಗ್' ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಈ ಹಿಂದೆಯೇ ಶಾರುಖ್‌ ಟೀಮ್‌ ರಿಲೀಸ್ ಡೇಟ್‌ ಅನ್ನು ಘೋಷಿಸಿದೆ. ಇದೀಗ 8 ವರ್ಷಗಳ ನಂತರ ಇಬ್ಬರ ನಡುವೆ ಮತ್ತೊಂದು ಹಂತದ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ ಎಂದು ಸಿನಿಪ್ರಿಯರು ನಿರೀಕ್ಷೆ ಮಾಡುತ್ತಿದ್ದಾರೆ.

H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್

ಪದೇಪದೇ ಪೋಸ್ಟ್‌ಪೋನ್‌ ಆಗುತ್ತಿರುವ 'ಟಾಕ್ಸಿಕ್'

'ಟಾಕ್ಸಿಕ್ʼ ಸಿನಿಮಾವನ್ನು ಮಾರ್ಚ್ 19ಕ್ಕೆ ರಿಲೀಸ್‌ ಮಾಡಬೇಕಿತ್ತು. ಆದರೆ ಅದನ್ನು ಜೂನ್ 4ಕ್ಕೆ ಮುಂದೂಡಲಾಯಿತು. ಆದರೆ, ಚಿತ್ರದ ಗುಣಮಟ್ಟದಲ್ಲಿ ಯಶ್ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಜಾಗತಿಕ ಮಟ್ಟದ ನಿರೀಕ್ಷೆ ಇರುವುದರಿಂದ ಗ್ರಾಫಿಕ್ಸ್, ಸಂಗೀತ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಉತ್ತಮವಾದುದನ್ನೇ ನೀಡಲು ಯಶ್ ಮುಂದಾಗಿದ್ದಾರೆ. ಹೊಸತೇನೋ ಬೇಕು ಎಂಬ ಉದ್ದೇಶದಿಂದ ಸಿನಿಮಾದ ಕೆಲಸಗಳು ವಿಳಂಬವಾಗುತ್ತಿದ್ದು, ಬಿಡುಗಡೆ ತಡವಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ, ಟಾಕ್ಸಿಕ್ ಸಿನಿಮಾವನ್ನು ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವ ಉದ್ದೇಶ ಯಶ್‌ಗೆ ಇದೆಯಂತೆ.

Toxic Movie: ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು 'ಬೀರ'?

'ಟಾಕ್ಸಿಕ್' ಈಗ ಕೇವಲ ಭಾರತಕ್ಕೆ ಸೀಮಿತವಾದ ಚಿತ್ರವಲ್ಲ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ಮೇಲೆ ಹಾಲಿವುಡ್ ಮಾರುಕಟ್ಟೆಯ ಕಣ್ಣೂ ಬಿದ್ದಿದೆ. ಈ ಚಿತ್ರವು ಗ್ಯಾಂಗ್‌ಸ್ಟರ್ ಕಥೆಯ ಜೊತೆಗೆ ಸೈಕಾಲಜಿಕಲ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿಯೂ ಚಿತ್ರೀಕರಿಸಲಾಗಿದೆ.

ಯಶ್ ಪಾಲಿಗೆ ಡಿಸೆಂಬರ್ ಲಕ್ಕಿ

ಹೌದು, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಡಿಸೆಂಬರ್ ತಿಂಗಳು ಸದಾ ಅದೃಷ್ಟವನ್ನೇ ತಂದಿದೆ. ʻಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿʼ (ಡಿಸೆಂಬರ್ 25, 2014), ʻಮಾಸ್ಟರ್‌ಪೀಸ್ʼ (ಡಿಸೆಂಬರ್ 25, 2015), ʻಕೆಜಿಎಫ್ ಚಾಪ್ಟರ್ 1ʼ (ಡಿಸೆಂಬರ್ 21, 2018) ಸಿನಿಮಾಗಳಿಂದ ಯಶ್‌ ಒಳ್ಳೆಯ ಗೆಲುವನ್ನೇ ಪಡೆದುಕೊಂಡಿದ್ದಾರೆ. ಡಿಸೆಂಬರ್‌ನಲ್ಲೇ ಅವರ ಸಿನಿಮಾಗಳು ಹಿಟ್‌ ಆಗಿರುವುದರಿಂದ, 'ಟಾಕ್ಸಿಕ್' ಕೂಡ ಅದೇ ಇತಿಹಾಸವನ್ನು ಪುನರಾವರ್ತಿಸಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani