Dailyhunt Logo
  • Light mode
    Follow system
    Dark mode
    • Play Story
    • App Story
ಅಂಗಡಿಗೆ ದಿನನಿತ್ಯ ಆಗಮಿಸುವ ದನಕ್ಕೆ ಬಿಸಿ ಬಿಸಿ ದೋಸೆ ಆತಿಥ್ಯ: ಹೃದಯ ಗೆದ್ದ ವಿಡಿಯೊ ಇಲ್ಲಿದೆ

ಅಂಗಡಿಗೆ ದಿನನಿತ್ಯ ಆಗಮಿಸುವ ದನಕ್ಕೆ ಬಿಸಿ ಬಿಸಿ ದೋಸೆ ಆತಿಥ್ಯ: ಹೃದಯ ಗೆದ್ದ ವಿಡಿಯೊ ಇಲ್ಲಿದೆ

Vishwavani 2 months ago

ರಾಂಚಿ, ಮೇ 20: ಸೋಷಿಯಲ್ ಮೀಡಿಯಾದಲ್ಲಿ ಹಲವು ಪ್ರಾಣಿಗಳ ವಿಡಿಯೊ ಗಮನ ಸೆಳೆಯುತ್ತವೆ. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಭಾಂದವ್ಯ ಸಾರುವ ದೃಶ್ಯ, ಪ್ರಾಣಿಗಳು ಸ್ನೇಹದಿಂದ ವರ್ತಿಸುವ ದೃಶ್ಯ ಸೋಷಿಯಲ್‌ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಅಪರೂಪದ ದೃಶ್ಯ ಜಾರ್ಖಂಡ್‌ನ ಬೀದಿಬದಿಯ ಅಂಗಡಿಯೊಂದರಲ್ಲಿ ಕಂಡು ಬಂದಿದೆ.

ಅಂಗಡಿ ಮಾಲಕ ದನವೊಂದಕ್ಕೆ ಬಿಸಿ ಬಿಸಿ ದೋಸೆ ನೀಡಿ ಸತ್ಕರಿಸುವ ದೃಶ್ಯ (Viral News)ನೆಟ್ಟಿಗರ ಮನ ಗೆದ್ದಿದೆ.

ಜಾರ್ಖಂಡ್‌ನಲ್ಲಿ ಈ ಘಟನೆ ನಡೆದಿದ್ದು, ಅಂಗಡಿ ಮಾಲಕನು ದಿನನಿತ್ಯ ಭೇಟಿ ನೀಡುವ ಹಸುವಿಗೆ ದೋಸೆಯನ್ನು ತಿನ್ನಲು ನೀಡುತ್ತಾರೆ. ಈ ದನವು ಪ್ರತಿದಿನ ಸರಿಯಾದ ಸಮಯಕ್ಕೆ ಆಗಮಿಸುತ್ತದೆ. ಅಂಗಡಿಯ ಬಳಿ ಸದ್ದು ಗದ್ದಲ ಇದ್ದರೂ ದಿನ ನಿತ್ಯ ಶಿಸ್ತಿನಿಂದ ನಿಲ್ಲುತ್ತದೆ. ಅಂಗಡಿ ಮಾಲಕ ಅದನ್ನು ದೂರ ಓಡಿಸುವ ಬದಲು, ತಾಜಾ ಗರಿಗರಿಯಾದ ದೋಸೆಯನ್ನು ತಯಾರಿಸಿ ಗ್ರಾಹಕರಿಗೆ ನೀಡುವಂತೆಯೇ ಅದಕ್ಕೂ ಒದಗಿಸುತ್ತಾರೆ.

ವಿಡಿಯೊ ನೋಡಿ:

ವ್ಯಾಪಾರಿಯು ದಿನ ನಿತ್ಯ ಬರುವ ದನವನ್ನು ಪ್ರೀತಿಯಿಂದ ಮಾತನಾಡಿಸಿ ತಕ್ಷಣವೇ ಕಾವಲಿಗೆ ಹಿಟ್ಟು ಹಾಕಿ, ಕ್ರಿಸ್ಪಿಯಾಗಿ ದೋಸೆ ಸಿದ್ಧಪಡಿಸುತ್ತಾರೆ. ನಂತರ ಬಹಳ ಪ್ರೀತಿಯಿಂದ ದನಕ್ಕೆ ನೀಡುತ್ತಾರೆ. ಹಸು ಸತ್ಕಾರವನ್ನು ಸಂತೋಷದಿಂದ ಸವಿಯುತ್ತದೆ. ಸದ್ಯ ಅಲ್ಲಿ ನೆರೆದಿರುವ ಗ್ರಾಹಕರು ಕೂಡ ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಬೆಂಬಲ ನೀಡಿದ್ದಾರೆ. "ಇದುವರೆಗಿನ ಅತ್ಯುತ್ತಮ ಗ್ರಾಹಕ" ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಕೆಲವರು ಹಸು ಶೀಘ್ರದಲ್ಲೇ ಅಂಗಡಿಯ ಬ್ರ್ಯಾಂಡ್‌ ರಾಯಭಾರಿಯಾಗಬಹುದು ಎಂದು ತಮಾಷೆ ಮಾಡಿದ್ದಾರೆ. ಈ ವ್ಯಾಪಾರಿ ತನ್ನ ವೃತ್ತಿಯಲ್ಲೂ ನಿಷ್ಠೆ ಉಳಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದ್ದಾರೆ. ಆದಾಗ್ಯೂ ವಿಡಿಯೊ ಆಹಾರ ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಕೆಲವು ಬಳಕೆದಾರರು ಕಳವಳ ವ್ಯಕ್ತಪಡಿಸಿ,"ಆಹಾರಕ್ಕೆ ದನ ತುಂಬಾ ಹತ್ತಿರವಾಗಿ ನಿಂತಿರುವುದರಿಂದ ರೋಗಗಳು ಮತ್ತು ವೈರಸ್‌ಗಳು ಹರಡುತ್ತವೆ, ಮುನ್ನೆಚ್ಚರಿಕೆಗಾಗಿ ಸ್ವಲ್ಪ ದೂರ ನಿಲ್ಲಬೇಕು" ಎಂದು ಎಚ್ಚರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani