
1/9
ರಾಜಧಾನಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಆಟೋ ಗ್ಯಾಸ್‌ಗೆ ಹಾಹಾಕಾರ ಉಂಟಾಗಿದೆ. ಎಲ್‌ಪಿಜಿ ಕೊರತೆಯಿಂದ ಗ್ಯಾಸ್ ಸ್ಟೇಷನ್ಗಳ ಮುಂದೆ ನೂರಾರು ಆಟೋಗಳು ಕ್ಯೂ ನಿಂತಿರುವುದು ಸಾಮಾನ್ಯವಾಗಿದ್ದು, ಅನಿಲಕ್ಕಾಗಿ ಐದಾರು ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

2/9
ಇನ್ನು ಶುಕ್ರವಾರ ಕೂಡ ನಗರದ ನಂದಿನಿ ಲೇಔಟ್, ಕೆಂಗೇರಿ ಸೇರಿ ಹಲವು ಕಡೆ ಬಂಕ್‌ಗಳ ಮುಂದೆ ಆಟೋಗಳು ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. ಗಂಟೆಗಟ್ಟಲೇ ಕಾದರೂ ಗ್ಯಾಸ್ ಸಿಗದ ಹಿನ್ನೆಲೆಯಲ್ಲಿ ಆಟೋ ಚಾಲಕರು ಕಂಗಾಲಾಗಿದ್ದಾರೆ.

3/9
ನಂದಿನಿ ಲೇಔಟ್, ಕೆಂಗೇರಿ ಸೇರಿ ನಗರದ ವಿವಿಧೆಡೆ ಆಟೋ ಎಲ್‌ಪಿಜಿ ಬಂಕ್‌ಗಳ ಬಳಿ ಕಿ.ಮೀ.ಗಟ್ಟಲೇ ಆಟೋಗಳು ನಿಂತಿರುವುದು ಕಂಡುಬಂದಿದೆ. ಇನ್ನು ಹಲವೆಡೆ ಎಲ್‌ಪಿಜಿ ಖಾಲಿ ಆಗಿದ್ದರಿಂದ ಚಾಲಕರು ಆಟೋಗಳನ್ನು ತಳ್ಳುತ್ತಾ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

4/9
ಕಮರ್ಷಿಯಲ್ ಸಿಲಿಂಡರ್ ರೀತಿಯಲ್ಲೇ ಆಟೋ ಗ್ಯಾಸ್ ಕೊರತೆ ಕಂಡುಬಂದಿದೆ. ಇದರಿಂದ ಹಲವೆಡೆ ಆಟೋ ಚಾಲಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.

5/9
ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ಆಟೋಗಳು ನಿಂತಲ್ಲೇ ನಿಂತಿರುವುದು ಹಲವೆಡೆ ಕಂಡುಬಂದಿದೆ. ಹೀಗಾಗಿ ಆದಾಯ ಇಲ್ಲದೆ ಆಟೋ ಚಾಲಕರು ಆತಂಕಗೊಂಡಿದ್ದಾರೆ.

6/9
ಮತ್ತೊಂದೆಡೆ ಪ್ರತಿ ನಿತ್ಯ ಆಟೋಗಳ ಮೇಲೆ ಅವಲಂಬಿತರಾಗಿದ್ದ ಜನರಿಗೂ ಇದರ ಬಿಸಿ ತಟ್ಟಿದೆ. ಓಲಾ, ಉಬರ್ ಆಯಪ್ ಮೂಲಕ ಬುಕ್ ಮಾಡಿದರೂ ಆಟೋಗಳು ಸಿಗದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.

7/9
ನಗರದ ಯಾವುದೇ ಬಂಕ್ ಮುಂದೆ ನಿಂತರೂ ಆಟೋ ಎಲ್‌ಪಿಜಿ ಸಿಗುತ್ತಿಲ್ಲ. ಬೆಳಗ್ಗೆ 3ಗಂಟೆಗೆ ಎದ್ದು ಬಂಕ್‌ಗಳ ಮುಂದೆ ನಿಂತರೂ ಗ್ಯಾಸ್ ಸಿಗುತ್ತಿಲ್ಲ. ಇದರಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಟೋ ಚಾಲಕರೂ ಅಳಲು ತೋಡಿಕೊಳ್ಳುತ್ತಿದ್ದಾರೆ.

8/9
ಆಟೋ ಓಡದಿದ್ದರೆ ನಮ್ಮ ಜೀವನ ಸಾಗಲ್ಲ. ಕೊರತೆ ಹಿನ್ನೆಲೆ ಆಟೋ ಎಲ್‌ಪಿಜಿ ಬೆಲೆ ಹೆಚ್ಚಳವಾಗಿದ್ದು, ಲೀಟರ್‌ಗೆ 105 ರೂ. ಕೊಡಬೇಕಾಗಿದೆ. ಆಟೋ ಓಡಿಸಿಯೇ ನಾವು ಜೀವನ ಸಾಗಿಸಬೇಕಾಗಿದೆ. ಗ್ಯಾಸ್ ಪಡೆಯಲು ಗಂಟೆಗಟ್ಟಲೇ ಕಾಯುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

9/9
ಇನ್ನು ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಕೆಲ ಬಂಕ್ ಮಾಲೀಕರು ಬೇಕಾಬಿಟ್ಟಿ ದರ ಏರಿಕೆ ಮಾಡಿರುವ ಆರೋಪಗಳು ಕೇಳಿಬಂದಿವೆ.

