Dailyhunt
ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ಆಕಾಸ ಏರ್‌

ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ಆಕಾಸ ಏರ್‌

Vishwavani 4 days ago

ಬೆಂಗಳೂರು, ಏ. 8: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ 'ಆಕಾಸ ಏರ್' (Akasa Air), ತನ್ನ ಇನ್-ಫ್ಲೈಟ್ ಆಹಾರ ಸೇವೆಯಾದ 'ಕೆಫೆ ಆಕಾಸ' ಮೂಲಕ ಈಸ್ಟರ್ ಹಬ್ಬದ ಪ್ರಯುಕ್ತ ವಿಶೇಷ ಭೋಜನವನ್ನು ಬಿಡುಗಡೆ ಮಾಡಿದೆ. ಹಬ್ಬದ ಸಂಭ್ರಮವನ್ನು ಮುಗಿಲೆತ್ತರದಲ್ಲೂ ಆಚರಿಸುವ ಉದ್ದೇಶದಿಂದ ಈ ವಿಶಿಷ್ಟ ಮೆನುವಿನ 2ನೇ ಆವೃತ್ತಿಯನ್ನು ಪ್ರಯಾಣಿಕರ ಮುಂದಿಡಲಾಗಿದೆ.

ಕುಟುಂಬದ ಬಾಂಧವ್ಯ, ಒಗ್ಗಟ್ಟು ಮತ್ತು ಸಂಭ್ರಮಾಚರಣೆಯ ಪ್ರತೀಕವಾಗಿರುವ ಈಸ್ಟರ್ ಹಬ್ಬಕ್ಕೆ ತಕ್ಕಂತೆ ಹೊಸ ರುಚಿಗಳನ್ನು ಈ ಭೋಜನದಲ್ಲಿ ಸೇರಿಸಲಾಗಿದೆ. ಕೇವಲ ಹೊಟ್ಟೆ ತುಂಬಿಸುವುದಷ್ಟೇ ಅಲ್ಲದೆ, ಆಹಾರ ಸೇವನೆಯನ್ನು ಒಂದು ಸುಂದರ ಅನುಭೂತಿಯಾಗಿಸುವ ನಿಟ್ಟಿನಲ್ಲಿ 'ಕೆಫೆ ಆಕಾಸ' ಹೆಜ್ಜೆ ಇಟ್ಟಿದೆ.

ಈಸ್ಟರ್ ವಿಶೇಷ ಭೋಜನದಲ್ಲಿ ಏನೇನಿದೆ?

ವಿಮಾನ ಪ್ರಯಾಣವನ್ನು ಇನ್ನಷ್ಟು ಸುಂದರವಾಗಿಸಲು ಕೆಫೆ ಆಕಾಸ ಭರ್ಜರಿ ಮೆನು ಸಿದ್ಧಪಡಿಸಿದೆ. ಬಾಯೂರಿಸುವ ಸ್ಮೋಕ್ಡ್‌ ಚಿಕನ್‌ ಹಾಗೂ ಡಿಲ್ ರೋಲಾಡ್, ಕ್ರ್ಯಾನ್‌ಬೆರಿ ಮತ್ತು ಪಿಸ್ತಾದ ಸೊಗಸಾದ ಮಿಶ್ರಣ, ಕಣ್ಮನ ಸೆಳೆಯುವ ಬಾಲ್ಸಾಮಿಕ್ ತರಕಾರಿ ಸಲಾಡ್ ಈ ಮೆನುವಿನಲ್ಲಿವೆ. ಜತೆಗೆ ಸಿಹಿ ಪ್ರಿಯರಿಗಾಗಿ ನಿಂಬೆ ಸುವಾಸನೆ ಭರಿತ ಮೃದುವಾದ ಪನ್ನಾ ಕೊಟ್ಟಾ, ಬೆರ್ರಿ ಜ್ಯೂಸ್‌ನ ಸಾಸ್ ಹಾಗೂ ಪ್ರಯಾಣಿಕರ ಇಷ್ಟದ ಪಾನೀಯವನ್ನು ಈ ಮೆನು ಒಳಗೊಂಡಿದೆ.

ಬುಕಿಂಗ್ ಮಾಡುವುದು ಹೇಗೆ?

ಈ ರುಚಿಕರ ಈಸ್ಟರ್ ವಿಶೇಷ ಭೋಜನವು 2026ರ ಏಪ್ರಿಲ್ 1ರಿಂದ ಏಪ್ರಿಲ್ 30ರವರೆಗೆ ಕೇವಲ ಒಂದು ತಿಂಗಳ ಮಟ್ಟಿಗೆ ಮಾತ್ರ ಲಭ್ಯವಿರಲಿದೆ. ಇದರ ಸವಿಯುಣ್ಣಲು ಬಯಸುವ ಪ್ರಯಾಣಿಕರು ಆಕಾಸ ಏರ್‌ನ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆಯಪ್ ಬಳಸಿಕೊಂಡು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು.

2022ರ ಆಗಸ್ಟ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ ದಿನದಿಂದಲೂ ಆಕಾಸ ಏರ್, ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಶೇಷ ಆತಿಥ್ಯ ನೀಡುತ್ತಾ ಬಂದಿದೆ. ಸಂಕ್ರಾಂತಿ, ಹೋಳಿ, ರಂಜಾನ್ (ಈದ್), ಈಸ್ಟರ್, ವ್ಯಾಲೆಂಟೈನ್ಸ್ ಡೇ, ಯೋಗ ದಿನ, ತಾಯಂದಿರ ದಿನ, ಓಣಂ, ಗಣೇಶ ಚತುರ್ಥಿ, ನವರೋಜ್, ದಸರಾ, ದೀಪಾವಳಿ, ಮಕ್ಕಳ ದಿನಾಚರಣೆ ಮತ್ತು ಕ್ರಿಸ್‌ಮಸ್ ಸೇರಿದಂತೆ ದೇಶದ ಪ್ರತಿಯೊಂದು ಪ್ರಮುಖ ಹಬ್ಬಗಳ ಸಂದರ್ಭದಲ್ಲೂ ಆಯಾ ಹಬ್ಬಕ್ಕೆ ತಕ್ಕಂತೆ ವಿಶಿಷ್ಟ ಖಾದ್ಯಗಳನ್ನು ಪರಿಚಯಿಸುತ್ತಾ ಬಂದಿದೆ.‌

ಸಮ್ಮರ್ ಟ್ರಾವೆಲ್ ಫ್ಯಾಷನ್ ಪ್ರಿಯರಿಗೆ ಇಲ್ಲಿವೆ 5 ಸ್ಟೈಲಿಂಗ್ ಟಿಪ್ಸ್

ಪ್ರಯಾಣಿಕರ ಆರೋಗ್ಯ ಮತ್ತು ಅಭಿರುಚಿಗೆ ಹೊಂದುವಂತೆ ಕೆಫೆ ಆಕಾಸ ತನ್ನ ಮೆನುವನ್ನು ಆಗಾಗ್ಗೆ ನವೀಕರಿಸುತ್ತಿರುತ್ತದೆ. ದೇಶದ ವಿವಿಧ ಭಾಗಗಳ ಪ್ರಖ್ಯಾತ ಅಡುಗೆ ತಜ್ಞರಿಂದ ಸಿದ್ಧಪಡಿಸಲಾದ ಬರೋಬ್ಬರಿ 45ಕ್ಕೂ ಅಧಿಕ ವಿವಿಧ ಬಗೆಯ ಆಹಾರ, ಲಘು ಉಪಹಾರ ಹಾಗೂ ಪಾನೀಯಗಳ ಆಯ್ಕೆಗಳು ಆಕಾಸ ಏರ್ ಪ್ರಯಾಣಿಕರಿಗೆ ಲಭ್ಯವಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani