Dailyhunt Logo
  • Light mode
    Follow system
    Dark mode
    • Play Story
    • App Story
ಬದುಕಿದ ಬಡ ಜೀವ;  ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

ಬದುಕಿದ ಬಡ ಜೀವ; ರೈಲು ಎಂಜಿನ್‌ನಲ್ಲಿ ಸಿಲುಕಿದ ನವಿಲಿನ ರಕ್ಷಣೆ, ವಿಡಿಯೋ ನೋಡಿ

Vishwavani 2 weeks ago

ಮುಂಬೈ,ಜು.2: ರೈಲ್ವೆ ನಿಲ್ದಾಣವೊಂದರಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ. ಪ್ರಯಾಣಿಕರು ಚಲಿಸುತ್ತಿದ್ದ ರೈಲಿನ ಎಂಜಿನ್‌ನೊಳಗೆ ಸಿಲುಕಿದ್ದ ನವಿಲನ್ನು ರಕ್ಷಣೆ ಮಾಡಿದ ಘಟನೆ ಮಹಾರಾಷ್ಟ್ರದ ಶೇಗಾಂವ್‌ನಲ್ಲಿ ನಡೆದಿದೆ.

ನರಳಾಡುತ್ತಿದ್ದ ನವಿಲನ್ನು ರೈಲ್ವೆ ಸಿಬ್ಬಂದಿ, ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ಸ್ಥಳೀಯರು ಸೇರಿ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ.

ಭುಸಾವಲ್-ಬದ್ನೇರಾ ಮೆಮು ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲಿನಲ್ಲಿ ಈ ಘಟನೆ ನಡೆದಿದೆ. ರೈಲು ಪ್ರಯಾಣದಲ್ಲಿ ಇದ್ದಾಗ ನವಿಲು ಇಂಜಿನ್‌ನೊಳಗೆ ಸಿಲುಕಿ ಕೊಂಡಿದ್ದು ತಿಳಿದು ಬಂದಿದೆ. ರೈಲ್ವೆ ಸಿಬ್ಬಂದಿ ಇದನ್ನು ತಕ್ಷಣವೇ ಗಮನಿಸಿದ್ದು ಪರಿಸ್ಥಿತಿಯ ಗಂಭೀರತೆಯನ್ನು ಅರಿತಿದ್ದಾರೆ. ತಕ್ಷಣವೇ ದಿನನಿತ್ಯದ ರೈಲ್ವೆ ಕಾರ್ಯಾಚರಣೆಯನ್ನು ಬದಿಗಿಟ್ಟು ಪಕ್ಷಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ.

ವಿಡಿಯೋ ನೋಡಿ:

ಇಂಜಿನ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನವಿಲು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ರೈಲ್ವೆ ಅಧಿಕಾರಿಗಳು, ಜಿಆರ್‌ಪಿ ಸಿಬ್ಬಂದಿ ಮತ್ತು ಸ್ಥಳೀಯರು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿರುವುದು ಕಂಡುಬಂದಿದೆ.

Viral Video: ಭಕ್ತರಿಗೆ 'ತಿಲಕ' ಇಟ್ಟು 3 ಗಂಟೆಗಳಲ್ಲಿ 2,350 ರುಪಾಯಿ ಗಳಿಸಿದ ಯುವಕ

ಇಂಜಿನ್‌ನ ಕಿರಿದಾದ ಜಾಗದಲ್ಲಿ ಸಿಲುಕಿದ್ದ ನವಿಲಿಗೆ ಯಾವುದೇ ಗಾಯವಾಗದಂತೆ ಅತ್ಯಂತ ತಾಳ್ಮೆಯಿಂದ ಅದನ್ನು ಇಂಜಿನ್‌ನಿಂದ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ‌. ಸದ್ಯ ಈ ಬಗ್ಗೆ ನೆಟ್ಟಿಗರು ನಾನಾಬಗೆಯ ಕಾಮೆಂಟ್ ಮಾಡಿದ್ದು ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ಪ್ರಯಾಣದ ನಡುವೆಯೂ ನವಿಲಿನ ಜೀವ ಉಳಿಸಿದ ಸಿಬ್ಬಂದಿಗೆ ದೊಡ್ಡ ಸಲಾಂ ಎಂದು ಬರೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani