Dailyhunt Logo
  • Light mode
    Follow system
    Dark mode
    • Play Story
    • App Story
Bandar Movie: ಬಾಬಿ ಡಿಯೋಲ್‌ ಹೊಸ ಸಿನಿಮಾದಲ್ಲಿ ಮಿಂಚಿದ ಕನ್ನಡದ ರಾಜ್‌ ಬಿ. ಶೆಟ್ಟಿ - ನಟೇಶ್‌ ಹೆಗಡೆ

Bandar Movie: ಬಾಬಿ ಡಿಯೋಲ್‌ ಹೊಸ ಸಿನಿಮಾದಲ್ಲಿ ಮಿಂಚಿದ ಕನ್ನಡದ ರಾಜ್‌ ಬಿ. ಶೆಟ್ಟಿ - ನಟೇಶ್‌ ಹೆಗಡೆ

Vishwavani 1 week ago

ಬಾಲಿವುಡ್‌ ನಟ ಬಾಬಿ ಡಿಯೋಲ್ ಅವರ ಮುಂದಿನ ಬಹುನಿರೀಕ್ಷಿತ 'ಬಂದರ್' (Bandar) ಚಿತ್ರದ ಹೊಸ ಹಾಡು 'ಪಿಂಜರ' ಬಿಡುಗಡೆಯಾಗಿದೆ. ಜೈಲಿನ ಒಳಗಿನ ಕೈದಿಗಳ ಮಜಾವಾದ ಸಾಂಗ್‌ ಇದಾಗಿದ್ದು, ಮೊದಲ ನೋಟಕ್ಕೆ ಸಿನಿಪ್ರಿಯರನ್ನು ಆಕರ್ಷಿಸಿದೆ. ಮತ್ತೊಂದು ವಿಶೇಷವೆಂದರೆ, ಕರ್ನಾಟಕದ ಇಬ್ಬರು ಪ್ರತಿಭೆಗಳು ಈ ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವುದು ವಿಶೇಷ.

ಹೌದು, ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಪ್ರತಿಭೆಯಿಂದಲೇ ದೊಡ್ಡ ಹೆಸರು ಸಂಪಾದಿಸಿರುವ ನಟ ರಾಜ್‌ ಬಿ ಶೆಟ್ಟಿ 'ಬಂದರ್' ಚಿತ್ರದ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಕನ್ನಡದ ಮತ್ತೊಂದು ಪ್ರತಿಭೆ ನಟೇಶ್‌ ಹೆಗಡೆ ಕೂಡ ಇದ್ದಾರೆ. ಪೆದ್ರೊ, ವಾಘಾಚಿಪಾಣಿಯಂತಹ ಸಿನಿಮಾಗಳನ್ನು ನಿರ್ದೇಶಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟೇಶ್‌ ಹೆಗಡೆ, ಬಂದರ್‌ ಚಿತ್ರದಲ್ಲೊಂದು ಪಾತ್ರ ಮಾಡಿದ್ದಾರೆ.

ಜೂನ್‌ 5ರಂದು ತೆರೆಗೆ ಬರಲಿರುವ ಸಿನಿಮಾ

ಅನುರಾಗ್‌ ಕಶ್ಯಪ್ ನಿರ್ದೇಶನದ ಈ ಚಿತ್ರವನ್ನು ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ನಿಖಿಲ್ ದ್ವಿವೇದಿ ಅವರ ಸಾಫ್ರಾನ್ ಮ್ಯಾಜಿಕ್‌ವರ್ಕ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಬಾಬಿ ಡಿಯೋಲ್, ಸಾನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ, ಸಬಾ ಆಜಾದ್, ರಿದ್ಧಿ ಸೇನ್, ಇಂದ್ರಜಿತ್ ಸುಕುಮಾರನ್, ಜಿತೇಂದ್ರ ಜೋಶಿ, ನಾಗೇಶ್ ಭೋಂಸ್ಲೆ ಮತ್ತು ಅಂಕುಶ್ ಗೆಡಮ್ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಸಿನಿಮಾ ಜೂನ್ 5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ʻಬಂದರ್‌ʼ ಚಿತ್ರದ ಟೀಸರ್ ಮತ್ತು ಈ ಹಿಂದೆ ಬಿಡುಗಡೆಯಾಗಿದ್ದ 'ಕ್ಯೂ ಮಜಾ ಆ ರಹಾ ಹೈ' ಹಾಡಿನ ಯಶಸ್ಸಿನ ಬೆನ್ನಲ್ಲೇ ಈಗ 'ಪಿಂಜರ' ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ಪ್ರಮುಖವಾಗಿ ಬಾಬಿ ಡಿಯೋಲ್ ಅವರ ಪಾತ್ರದ ಸುತ್ತ ಸಾಗುತ್ತದೆ, ಬಾಬಿ ಡಿಯೋಲ್‌ ಪಾತ್ರದ ವೈಯಕ್ತಿಕ ಜೀವನದಲ್ಲಿನ ಅತಿಯಾದ ಆಸೆ, ಹಠ ಮತ್ತು ಭಾವನಾತ್ಮಕ ಸಂಘರ್ಷಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ.

Bandar trailer: ಬಾಬಿ ಡಿಯೋಲ್‌, ರಾಜ್‌ ಬಿ.ಶೆಟ್ಟಿ ನಟನೆಯ 'ಬಂದರ್‌' ಸಿನಿಮಾ ಟ್ರೈಲರ್ ಔಟ್‌

ಪಿಂಜರ ಹಾಡಿಗೆ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಅವರು ಸಂಗೀತ ಸಂಯೋಜಿಸಿ, ಧ್ವನಿ ನೀಡಿದ್ದಾರೆ. ಈ ಹಾಡಿಗೆ ಸುದೀಪ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. 'ಪಾತಲ್ ಲೋಕ್', 'ಕೋಹ್ರಾ' ಮತ್ತು 'ಉಡ್ತಾ ಪಂಜಾಬ್' ನಂತಹ ಪ್ರಸಿದ್ಧ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿದ್ದ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ 'ಬಂದರ್' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani