Dailyhunt Logo
  • Light mode
    Follow system
    Dark mode
    • Play Story
    • App Story
Bangalore News: ಬೂಸ್ಟ್, ಐಐಎಸ್‌ಸಿಯಲ್ಲಿ 'ವಾಧ್ವಾನಿ ಇನ್ನೋವೇಶನ್ ಸೆಂಟರ್' ಆರಂಭ

Bangalore News: ಬೂಸ್ಟ್, ಐಐಎಸ್‌ಸಿಯಲ್ಲಿ 'ವಾಧ್ವಾನಿ ಇನ್ನೋವೇಶನ್ ಸೆಂಟರ್' ಆರಂಭ

Vishwavani 3 weeks ago

ಬೆಂಗಳೂರು: ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾಗಿರುವ ಬೆಂಗಳೂರಿನ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್' (ಐಐಎಸ್‌ಸಿ)ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ನೂತನ 'ವಾಧ್ವಾನಿ-ಐಐಎಸ್‌ಸಿ ಇನ್ನೋವೇಶನ್ ಸೆಂಟರ್'( Wadhwani-Innovation-Centre) ಅನ್ನು ಉದ್ಘಾಟಿಸಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಾಧ್ವಾನಿ ಫೌಂಡೇಶನ್‌ನ ಸಿಇಒ ಡಾ. ಅಜಯ್ ಕೆಲಾ ಮತ್ತು ವಾಧ್ವಾನಿ ಇನ್ನೋವೇಶನ್ ನೆಟ್‌ವರ್ಕ್‌ನ (ಡಬ್ಲ್ಯೂಐಎನ್‌) ವ್ಯವಸ್ಥಾಪಕ ನಿರ್ದೇಶಕ ಡಾ. ಶಿರ್ಷೇಂದು ಮುಖರ್ಜಿ ಉಪಸ್ಥಿತರಿದ್ದರು.

ಏನಿದರ ಉದ್ದೇಶ?

ದೇಶದಲ್ಲಿ ಡೀಪ್-ಟೆಕ್ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವುದು, ಹೊಸ ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುವುದು ಹಾಗೂ ಶೈಕ್ಷಣಿಕ ಸಂಸ್ಥೆ ಮತ್ತು ಕೈಗಾರಿಕೆಗಳ ನಡುವೆ ಸಮನ್ವಯ ಸಾಧಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ಕಳೆದ ವರ್ಷ ವಾಧ್ವಾನಿ ಫೌಂಡೇಶನ್ ಘೋಷಿಸಿದ್ದ 1,400 ಕೋಟಿ ರೂ. ಮೊತ್ತದ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲೇ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

Bangalore News: ಶಿಕ್ಷಕರು, ಅತಿಥಿ ಶಿಕ್ಷಕರು, ಅಂಗನವಾಡಿ ನೌಕರರ ನೇಮಕಾತಿಗೂ ಒಳಮೀಸಲಾತಿ ಕಡ್ಡಾಯವಾಗಿ ಜಾರಿಗೊಳಿಸಿ: ಡಾ.ಎಸ್.ಸಂಗಮೇಶ್ ಆಗ್ರಹ

ಇನ್ನೋವೇಶನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, "ಕೇವಲ ತಂತ್ರಜ್ಞಾನವಿದ್ದರೆ ಸಾಲದು, ಆ ತಂತ್ರಜ್ಞಾನವು ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ಹೇಗೆ ಬಳಕೆಯಾಗುತ್ತದೆ ಎಂಬುದು ಮುಖ್ಯ," ಎಂದರು.

ಬಾಹ್ಯಾಕಾಶದಲ್ಲಿ ಡಾ. ವಿಕ್ರಮ್ ಸಾರಾಭಾಯ್ ಹಾಗೂ ಪರಮಾಣು ಶಕ್ತಿಯಲ್ಲಿ ಡಾ. ಹೋಮಿ ಭಾಭಾ ಅವರ ದೂರದೃಷ್ಟಿಯನ್ನು ನೆನಪಿಸಿಕೊಂಡ ಅವರು, "ಕ್ವಾಂಟಮ್ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಸರ್ಕಾರ ಮತ್ತು ದಾನಿಗಳ ಬೆಂಬಲ ಬಹಳ ಮುಖ್ಯ ವಾಗಿದೆ," ಎಂದು ಅಭಿಪ್ರಾಯಪಟ್ಟರು.

ವಾಧ್ವಾನಿ ಫೌಂಡೇಶನ್ ಸಿಇಒ ಡಾ.ಅಜಯ್ ಕೆಲಾ ಪ್ರತಿಕ್ರಿಯಿಸಿ, "ಭಾರತದಲ್ಲಿ ವಿಶ್ವದರ್ಜೆಯ ಸಂಶೋಧನಾ ಪ್ರತಿಭೆಗಳಿವೆ. ಸಂಶೋಧಕರ ಈ ಐಡಿಯಾಗಳನ್ನು ಕೇವಲ ಪ್ರಯೋಗಾಲಯಕ್ಕೆ ಸೀಮಿತಗೊಳಿಸದೆ, ಆದಷ್ಟು ಬೇಗ ಅವುಗಳನ್ನು ಸ್ಟಾರ್ಟ್‌ಅಪ್‌ಗಳಾಗಿ ಹಾಗೂ ಉತ್ಪನ್ನಗಳಾಗಿ ಮಾರುಕಟ್ಟೆಗೆ ತರಲು ಐಐಎಸ್‌ಸಿಯಂತಹ ಸಂಸ್ಥೆಗಳ ಜೊತೆ ನಾವು ಕೈಜೋಡಿಸಿದ್ದೇವೆ," ಎಂದು ತಿಳಿಸಿದರು.

'ಕ್ವಾಂಟಮ್ ಪಿಚ್ ಫೆಸ್ಟ್ 2026' ಯಶಸ್ವಿ ಆಯೋಜನೆ

ಈ ಉದ್ಘಾಟನೆಯ ಜೊತೆಗೆ ಐಐಎಸ್‌ಸಿಯಲ್ಲಿ 'ಕ್ವಾಂಟಮ್ ಪಿಚ್ ಫೆಸ್ಟ್ 2026' ಅನ್ನು ಸಹ ಆಯೋ ಜಿಸಲಾಗಿತ್ತು. ಇದರಲ್ಲಿ ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ಹೊಸ ಆವಿಷ್ಕಾರದಲ್ಲಿ ನಿರತರಾದವರು ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿದ ತಮ್ಮ ಹೊಸ ಆಲೋಚನೆಗಳನ್ನು ಹೂಡಿಕೆದಾರರ ಮುಂದಿಟ್ಟರು. ಅತ್ಯುತ್ತಮ ಯೋಜನೆಗಳನ್ನು ಹಂಚಿ ಕೊಂಡ ತಂಡಗಳಿಗೆ ಐಐಎಸ್‌ಸಿ ಕಡೆಯಿಂದ ಮಾರ್ಗದರ್ಶನ ಮತ್ತು ಇನ್‌ಕ್ಯೂಬೇಶನ್ ಅವಕಾಶಗಳನ್ನು ಒದಗಿಸಲಾಗುತ್ತದೆ.

ಹೊಸ 'ಇನ್‌ಕ್ಯೂಬೇಟ್' ಪ್ಲಾಟ್‌ಫಾರ್ಮ್ ಲಾಂಚ್

ಇದೇ ವೇಳೆ 'ಇನ್‌ಕ್ಯೂಬೇಟ್' ಎಂಬ ಹೊಸ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಲಾಯಿತು. ಕ್ವಾಂಟಮ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾರಂಭಿಕ ಹಂತದ ಕಲ್ಪನೆಗಳನ್ನು ಪೋಷಿಸಿ, ಅವನ್ನು ದೊಡ್ಡ ಉದ್ದಿಮೆಗಳನ್ನಾಗಿ ಬೆಳೆಸುವುದು ಇದರ ಗುರಿಯಾಗಿದೆ. ಸಂಶೋಧಕರಿಗೆ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಭಾರತವನ್ನು ಜಾಗತಿಕ 'ಡೀಪ್-ಟೆಕ್' ಹಬ್ ಆಗಿ ರೂಪಿಸುವುದೇ ಈ ಯೋಜನೆಗಳ ಗುರಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani