Dailyhunt Logo
  • Light mode
    Follow system
    Dark mode
    • Play Story
    • App Story
Bangles Fashion 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಕಲರ್‌ಫುಲ್‌ ಬಳೆಗಳು

Bangles Fashion 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಕಲರ್‌ಫುಲ್‌ ಬಳೆಗಳು

Vishwavani 4 days ago

1/5

ಲಗ್ಗೆ ಇಟ್ಟ ಡಿಸೈನರ್‌ ಬಳೆಗಳು

ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ಗಾಜಿನ ಬಳೆಗಳು ಮಾತ್ರವಲ್ಲ, ವೈವಿಧ್ಯಮಯ ಡಿಸೈನರ್‌ ಬಳೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ.

2/5

ಬಳೆಗಳಿಗೆ ಹೆಚ್ಚಿದ ಬೇಡಿಕೆ

ಹೌದು, ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಬಳೆಗಳು ನಾನಾ ವಿನ್ಯಾಸದಲ್ಲಿ ಊಹೆಗೂ ಮೀರಿದ ಡಿಸೈನ್‌ನಲ್ಲಿ ಫ್ಯಾನ್ಸಿ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.

ಬಳೆ ಪ್ರಿಯ ಮಾನಿನಿಯರನ್ನು ಸೆಳೆದಿವೆ. ಹಬ್ಬದ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.

3/5

ಊಹೆಗೂ ಮೀರಿದ ಡಿಸೈನ್‌ನಲ್ಲಿ ಬಳೆಗಳು

ವರಮಹಾಲಕ್ಷ್ಮೀ ಹಬ್ಬದ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಬಳೆಗಳು ಬಂದಿವೆ. ಅವುಗಳಲ್ಲಿ, ಡಾರ್ಕ್‌ ಶೇಡ್‌ನ ಗಾಜಿನ ಬಳೆಗಳು, ಬಣ್ಣಬಣ್ಣದ ಗೋಲ್ಡನ್‌ ಚುಕ್ಕಿ ಹಾಗೂ ಚಿಕ್ಕ ಬೂಟಾ ಇರುವಂತಹ ಕಲರ್‌ಫುಲ್‌ ಗಾಜಿನ ಬಾಕ್ಸ್‌ ಬಳೆಗಳು, ಬಾಕ್ಸ್‌ನೊಳಗೆ ಬರುವಂತಹ ಸೆಟ್‌ ಗಾಜಿನ ಡಿಸೈನ್‌ನ ಬಳೆಗಳು, ಹಸಿರು , ಕೆಂಪು, ಹಳದಿ, ಕೇಸರಿಯ ಜೆಲ್‌ ಬಳೆಗಳು ಸೇರಿದಂತೆ ಲೆಕ್ಕವಿಲ್ಲಷ್ಟು ಬಗೆಯವು ಲಭ್ಯ.

4/5

ವೆರೈಟಿ ಡಿಸೈನರ್‌ ಬಳೆಗಳು

ಇನ್ನು, ಗಾಜಿನ ಬಳೆಗಳನ್ನು ಹೊರತುಪಡಿಸಿದಲ್ಲಿ, ಪ್ಲಾಸ್ಟಿಕ್‌, ಫೈಬರ್‌, ವುಡನ್‌ ಹಾಗೂ ಇನ್ನಿತರ ಮೆಟಿರಿಯಲ್‌ನವು ದೊರೆಯುತ್ತವೆ. ಅವುಗಳಲ್ಲಿ ಮಿರರ್‌ ಡಿಸೈನ್‌ನವು ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರು.

5/5


ಬಳೆ ಪ್ರಿಯರಿಗೆ ಇಲ್ಲಿವೆ ಟಿಪ್ಸ್

  • ಮ್ಯಾಚಿಂಗ್ ಬಳೆಗಳನ್ನು ಧರಿಸಿ. ಅಂದವಾಗಿ ಕಾಣಿಸುವುದು.
  • ಗೋಲ್ಡನ್ ಕಲರ್‌ನ ಬಳೆಗಳು ಗ್ರ್ಯಾಂಡ್ ಲುಕ್ ನೀಡುತ್ತವೆ.
  • ಆದಷ್ಟೂ ಕೈಗಳ ಸೈಜ್‌ಗೆ ಹಾಕಿಕೊಳ್ಳಲು ಸುಲಭವಾಗುವಂತವನ್ನು ಕೊಳ್ಳಿ.
  • ಬಿರುಕು ಮೂಡಿದೆಯೇ, ಒಡೆದಿದೆಯೇ ಎಂಬುದನ್ನು ಪರೀಕ್ಷಿಸಿ, ಖರೀದಿಸಿ.
  • ಸ್ಟ್ರೀಟ್ ಶಾಪಿಂಗ್‌ನಲ್ಲಿ ಕೊಳ್ಳುವುದರಿಂದ ಹಣ ಉಳಿತಾಯ ಮಾಡಬಹುದು. ಕಡಿಮೆ ಬೆಲೆಗೆ ದೊರೆಯುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani