ಮುಗಳಖೋಡ: ಘಟಪ್ರಭಾ ಎಡದಂಡೆ ಕಾಲುವೆಯ ನೀರು ಜನ ಹಾಗೂ ಜಾನುವಾರುಗಳಿಗೆ ರಾಯಬಾಗ ತಾಲೂಕಿನ ಕೆಲ ಹಳ್ಳಿಗಳಿಗೆ ಸೇರಿದಂತೆ ರಬಕವಿ ಬನಹಟ್ಟಿ ಜಮಖಂಡಿ ಮುಧೋಳ ಮತ್ತು ಬೀಳಗಿ ತಾಲೂಕಿನವರೆಗೆ ಸಮರ್ಪಕವಾಗಿ ತಲುಪಬೇಕೆಂದು ಜಮಖಂಡಿ ಉಪ ವಿಭಾಗಾಧಿ ಕಾರಿ ಶ್ವೇತಾ ಬಿಡಿಕರ ಹೇಳಿದರು.
ಅವರು ಬುಧವಾರ ಘಟಪ್ರಭಾ ಎಡದಂಡೆ ಕಾಲುವೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಚೌಕಿಯಿಂದ, ರಾಯಬಾಗ ತಾಲೂಕಿನ ಮುಗಳಖೋಡ ಚೌಕಿಯವರಿಗೆ ನೀರು ಹರಿವಿನ ಬಗ್ಗೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದು ಗೇಟ್ ಗಳನ್ನು ಪರಿಶೀಲಿಸಿ , ಈ ಭಾಗದ ರೈತರಿಗೆ ಅಷ್ಟೇ ಅಲ್ಲದೆ ಜಮಖಂಡಿ ಬೀಳಗಿ ತಾಲೂಕಿನ ರೈತರಿಗೂ ಅನುಕೂಲವಾಗಲಿ ಎಂಬ ಸದುದ್ದೇಶ ದಿಂದ ನೀರಿನ ಹರಿವು ಅಗತ್ಯವಿದೆ ಎಂದರು. ಸರಿಯಾಗಿ ಕಾಲುವಿಗೆ ನೀರು ಹೋಗದ ಕಾರಣ ಮಹಾ ಲಿಂಗಪುರ ಪ್ರಭಾರ ಎಇಇಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
Belgaum Municipal Corporation controversy: ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ
ಮುಗಳಖೋಡ ಗೇಟ್ ಗಳಿಗೆ ಪೊಲೀಸರ ಭದ್ರತೆ: ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸುವ ಸಂದರ್ಭದಲ್ಲಿ ಪ್ರತಿ ಸಲವೂ ರಾತ್ರಿ ಹಗಲು ಪೊಲೀಸರ ಸರ್ಪಗಾವಲು ಇದ್ದರೂ ಕೂಡ ರೈತರು ಪೊಲೀಸರು ಅಧಿಕಾರಿಗಳ ನಡುವೆ ಸಂಘರ್ಷ ವಾದ ವಿವಾದ ನೂಕಾಟ ತಳ್ಳಾಟ ಇವು ಸರ್ವೇಸಾಮಾನ್ಯವಾಗಿ ಇದ್ದದ್ದು.
ಈ ಸಂದರ್ಭದಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬಿಡಿಕರ , ಜಮಖಂಡಿ ತಹಶೀಲ್ದಾರ ಗಿರೀಶ ಸ್ವಾದಿ, ಮುಧೋಳ ತಹಶೀಲ್ದಾರ ಅನಿಲ ಬಡಿಗೇರ, ರಬಕವಿ ಜಿಎಲ್ ಬಿಸಿ ಎಇಇ ಶ್ರೀಧರ ನಂದಿಹಾಳ, ಮಹಾಲಿಂಗಪುರದ ಜಿಎಲ್ ಬಿ ಸಿ ಪ್ರಭಾರ ಎಇಇ ಮಹಾಂತೇಶ ಯಡಪ್ಪನ್ನವರ, ಜಿಎಲ್‌ಸಿ ಸಿಬ್ಬಂದಿ ವರ್ಗ ಇದ್ದರು.

