Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಇನ್ಮುಂದೆ ಡಿಜಿಟಲ್ ಟೋಲ್ ವ್ಯವಸ್ಥೆ; ಶುಲ್ಕ ತಪ್ಪಿಸಿದರೆ ದಂಡ

ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಇನ್ಮುಂದೆ ಡಿಜಿಟಲ್ ಟೋಲ್ ವ್ಯವಸ್ಥೆ; ಶುಲ್ಕ ತಪ್ಪಿಸಿದರೆ ದಂಡ

Vishwavani 1 week ago

ಬೆಂಗಳೂರು, ಆ.2: ಐತಿಹಾಸಿಕ ಕೆ.ಆರ್. ಮಾರುಕಟ್ಟೆಗೆ (KR Market) ಸರಕು ಸಾಗಣೆ ವಾಹನಗಳೊಂದಿಗೆ ಪ್ರವೇಶಿಸಲು ಇನ್ನು ಮುಂದೆ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ತರಕಾರಿ, ಹಣ್ಣು ಹಾಗೂ ಇತರ ಸರಕುಗಳನ್ನು ತರುವ ವ್ಯಾಪಾರಿಗಳು ಸಹ ಮಾರುಕಟ್ಟೆಗೆ ತರುತ್ತಿರುವ ಸರಕುಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ (Digital Toll System) .

ಪ್ರಸ್ತಾವಿತ 10 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಯೋಜನೆಯ ಭಾಗವಾಗಿ, ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) ಈ ಕೆಳಗಿನ ದರಗಳನ್ನು ನಿಗದಿಪಡಿಸಿದೆ:

  • ಟ್ರಕ್‌ಗಳು/6 ಚಕ್ರ ಹಾಗೂ ಅದಕ್ಕಿಂತ ಹೆಚ್ಚಿನ ವಾಹನಗಳಿಗೆ ಪ್ರತಿ ಪ್ರವೇಶ/ನಿರ್ಗಮನಕ್ಕೆ ರೂ. 350
  • ನಾಲ್ಕು ಚಕ್ರದ ಸರಕು ವಾಹನಗಳಿ ಪ್ರವೇಶ/ನಿರ್ಗಮನಕ್ಕೆ ರೂ. 100.
  • ತ್ರಿಚಕ್ರ ವಾಹನ ಸರಕು ಸಾಗಣೆ ವಾಹನಗಳ ಪ್ರವೇಶ/ನಿರ್ಗಮನಕ್ಕೆ ರೂ. 75.
  • ಇದಲ್ಲದೆ, ಹಣ್ಣುಗಳು, ತರಕಾರಿಗಳು, ಹೂವು, ಸೊಪ್ಪು, ಹತ್ತಿ, ತೆಂಗಿನಕಾಯಿ ಮತ್ತು ಇತರ ಕೃಷಿ ಮತ್ತು ವಾಣಿಜ್ಯ ಉತ್ಪನ್ನಗಳಿಗೆ ವ್ಯಾಪಾರಿಗಳು ಪ್ರತಿ ಚೀಲ ಅಥವಾ ಬಂಡಲ್‌ಗೆ ರೂ. 5 ಪಾವತಿಸಬೇಕಾಗುತ್ತದೆ.
  • ಕೋಳಿ, ಮಾಂಸ ಮತ್ತು ಸಮುದ್ರಾಹಾರಕ್ಕೆ, ಪ್ರತಿ ಬಾಕ್ಸ್ ಅಥವಾ ಟ್ರೇಗೆ ರೂ. 10 ಶುಲ್ಕ ವಿಧಿಸಲಾಗುತ್ತದೆ.

ರ‍್ಯಾಪಿಡೋ ಚಾಲಕನಾಗಿ 3 ತಿಂಗಳ ಅನುಭವ ಹಂಚಿಕೊಂಡ ಬೆಂಗಳೂರು ಸ್ಟೂಡೆಂಟ್; ಕಾರ್ಮಿಕರ ಕಷ್ಟದ ಜೀವನದ ಕುರಿತು ಹೇಳಿದ್ದೇನು?

ಬಿಸಿಸಿಸಿ ಪ್ರಕಾರ, ಪ್ರಸ್ತಾವಿತ ಈ ಹೊಸ ವ್ಯವಸ್ಥೆಯು ಆದಾಯ ಸೋರಿಕೆಯನ್ನು ತಡೆಗಟ್ಟುವುದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಮತ್ತು ಜನನಿಬಿಡ ಸಗಟು (ಹೋಲ್‌ಸೇಲ್) ಮಾರುಕಟ್ಟೆಯಲ್ಲಿ ಶುಲ್ಕ ವಸೂಲಾತಿ ಪ್ರಕ್ರಿಯೆಯನ್ನು ಆಧುನೀಕರಿಸುವ ಉದ್ದೇಶವನ್ನು ಹೊಂದಿದೆ.

ಪ್ರತಿಯೊಂದು ವಹಿವಾಟಿಗೂ ಎಲೆಕ್ಟ್ರಾನಿಕ್ ರಶೀದಿಗಳನ್ನು (ಇ-ರಶೀದಿ) ನೀಡಲಾಗುವುದು ಮತ್ತು ಯುಪಿಐ (UPI), ಫಾಸ್ಟ್‌ಟ್ಯಾಗ್ (FASTag), ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಹಾಗೂ ಪಿಒಎಸ್ (POS) ಯಂತ್ರಗಳ ಮೂಲಕ ಡಿಜಿಟಲ್ ರೂಪದಲ್ಲೇ ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ.

ಶುಲ್ಕ ವಂಚನೆ ಅಥವಾ ತಪ್ಪು ಮಾಹಿತಿಯೊಂದಿಗೆ ಕಡಿಮೆ ಪ್ರಮಾಣದ ಸರಕುಗಳನ್ನು ಘೋಷಿಸುವುದು ಭಾರಿ ದಂಡ ವಿಧಿಸಲು ಕಾರಣವಾಗಬಹುದು. ಮೊದಲ ಬಾರಿಯ ಉಲ್ಲಂಘನೆಗೆ ರೂ. 2,500 ರಿಂದ ಆರಂಭವಾಗಿ, ಮೂರನೇ ಬಾರಿಯ ಉಲ್ಲಂಘನೆಗೆ ರೂ. 10,000 ದವರೆಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani