Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ ಮತ್ತಷ್ಟು ಕಠಿಣ

ಭಾರತದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ ಮತ್ತಷ್ಟು ಕಠಿಣ

Vishwavani 2 weeks ago

ವದೆಹಲಿ, ಆ.28: ಭಾರತ ತಂಡ ಶ್ರೀಲಂಕಾ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ 1-0 ಅಂತರದ ಗೆಲುವಿನೊಂದಿಗೆ ತವರಿಗೆ ಮರಳಲಿದೆ. ಎರಡನೇ ಪಂದ್ಯದಲ್ಲಿ ಫಾಲೋ-ಆನ್ ಜಾರಿಗೊಳಿಸಿದರೂ ಕ್ಲೀನ್ ಸ್ವೀಪ್ ದಾಖಲಿಸಲು ಸಾಧ್ಯವಾಗದ ಕಾರಣ ತಂಡ ನಿರಾಶೆಗೊಂಡಿದೆ.ಜತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿಯೂ ಹಿನ್ನಡೆ ಕಂಡಿದೆ.

ಭಾರತದ ಮೊದಲ ಇನ್ನಿಂಗ್ಸ್ 503/9 ಡಿಕ್ಲೇರ್ ಗೆ ಉತ್ತರವಾಗಿ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 290 ರನ್ ಗಳಿಗೆ ಆಲೌಟ್ ಆದ ನಂತರ, ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ ಅಗಾಧವಾದ ಸುಧಾರಣೆಯನ್ನು ಕಂಡಿತು. ಮೊದಲ ಇನ್ನಿಂಗ್ಸ್ ಶತಕ ಬಾರಿಸಿದ್ದ ಸೋನಲ್‌ ದಿನುಶಾ ಎರಡನೇ ಇನಿಂಗ್ಸ್‌ನಲ್ಲಿಯೂ ಅಜೇಯ ಶತಕ ಬಾರಿಸಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದರು.

ಒಂದು ವೇಳೆ ಗೆದ್ದಿದ್ದರೆ ಭಾರತಕ್ಕೆ 12 ಅಂಕಗಳು ಸಿಗುತ್ತಿದ್ದವು ಮತ್ತು ಪಾಯಿಂಟ್‌ಗಳ ಶೇಕಡಾವಾರು (PCT) 63.33 ಕ್ಕೆ ಏರುತ್ತಿತ್ತು ಮತ್ತು ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರುತ್ತಿತ್ತು. ಆದಾಗ್ಯೂ, ಕೊಲಂಬೊ ಡ್ರಾ ನಂತರ ಭಾರತ ಮತ್ತು ಶ್ರೀಲಂಕಾ ತಲಾ ನಾಲ್ಕು ಅಂಕಗಳನ್ನು ಗಳಿಸಿದವು.

ಕೊಲಂಬೊ ಟೆಸ್ಟ್‌ನಲ್ಲಿ ಎರಡು ಶತಕ ಬಾರಿಸಿ ದಾಖಲೆ ಬರೆದ ಸೋನಲ್ ದಿನುಶಾ

ಆದರೆ ಭಾರತದ ಗೆಲುವಿನ ಶೇಕಾಡವಾರು ಅಂಕ 53.33 ರಿಂದ 51.51 ಕ್ಕೆ ಇಳಿದಿದೆ. ಹೀಗಿದ್ದರೂ ಭಾರತ ಐದನೇ ಸ್ಥಾನದಲ್ಲಿ ಸ್ಥಿರವಾಗಿ ಉಳಿದಿದೆ. ಮತ್ತೊಂದೆಡೆ, ಶ್ರೀಲಂಕಾದ ಗೆಲುವಿನ ಶೇಕಾಡವಾರು 33.33 ನಲ್ಲಿ ಬದಲಾಗದೆ ಉಳಿದಿದೆ. ಸದ್ಯ ತಂಡ ಆರನೇ ಸ್ಥಾನದಲ್ಲಿಯೇ ಉಳಿದಿದೆ.

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದ್ದರಿಂದ ತಂಡವು ತನ್ನ ಗೆಲುವಿನ ಶೇಕಾಡವಾರು ಅಂಕವನ್ನು 80ಕ್ಕೆ ಹೆಚ್ಚಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿತು. ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ 2025 ರ ನವೆಂಬರ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಿತು ಮತ್ತು 75 ಗೆಲುವಿನ ಶೇಕಾಡವಾರು ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಉದ್ಘಾಟನಾ ವಿಜೇತ ನ್ಯೂಜಿಲೆಂಡ್ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ನಂತರದ ಸ್ಥಾನದಲ್ಲಿದೆ.

ಭಾರತ ತಂಡವು ನವೆಂಬರ್ ಮಧ್ಯದಲ್ಲಿ ನ್ಯೂಜಿಲೆಂಡ್ ಪ್ರವಾಸದ ಸಮಯದಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಸೇರಿದಂತೆ ಪ್ರಸ್ತುತ ಏಳು ಟೆಸ್ಟ್ ಪಂದ್ಯಗಳು ಉಳಿದಿವೆ. ಈ ಎಲ್ಲ ಪಂದ್ಯಗಳನ್ನು ಗೆದ್ದರಷ್ಟೇ ಭಾರತಕ್ಕೆ ಫೈನಲ್‌ಗ ಪ್ರವೇಶಿಸುವ ಅವಕಾಶವೊಂದು ಸಿಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani