ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಈ ವಾರ ಮಂಜನ ವರ್ತನೆಗೆ ವೀಕ್ಷಕರು ಬೇಸರ ಹೊರ ಹಾಕಿದ್ದರು. ಇದಕ್ಕೆಲ್ಲ ಪಾಠ ಕಲಿಸಲು ಮತ್ತೊಮ್ಮೆ ಸುದೀಪ್ ಬಂದಿದ್ದಾರೆ ಕೊನೆಗೆ ಮಂಜನಿಗೆ ಒಳ್ಳೆಯ ರೀತಿಯಲ್ಲಿ ಸುದೀಪ್ ಮತ್ತು ಬಿಗ್ಬಾಸ್ ಬುದ್ಧಿ ಕಲಿಸಿದ್ದಾರೆ.
ಕನ್ಫೆಷನ್ ರೂಮಿನಲ್ಲಿ ಮಂಜ (Manja) ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ.
ಹೌದು ಮಂಜನಿಗೆ ಅವರೇ ಮಾತನಾಡಿರೋ ಪದಗಳನ್ನು ಕೇಳಿಸಿದ್ದಾರೆ. ಅವರ ತಾಯಿ ಬಳಿ ಬುದ್ಧಿ ಹೇಳಿಸಿದ್ದಾರೆ. ತಾಯಿ ಮಾತನಾಡಿ, ಮಂಜ ನೀವು ಮಾತನಾಡೋ ರೀತಿ ಸರಿಯಿಲ್ಲ. ಫ್ಯಾಮಿಲಿ ಕೂತುಕೊಂಡು ನೋಡೋ ಶೋ ಅದು. ಒಂದು ಕಡೆ ಇರೋರು ಒಂದು ತಾಯಿ ಮಕ್ಕಳಂತೆ ಆಡಬೇಕು. ಕೆಟ್ಟ ಪದಗಳನ್ನ ಮಾತನಾಡಬಾರದು. ನನಗೆ ಬೇಸರ ಆಯ್ತು. ಬೇರೆ ಅವರಿಗೂ ಅದೇ ಥರ ಆಗಿರುತ್ತೆ ಎಂದಿದ್ದಾರೆ. ತಾಯಿ ಮಾತುಗಳನ್ನು ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಮಂಜ.
Bigg Boss Kannada 13: 'ಕುನ್ನಿ' ಎಂದ ಗಾನವಿ; ಶೋ ಬಿಡಲು ಸಿದ್ಧವೆಂದ ಗಗನ್!
ಮನೆಯಲ್ಲಿ ಇತ್ತೀಚೆಗೆ ನಡೆದ ವಿವಿಧ ಕಿರಿಕ್‌ಗಳು ಮತ್ತು ಗಲಾಟೆಗಳ ಸಂದರ್ಭದಲ್ಲಿ ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಅವರು ಬಳಸಿದ ಅಸಭ್ಯ ಪದಗಳಿಗೆ ಪ್ರಸಾರದ ವೇಳೆ ನಿರಂತರವಾಗಿ 'ಬೀಪ್' ಶಬ್ದವನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಮಾಡರ್ನ್ ಮಹಾಕವಿ ಮಂಜು ಅವರು ಅತಿಯಾಗಿ ವರ್ತಿಸಿದ್ದಾರೆ ಮತ್ತು ಪದೇ ಪದೇ ಮಿತಿ ಮೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾರು ಸೇಫ್ ಆಗಲಿದ್ದಾರೆ ಮತ್ತು ಯಾರಿಗೆ ಗೇಟ್‌ಪಾಸ್ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ; Bigg Boss kannada 13: ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್! ಗಾನವಿ ಕೌಂಟರ್
ಮಂಜ ಸಾಧ್ಯವಾದಷ್ಟು ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. 'ನಾನು ಇರುವುದೇ ಹೀಗೆ' ಎಂದು ಹೇಳಿದ್ದಾರೆ. ಅವರ ಈ ಉದ್ಧಟತನಕ್ಕೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುವುದು ಗ್ಯಾರಂಟಿ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಂಜನ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

