Dailyhunt Logo
  • Light mode
    Follow system
    Dark mode
    • Play Story
    • App Story
ಬಿರಿಯಾನಿ ತಿಂದಿದ್ದಕ್ಕೆ ಶಿಕ್ಷೆ; ನೊಂದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ಬಿರಿಯಾನಿ ತಿಂದಿದ್ದಕ್ಕೆ ಶಿಕ್ಷೆ; ನೊಂದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

Vishwavani 2 weeks ago

ರಿಯಾಣ: ಬಿರಿಯನಿ (Biriyani) ತಿಂದು ಬಂದಿದ್ದಕ್ಕೆ ಶಿಕ್ಷೆಗೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ (self harming) ಮಾಡಿಕೊಂಡ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (faridabad) ನಡೆದಿದೆ. ಪ್ರಥಮ ಪಿಯುಸಿಯ 16 ವರ್ಷದ ವಿದ್ಯಾರ್ಥಿನಿ ಶಾಲೆ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ (crime news) ಮಾಡಿಕೊಂಡಿದ್ದಾಳೆ.

ಯಾರಿಗೂ ತಿಳಿಸದೇ ಬಿರಿಯಾನಿ ತಿಂದು ಬಂದಿದ್ದಕ್ಕೆ ಫರಿದಾಬಾದ್‌ನ ಘಾಜಿಪುರ ರಸ್ತೆಯ ನವೋದಯ ವಿದ್ಯಾ ನಿಕೇತನ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಆಕೆಗೆ ಶಿಕ್ಷೆ ನೀಡಿದ್ದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ದಬುವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫರಿದಾಬಾದ್‌ನ ನವೋದಯ ವಿದ್ಯಾ ನಿಕೇತನ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಜಾನ್ವಿಯನ್ನು ಮಂಗಳವಾರ ನಾಲ್ಕು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ದೇವಾಲಯದ ಬೀಗ ಮುರಿದು 12 ಲಕ್ಷ ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳ್ಳತನ

ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಿಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಬಿರಿಯಾನಿ ವಿಚಾರದಲ್ಲಿ ಆಕೆಯ ಸಹಪಾಠಿಗಳ ನಡುವೆ ಜಗಳ ನಡೆದಿದ್ದು, ಇದರಲ್ಲಿ ಜಾನ್ವಿ ಭಾಗಿಯಾಗಿರಲಿಲ್ಲ. ಆದರೂ ಅವಳಿಗೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಆಕೆ ಅವಮಾನ ಎಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತ್ತು ಎಂದು ವಿದ್ಯಾರ್ಥಿನಿಯ ತಂದೆ ಪಾಲಿ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ದೂರಿದ್ದಾರೆ.

ಶಾಲೆಯ ಪ್ರಾಂಶುಪಾಲರಾದ ಆರ್.ಕೆ. ಶರ್ಮಾ ಅವರು ಈ ಆರೋಪವನ್ನು ನಿರಾಕರಿಸಿದ್ದು, ವಿದ್ಯಾರ್ಥಿನಿಗೆ ಶಿಕ್ಷೆ ನೀಡಿಲ್ಲ. ಅವಳು ಸ್ನಾನಗೃಹಕ್ಕೆ ಹೋಗಬೇಕು ಎಂದು ಹೇಳಿ ತರಗತಿಯಿಂದ ಹೊರಬಂದವಳು ಶಾಲೆಯ ಮೂರನೇ ಮಹಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದಬುವಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಸುಮೇರ್ ಸಿಂಗ್, ವಿದ್ಯಾರ್ಥಿನಿ ಆತ್ಮಹತ್ಯೆಯ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜಾನ್ವಿ ಯಾರಿಗೂ ತಿಳಿಸದೆ ಬಿರಿಯಾನಿ ತಿನ್ನಲು ಹೋಗಿದ್ದಳು. ಇದಕ್ಕಾಗಿ ಶಿಕ್ಷಕರು ಆಕೆಯನ್ನು ಗದರಿಸಿ ನಾಲ್ಕು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳನ್ನು ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಕೂದಲು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಕ್ಕೆ 21 ವರ್ಷದ ಪುತ್ರಿಯನ್ನು ಕೊಂದ ತಂದೆ, ಚಿಕ್ಕಪ್ಪ; ಕ್ಷುಲ್ಲಕ ಕಾರಣಕ್ಕೆ ಹಾರಿಹೋಯ್ತು ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶದ ಯುವತಿಯ ಪ್ರಾಣ

ಮಾಹಿತಿ ಪಡೆದ ತಕ್ಷಣವೇ ದಬುವಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಯನ್ನು ಆರಂಭಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಹಪಾಠಿಗಳು ಮತ್ತು ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani