Dailyhunt
Brahmarathotsava: ಜನಸಾಗರದ ನಡುವೆ ನಡೆದ ಬಜಾರ್ ರಸ್ತೆಯ ಶ್ರೀಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

Brahmarathotsava: ಜನಸಾಗರದ ನಡುವೆ ನಡೆದ ಬಜಾರ್ ರಸ್ತೆಯ ಶ್ರೀಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

Vishwavani 1 week ago

ಚಿಕ್ಕಬಳ್ಳಾಪುರ: ನಗರದ ಬಜಾರ್ ರಸ್ತೆಯಲ್ಲಿರುವ ಶ್ರೀಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವ(Brahmarathotsava)ವು ಗುರುವಾರ ಜನಸಾಗರದ ನಡುವೆ ಶ್ರದ್ಧಾಭಕ್ತಿಯಿಂದ ರಾಮನಾಮದ ಜಯಘೋಷದ ನಡುವೆ ಸಂಭ್ರಮದಿಂದ ನಡೆಯಿತು.

ಪಾತಪಾಳ್ಯ ಗ್ರಾಮದ ಪಿ.ಆರ್.ರಾಧಕೃಷ್ಣ ಹಾಗೂ ಗ್ರಾಮದ ಪ್ರಮುಖರು ಹಾಗೂ ಪ್ರಧಾನ ಅರ್ಚಕರಾದ ಎಂ.ಎಸ್.ಶ್ರೀರಾಮನ್ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥಕ್ಕೆ ಹೂವು, ಧವನ, ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಾದಿಗಳು ಹರಕೆ ತೀರಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನೂ ಕೆಲವು ಪೋಷಕರು ತಮ್ಮ ಎಳೆಯ ಮಕ್ಕಳನ್ನು ರಥದಲ್ಲಿ ವಿರಾಜಮಾನವಾಗಿದ್ದ ಸೀತಾಸಮೇತ ಶ್ರೀರಾಮಚಂದ್ರಮೂರ್ತಿಗೆ ಕೈಮುಗಿಸುವ ಮೂಲಕ ದೇವರ ಆಶೀರ್ವಾದ ಬೇಡುತ್ತಿದ್ದ ದೃಶ್ಯಗಳು ಕಂಡು ಬಂದವು.

ರಥೋತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದಲೇ ಕೋದಂಡ ರಾಮಸ್ವಾಮಿ ದೇವಾಲ ಯದಲ್ಲಿ ಸ್ವಾಮಿಗೆ ಅಭಿಷೇಕಾದಿ ವಿವಿಧ ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಿದರು. ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಹೋಮ, ಮಂತ್ರಗಳ ಘೋಷ ಗಳ ನಡುವೆ ಯಥಾಪ್ರಕಾರ ಧಾರ್ಮಿಕ ಪೂಜೆಯನ್ನು ಮಾಡಲಾಯಿತು.

Chikkaballapur News: ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ದೃಢಪಡಿಸಿ ಮುಂದೆ ಸಾಗಬೇಕಿದೆ: ತಹಶೀಲ್ದಾರ್ ಗಗನಸಿಂಧು

ಬ್ರಹ್ಮರಥೋತ್ಸವದ ಅಂಗವಾಗಿ ಕೋದಂಡರಾಮಸ್ವಾಮಿ ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ್ದು ಕೋದಂಡ ರಾಮಸ್ವಾಮಿಮೂರ್ತಿಯನ್ನು ರಥ ದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕಿಕ್ಕಿರಿದು ನೆರೆದಿದ್ದ ಭಕ್ತರು ಹೂವು ಹಣ್ಣು ಧವನ ಬಾಳೆ ಹಣ್ಣನ್ನು ರಥಕ್ಕೆ ಎಸೆದು ಧನ್ಯರಾದರು.

ಚಿಕ್ಕಬಳ್ಳಾಪುರ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆ, ಹರಕೆಹೊತ್ತ ಭಕ್ತಾದಿ ಗಳು ದೇವಾಲಯಕ್ಕೆ ಭೇಟಿ ನೀಡಿ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಆಚರಣೆ ಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ದರ್ಶನ ಪಡೆದು ಪುನೀತರಾದರು.

ವಿವಿಧ ಸಂಘ-ಸಂಸ್ಥೆಗಳಿಂದ ಭಕ್ತಾದಿಗಳಿಗಾಗಿ ಕೋಸಂಬರಿ, ಮಜ್ಜಿಗೆ, ಪಾನಕ, ನೀರಿನ ಪಾಕೆಟ್, ಪ್ರಸಾದ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಥವು ಸಾಗುತ್ತಿದ್ದ ಬೀದಿ ಬೀದಿಗಳಲ್ಲಿ ಪಾನಕ ಪನ್ನೀರು ಸೇವೆಯನ್ನು ಏರ್ಪಡಿಸುವ ಮೂಲಕ ರಥೋತ್ಸವಕ್ಕೆ ಕಳೆ ತುಂಬಿದರು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್.ಸುದರ್ಶನ್, ಕೆ.ಎಸ್.ಗೋಪಾಲ ಕೃಷ್ಣ,ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್, ಹೆಚ್.ಎ.ವೆಂಕಟೇಶ್, ನ.ಸ.ಮಾ. ಅಧ್ಯಕ್ಷ ಕೆ.ವಿ.ಮಂಜುನಾಥ್, ಮಾಜಿ ನಗರಸಭಾ ಅಧ್ಯಕ್ಷ ಮುನಿಕೃಷ್ಣ, ಶ್ರೀಮತಿ ಶರಣ್ಯ, ಬಿ.ಮಹೇಶ್, ಮೊಬೈಲ್‌ಬಾಬು, ಡಾಂಬುಶ್ರೀನಿವಾಶ್, ರಾಮುಫರ್ನೀಚರ್ ರಾಮು, ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಅನುಆನಂದ್, ಸದಸ್ಯರು, ಅರ್ಚಕ ವರ್ಗ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani