Dailyhunt
ಬ್ಯಾಡಗಿ ಮೆಣಸಿನಕಾಯಿ ಖರೀದಿಯಲ್ಲಿ ವಂಚನೆ; ರೈತನಿಗೆ 50 ಲಕ್ಷ ರೂ. ಪಂಗನಾಮ ಹಾಕಿದ ವ್ಯಕ್ತಿ!

ಬ್ಯಾಡಗಿ ಮೆಣಸಿನಕಾಯಿ ಖರೀದಿಯಲ್ಲಿ ವಂಚನೆ; ರೈತನಿಗೆ 50 ಲಕ್ಷ ರೂ. ಪಂಗನಾಮ ಹಾಕಿದ ವ್ಯಕ್ತಿ!

Vishwavani 1 week ago

ಹಾವೇರಿ: ಬ್ಯಾಡಗಿ ಒಣ ಮೆನಸಿನಕಾಯಿ ಮಾರುಕಟ್ಟೆಯ ತಿಪ್ಪೇಸ್ವಾಮಿ ಟೇಡರ್ಸನ ಮಾಲೀಕ ನಾಗಪ್ಪ ಹಡಗಲಿ ರೈತನಿಂದ 127 ಕ್ವಿಂಟಾಲ್ ಒಣ ಮೆಣನಸಿನಕಾಯಿ ಖರೀದಿಸಿ ಹಣ ಕೊಡದೆ ಮೋಸ (Haveri News) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲಾ ಶಿರಗುಪ್ಪ ತಾಲೂಕಿನ ಬಡ್ರಹಾಳ ಗ್ರಾಮದ ರೈತನಾದ ಕೆ.

ಮಹದೇವಪ್ಪ,ಪತ್ನಿ ಲಕ್ಷ್ಮಿ ಮಗ ಪಂಪಾಪತಿ, ಇವರಿಂದ ದಲ್ಲಾಳಿ ನಾಗಪ್ಪ ಹಡಗಲಿ 2023 ರಲ್ಲಿ 363 ಚೀಲ ಒಣ ಮೆಣಸಿನಕಾಯಿ ಪಡೆದುಕೊಂಡು ಒಳ್ಳೆಯ ದರಕ್ಕೆ ಮಾರಾಟ ಮಾಡಿಸಿ ಹಣ ಕೊಡಿಸುವೆ ಎಂದು ನಂಬಿಸಿ ಅಮಾಯಕ ರೈತನಿಗೆ ಮೋಸ ಮಾಡಿದ್ದಾನೆ‌.

ಹಣ ಕೇಳಿದ್ದಕ್ಕೆ ಆರೋಪಿ ರೈತನಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿನೀಯ ನ್ಯಾಯ ಸಿಗುವವರೆಗೂ ಹಿಂದೆ ಸರಿಯಲ್ಲ ಬೀದಿಗೆ ಇಳಿದು ಹೋರಾಟ ಅನಿವಾರ್ಯ ಎಂದು‌ ರೈತ ಕಣ್ಣೀರಿಟ್ಟಿದ್ದಾನೆ.

ರೈತ ಮಹಾದೇವಪ್ಪ ಅವರು 2023ರಲ್ಲಿ ದರ ಕಡಿಮೆ ಇದ್ದಿದ್ದರಿಂದ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟು ಹೋಗಿದ್ದರು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದ್ದರಿಂದ, ಅದನ್ನು ಮಾರಾಟ ಮಾಡಲು ಬಂದಾಗ ಮೆಣಸಿನಕಾಯಿ ಚೀಲಗಳು ನಾಪತ್ತೆಯಾಗಿರುವುದು ಕಂಡು ಶಾಕ್​​ ಆಗಿದ್ದಾರೆ.

ತಿಪ್ಪೇಸ್ವಾಮಿ ಮೆಣಸಿನಕಾಯಿ ಏಜೆನ್ಸಿಯವರು ರೈತನಿಗೆ ಆರಂಭದಲ್ಲಿ ಕೂಲಿ ಕಾರ್ಮಿಕರಿಗೆ ನೀಡುವ ನೆಪದಲ್ಲಿ ಸ್ವಲ್ಪ ಹಣ ನೀಡಿದ್ದರೂ, ನಂತರದ ದಿನಗಳಲ್ಲಿ ರೈತನ ಹೆಸರಿನಲ್ಲಿರುವ ಸುಮಾರು 50 ಲಕ್ಷ ರೂ ಮೌಲ್ಯದ ಮೆಣಸಿನಕಾಯಿಯನ್ನು ರೈತನ ಅನುಮತಿಯಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಮೂಲ ದಾಖಲೆಗಳನ್ನ ತೆಗೆದುಕೊಂಡು ನಮಗೆ ಮೋಸ ಮಾಡಿದ್ದಾರೆ. ನ್ಯಾಯ ಬೇಕು ಅಂತಾ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ರೈತ ಮಹಾದೇವಪ್ಪ ಪ್ರಕರಣ ದಾಖಲಿಸಿದ್ದಾರೆ.

ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ನನಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಆರೇಳು ತಿಂಗಳು ಹೊಟ್ಟೆ ಗೆ ಊಟ ಇಲ್ಲದೇ ಬೆಳೆ ಬೆಳೆದು ಮಾರುಕಟ್ಟೆಗೆ ಬಂದರೆ ಇಂತಹ ವ್ಯಾಪಾರಿಗಳು ನಮ್ಮನ್ನು ನಂಬಿಸಿ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಇಂತವರಿಗೆ ಕಠಿಣ ಕಾನೂನು ಜಾರಿ ಆಗಬೇಕು. ದಲ್ಲಾಳಿ ನಮ್ಮನ್ನು ನಂಬಿಸಿ ಮುಂಗಡವಾಗಿ11 ಲಕ್ಷ ಹಣವನ್ನು ಬ್ಯಾಂಕ್ ಖಾತೆ ವರ್ಗಾವಣೆ ಮಾಡಿದ್ದಾನೆ. ದರ ಏರುಪೇರು ಆಗುತ್ತಿದೆ.

ಬ್ಯಾಡಗಿಯ ಬಸವೇಶ್ವರ ಕೋಲ್ಡ್ ಸ್ಟೋರೇಜ್ ಗೆ ಶಿಪ್ಟ್ ಮಾಡಿ ನಮ್ಮ ಹೆಸರಲ್ಲಿ ಬಿಲ್ ಪಡೆದುಕೊಂಡಿದ್ದಾನೆ. ಸುರಕ್ಷಿತವಾಗಿ ಇಟ್ಟು ಒಳ್ಳೆಯ ಬೆಲೆ ಕೊಡುವುದಾಗಿ ಮೋಸ ಮಾಡಿದ್ದಾನೆ. ಜ.16 ರಂದು ಹೇಳದೇ ಕೇಳದೆ ಕೋಲ್ಡ್ ಸ್ಟೋರೇಜ್ ನಿಂದ ರಿಲೀಸ್ ಮಾಡಿಕೊಂಡು ನಮ್ಮ ಮಣಸಿಕಾಯಿ ಮಾರಿ ಹಣ ಕೊಡದೇ ನಮ್ಮ ಮೇಲೇನೆ ದೌರ್ಜನ್ಯ ಮಾಡುತ್ತಿದ್ದಾನೆ. ನಂಬಿ ಬೆಳೆ ನೀಡಿದ್ದೆ ಹಣ ಕೊಡಿ ಎಂದು ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ದಲ್ಲಾಳಿ ನಾಗಪ್ಪ ಹಡಗಲಿಯನ್ನು ಕೂಡಲೇ ಬಂಧಿಸಿ ನ್ಯಾಯ ಕೊಡಿಸಿ ಇಲ್ಲದಿದ್ದರೆ ಅಮರಣ ಉಪವಾಸ ಮಾಡುವುದಾಗಿ ರೈತ ಕೆ. ಮಹಾದೇವಪ್ಪ ಎಚ್ಚರಿಕೆ ನೀಡಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani