Dailyhunt Logo
  • Light mode
    Follow system
    Dark mode
    • Play Story
    • App Story
Chinthamani News: ಚಿಂತಾಮಣಿಯ ನರಸಿಂಹಪೇಟೆಯಲ್ಲಿ ಅ.9ರಿಂದ ನವರಾತ್ರಿ, ಗಣೇಶೋತ್ಸವ

Chinthamani News: ಚಿಂತಾಮಣಿಯ ನರಸಿಂಹಪೇಟೆಯಲ್ಲಿ ಅ.9ರಿಂದ ನವರಾತ್ರಿ, ಗಣೇಶೋತ್ಸವ

Vishwavani 2 days ago

ಚಿಂತಾಮಣಿ: ನಗರದ ವಾರ್ಡ್‌ ನಂ.24ರ ನರಸಿಂಹಪೇಟೆಯಲ್ಲಿ 35ನೇ ವರ್ಷದ ಗಣೇಶೋತ್ಸವ ಹಾಗೂ 7ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅ.9ರಿಂದ ಅದ್ದೂರಿಯಾಗಿ ಆಯೋಜಿಸ ಲಾಗಿದೆ ಎಂದು ಯುವಕರ ಬಳಗದ ಮುಖಂಡರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮುಖಂಡ ಶ್ರೀನಿವಾಸ್, ಕಳೆದ 35 ವರ್ಷ ಗಳಿಂದ ಗಣೇಶೋತ್ಸವ ಹಾಗೂ ಏಳು ವರ್ಷಗಳಿಂದ ನವರಾತ್ರಿ ದುರ್ಗಾಮಾತಾ ದೇವಿ ಉತ್ಸವ ವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಬಾರಿಯೂ ಹೈದರಾಬಾದ್‌ ನಿಂದ ತರಿಸಿರುವ ದುರ್ಗಾಮಾತಾ ಹಾಗೂ ಗಣೇಶನ ವಿಗ್ರಹಗಳನ್ನು ಅ.9ರಂದು ಸಂಜೆ 7 ಗಂಟೆಗೆ ವಿದ್ಯುತ್ ದೀಪಾಲಂಕಾರ ಹಾಗೂ ವಾದ್ಯಮೇಳದೊಂದಿಗೆ ಭವ್ಯವಾಗಿ ಬರಮಾಡಿಕೊಳ್ಳಲಾಗುವುದು ಎಂದರು.

Chikkaballapur News: ಸಾಹಿತಿ-ಹೋರಾಟಗಾರರ ಸೇವೆ ಪರಿಗಣಿಸಿ ಆಯ್ಕೆ ಮಾಡುವಂತೆ ಸಿ.ಕೆ.ರಾಮೇಗೌಡ ಮನವಿ

ಅ.9ರಿಂದ 20ರವರೆಗೆ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಹಾಗೂ ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಅ.9ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್, ಸಮಾಜ ಸೇವಕ ವೇಣುಗೋಪಾಲ್ ಪಾಲ್ಗೊಳ್ಳಲಿದ್ದು, ಅ.17ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಉತ್ಸವದ ಸಮಾರೋಪದ ಅಂಗವಾಗಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ನರಸಿಂಹಪೇಟೆ, ಎಂ.ಜಿ.ರಸ್ತೆ ಸೇರಿದಂತೆ ನಗರದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ, ಕನ್ನಂಪಲ್ಲಿ ಓಟಿ ಕೆರೆಯಲ್ಲಿ ದೇವರ ವಿಗ್ರಹಗಳ ವಿಸರ್ಜನೆ ನೆರವೇರಿಸ ಲಾಗುವುದು. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂಬ ಆಶಯದೊಂದಿಗೆ ಉತ್ಸವ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಶ್ರೀನಿವಾಸ್, ಸಂತೋಷ್, ಪ್ರಶಾಂತ್, ವೇಣು, ಪವನ್, ಚಂದನ್, ಆಕಾಶ್, ಸುಬ್ರಮಣ್ಯ ಚಾರಿ, ರಮೇಶ್, ಶಾಮ್, ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani