Dailyhunt Logo
  • Light mode
    Follow system
    Dark mode
    • Play Story
    • App Story
ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಿದ್ದರೆ ಏನೆಲ್ಲ ಸಮಸ್ಯೆಯಾಗುತ್ತೆ ಗೊತ್ತಾ?

ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಿದ್ದರೆ ಏನೆಲ್ಲ ಸಮಸ್ಯೆಯಾಗುತ್ತೆ ಗೊತ್ತಾ?

Vishwavani 3 weeks ago

ಬೆಂಗಳೂರು: ಉಪ್ಪು ಎಂದರೆ ತಕ್ಷಣವೇ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಮೂಡುವುದು ಸಾಮಾನ್ಯ ಆದರೆ, ಉಪ್ಪಿನಲ್ಲಿರುವ ಮುಖ್ಯ ಅಂಶವಾದ ಸೋಡಿಯಂ ದೇಹದಲ್ಲಿ ಸಾಕಷ್ಟು ಕಾರ್ಯಗಳು (Health Tips) ಸಾರಾಗವಾಗಿ ನಡೆಯಲು ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಜೀವಕೋಶಗಳ ಸರಿಯಾದ ಕಾರ್ಯನಿರ್ವಹಣೆಗೆ ಸೋಡಿಯಂ ಕಾರಣವಾಗಿದೆ.

ಇದಲ್ಲದೆ, ಇದು ಎಲೆಕ್ಟ್ರೋಲೈಟ್‌ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದಾಗ್ಯೂ ಸೋಡಿಯಂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಭಾವಿಸುತ್ತಾರೆ. ಪೌಷ್ಟಿಕತಜ್ಞರ ಪ್ರಕಾರ ಸೋಡಿಯಂ ನಾವು ಅಂದುಕೊಂಡತೆ ಕಟ್ಟದ್ದಲ್ಲ ಬದಲಿಗೆ, ಅದು ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಒಂದು ಪ್ರಮುಖ ಖನಿಜಾಂಶವಾಗಿದೆ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಜನರು ದಿನನಿತ್ಯದ ಆಹಾರದಿಂದಲೇ ಅಗತ್ಯ ಸೋಡಿಯಂ ಪಡೆಯುತ್ತಾರಾದರೂ, ಅತಿಯಾಗಿ ಬೆವರಿದಾಗ, ಕಠಿಣ ವ್ಯಾಯಾಮ ಮಾಡಿದಾಗ, ಬಿಸಿಲಿನ ವಾತಾವರಣದಲ್ಲಿ ಅಥವಾ ಕೆವಲು ನಿರ್ದಿಷ್ಟ ಆಹಾರ ಪದ್ಧತಿಗಳಿಂದಾಗಿ ದೇಹದಲ್ಲಿ ಇದರ ಮಟ್ಟ ವ್ಯತ್ಯಾಸವಾಗಬಹುದು. ತಜ್ಞರ ಪ್ರಕಾರ ದೇಹದಲ್ಲಿ ಸೋಡಿಯಂ ಕೊರೆತೆಯಾದಾಗ ಕೆಲವು ಲಕ್ಷಣಗಳು ಕಂಡುಬರುತ್ತವೆ. ಆದರೆ ನಾವು ಅವುಗಳನ್ನು ನಿರ್ಲಕ್ಷಿಸುತ್ತೇವೆ.

ದೇಹಕ್ಕೆ ಹೆಚ್ಚು ಉಪ್ಪಿನ ಅಗತ್ಯವಿದೆ ಎಂಬುದನ್ನು ತಿಳಿಸುವ ಮೂರು ಲಕ್ಷಣಗಳು

ಎಷ್ಟೇ ನೀರು ಕುಡಿದರೂ ಸದಾ ಬಾಯಾರಿಕೆಯಾಗುವುದು

ನೀವು ಸಾಕಷ್ಟು ನೀರು ಕುಡಿದು ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದರೂ, ಸದಾ ಬಾಯಾರಿಕೆಯಾಗುತ್ತಿದ್ದರೆ, ನಿಮ್ಮ ದೇಹದಲ್ಲಿ ಸೋಡಿಯಂ ಕೊರತೆಯಿರಬಹುದು. ದೇಹವನ್ನು ಹೈಡ್ರೇಟ್ ಆಗಿಡುವುದು ಎಂದರೆ ಕೇವಲ ದ್ರವಾಂಶವನ್ನು ತೆಗೆದುಕೊಳ್ಳುವುದಷ್ಟೇ ಅಲ್ಲ, ಅದು ನೀರು, ಎಲಕ್ಟ್ರೋಲೈಟ್ ಮತ್ತು ಸೋಡಿಯಂ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವುದಾಗಿದೆ ಎನ್ನುತ್ತಾರೆ ವೈದ್ಯರು.

ಅತಿಯಾಗಿ ಸಿಹಿ ತಿನ್ನುವ ಹಂಬಲ

ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾದಾಗ, ನರ ಮತ್ತು ಸ್ನಾಯುಗಳ ಕಾರ್ಯಕ್ಷಮತೆಗೆ ಧಕ್ಕೆಯಾಗಿ ತೀವ್ರವಾದ ಆಯಾಸ ಮತ್ತು ಶಕ್ತಿಯು ಕಡಿಮೆಯಾದಂತೆ ಅನಿಸುತ್ತದೆ. ಈ ಶಕ್ತಿಯ ಕೊರತೆಯನ್ನು ತಕ್ಷಣವೇ ಸರಿದೂಗಿಸಲು ನಮ್ಮ ಮೆದುಳು ತ್ವರಿತ ಶಕ್ತಿ ನೀಡುವ ಸಿಹಿ ಪದಾರ್ಥಗಳನ್ನು ತಿನ್ನುವಂತೆ ಪ್ರಚೋದಿಸುತ್ತದೆ. ಅತಿಯಾದ ಬೆವರುವಿಕೆಯಿಂದ ಸೋಡಿಯಂ ಹೊರಹೋದಾಗ, ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಸಮತೋಲನ ತಪ್ಪಿ ನಿಯಂತ್ರಿಸಲಾಗದ ಸಿಹಿ ತಿನ್ನುವ ಹಂಬಲ ಶುರುವಾಗುತ್ತದೆ. ಈ ಸಮಯದಲ್ಲಿ ನಮಗೆ ಸಿಹಿ ತಿನ್ನಬೇಕು ಎನಿಸಿದರೂ, ನಿಜವಾಗಿ ದೇಹ ಕೇಳುತ್ತಿರುವುದು ಸೋಡಿಯಂ ಅಥವಾ ಎಲಕ್ಟ್ರೋಲೈಟ್ . ಆದ್ದರಿಂದ ಸಿಹಿ ಪದಾರ್ಥಗಳನ್ನು ತಿನ್ನುವ ಮುನ್ನ, ಆಹಾರದಲ್ಲಿ ಸರಿಯಾದ ಪ್ರಮಾಣದ ಉಪ್ಪಿನಾಂಶ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.

ಚರ್ಮದ ಆರೋಗ್ಯದಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಬೀಜಗಳ ಆರೋಗ್ಯ ಲಾಭ ಒಂದೆರಡಲ್ಲ!

ಸ್ನಾಯು ಸೆಳೆತಗಳು

ಪೌಷ್ಟಿಕತಜ್ಞರ ಪ್ರಕಾರ, ವಿಶೇಷವಾಗಿ ಮದ್ಯಪಾನ ಮಾಡಿದ ಮರುದಿನ ಪಾದದ ಬೆರಳುಗಳು ಮಡಚಿಕೊಳ್ಳುವುದು, ಕೆಳಕಾಲು ಹಾಗೂ ಕೈಗಳ ಸ್ನಾಯುಗಳು ಬಿಗಿತಗೊಳ್ಳುವುದು ಮತ್ತು ಹೊಟ್ಟೆಯ ಸ್ನಾಯುಗಳು ಗಟ್ಟಿಯಾಗುವಂತಹ ವಿಚಿತ್ರ ಸೆಳೆತಗಳು ಕಂಡುಬಂದರೆ, ಅದು ನಿಮ್ಮ ದೇಹಕ್ಕೆ ಸೋಡಿಯಂ ಅಗತ್ಯವಿದೆ ಎಂಬುದರ ಸಂಕೇತವಾಗಿದೆ. ಈ ಸಮಯದಲ್ಲಿ ಕೇವಲ ನೀರಿನ ಅಗತ್ಯವಿದೆ ಎಂದು ಭಾವಿಸಬೇದೆ ನಿಮ್ಮ ದೇಹಕ್ಕೆ ಸೋಡಿಯಂ ಅವಶ್ಯಕತೆ ಇದೆ ಎಂಬುವುದನ್ನು ಅರಿತುಕೊಳ್ಳಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani