Dailyhunt Logo
  • Light mode
    Follow system
    Dark mode
    • Play Story
    • App Story
ದೇಶದ ಇತಿಹಾಸದಲ್ಲಿ ನಡೆದ ಅತೀ ಭೀಕರ ಅಗ್ನಿ ದುರಂತಗಳಿವು

ದೇಶದ ಇತಿಹಾಸದಲ್ಲಿ ನಡೆದ ಅತೀ ಭೀಕರ ಅಗ್ನಿ ದುರಂತಗಳಿವು

Vishwavani 1 month ago

1/6

ದೆಹಲಿಯ ಮಾಳವೀಯ ನಗರದ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ 8.50ರ ಸುಮಾರಿಗೆ ಬೆಂಕಿ ದುರಂತ ಸಂಭವಿಸಿತ್ತು. ಇಂತಹ ದುರ್ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ.

2/6

1997ರ ಜೂನ್ 13 ರಂದು ಜನಪ್ರಿಯ ಬಾಲಿವುಡ್ ಚಲನಚಿತ್ರ ಬಾರ್ಡರ್ ಪ್ರದರ್ಶನದ ಸಮಯದಲ್ಲಿ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿರುವ ಉಪಹಾರ್ ಚಿತ್ರಮಂದಿರದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು. ಇದರಲ್ಲಿ 59 ಮಂದಿ ಸಾವನ್ನಪ್ಪಿದ್ದು, 103 ಮಂದಿ ಗಾಯಗೊಂಡಿದ್ದರು.

3/6

ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು 94 ಮಕ್ಕಳು ಸಾವನ್ನಪ್ಪಿದ್ದರು. ನರ್ಸರಿ, ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗದ ತರಗತಿ ಕೊಠಡಿಗಳಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

4/6

2006ರ ಏಪ್ರಿಲ್ 15ರಂದು ಮೀರತ್‌ನಲ್ಲಿ ನಡೆದ ಬ್ರಾಂಡ್ ಇಂಡಿಯಾ ಫೇರ್‌ನಲ್ಲಿ ಉಂಟಾದ ಅಗ್ನಿ ದುರಂತದಲ್ಲಿ 50 ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾದರು. ಇದನ್ನು ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿ ಕೂಡ ಗಾಯಗೊಂಡಿದ್ದರು.

5/6

2004ರ ಜನವರಿ 23ರಂದು ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಐಕಾನಿಕ್ ಸ್ಟೀಫನ್ ಕೋರ್ಟ್ ಕಟ್ಟಡದಲ್ಲಿ ಉಂಟಾದ ಬೆಂಕಿಯು 42 ಜನರನ್ನು ಬಲಿ ತೆಗೆದುಕೊಂಡಿತು. ಇದರಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು.

6/6

ಹರಿಯಾಣದ ಮಂಡಿ ದಬ್ವಾಲಿ ಅಗ್ನಿ ಅವಘಡದಲ್ಲಿ 300 ಮಂದಿ ಸಾವನ್ನಪ್ಪಿದ್ದರು. ಇದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತ. ಪೆಂಡಲ್ ಗೆ ಬೆಂಕಿ ತಗಲಿ ಕುಸಿದು ಅಪಘಾತ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani