Dailyhunt
ದ್ವಿತೀಯ ಪಿಯು ರಿಸಲ್ಟ್‌ ಗೊಂದಲಕ್ಕೆ ತೆರೆ; ಏಪ್ರಿಲ್‌ 9ರ ಅಪರಾಹ್ನ 3 ಗಂಟೆಗೆ ಫಲಿತಾಂಶ ಘೋಷಣೆ

ದ್ವಿತೀಯ ಪಿಯು ರಿಸಲ್ಟ್‌ ಗೊಂದಲಕ್ಕೆ ತೆರೆ; ಏಪ್ರಿಲ್‌ 9ರ ಅಪರಾಹ್ನ 3 ಗಂಟೆಗೆ ಫಲಿತಾಂಶ ಘೋಷಣೆ

Vishwavani 2 weeks ago

ಬೆಂಗಳೂರು, ಏ. 8: ದ್ವಿತೀಯ ಪಿಯುಸಿ ಫಲಿತಾಂಶದ (2nd PUC Result) ದಿನಾಂಕ ಗೊಂದಲಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ತೆರೆ ಎಳೆದಿದೆ. ಏಪ್ರಿಲ್​​ 9ರ ಅಪರಾಹ್ನ 3 ಗಂಟೆಗೆ ರಿಸಲ್ಟ್‌ ಹೊರ ಬೀಳಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಮಂಡಳಿ ಅಧಿಕೃತವಾಗಿ ಘೋಷಿಸಿದೆ.

ʼʼ2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ ಏಪ್ರಿಲ್‌ 9ರ ಅಪರಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದುʼʼ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಅಧಿಕೃತ ವೆಬ್‌ಸೈಟ್​ನಲ್ಲೂ ವಿದ್ಯಾರ್ಥಿಗಳು ರಿಸಲ್ಟ್​ ನೋಡಬಹುದು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಆನ್​ಲೈನ್​ನಲ್ಲಿ ನೋಡುವುದು ಹೇಗೆ?

  • ಮೊದಲು ಅಧಿಕೃತ ವೆಬ್‌ಸೈಟ್ karresults.nic.inಗೆ ಭೇಟಿ ನೀಡಿ
  • 'Karnataka 2nd PUC Result 2026' ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • 'Submit' ಬಟನ್ ಒತ್ತಿದ ತಕ್ಷಣ ನಿಮ್ಮ ಪರೀಕ್ಷೆ ಅಂಕಪಟ್ಟಿ ಸಿಗಲಿದೆ.

ಆಯಪ್‌, ಎಸ್‌ಎಂಎಸ್‌ ಮೂಲಕವೂ ಫಲಿತಾಂಶ ಲಭ್ಯ

ಕರ್ನಾಟಕ ಒನ್ (KarnatakaOne) ಮೊಬೈಲ್ ಆಯಪ್‌ ಮೂಲಕವೂ ರಿಸಲ್ಟ್‌ ಪಡೆದುಕೊಳ್ಳಬಹುದು. ಅಲ್ಲದೆ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಳಿಯಿಂದಲೇ ವಾಟ್ಸ್‌ಆಯಪ್‌ (WhatsApp) ಅಥವಾ ಎಸ್‌ಎಂಎಸ್ (SMS) ಮೂಲಕ ಫಲಿತಾಂಶದ ವಿವರಗಳನ್ನು ರವಾನಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.

ಡಿಜಿಲಾಕರ್ ಮೂಲಕ ಅಂಕಪಟ್ಟಿ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ಈ ವರ್ಷ ಇದೇ ಮೊದಲ ಬಾರಿಗೆ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕವೂ ಒದಗಿಸಲು ಕ್ರಮ ಕೈಗೊಂಡಿದೆ. ಡಿಜಿಲಾಕರ್‌ನಲ್ಲಿ ಅಪರಾಹ್ನ 3 ಗಂಟೆಯಿಂದ ಅಂಕಪಟ್ಟಿ ಲಭ್ಯವಿರಲಿದೆ.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ; ಏಪ್ರಿಲ್‌ 9ಕ್ಕೆ ಸರ್ಕಾರಿ ನೌಕರರಿಗೆ ರಜೆ ಘೋಷಣೆ

7,10,363 ವಿದ್ಯಾರ್ಥಿಗಳ ಭವಿಷ್ಯ

ಫೆಬ್ರವರಿ 28ರಿಂದ ಮಾರ್ಚ್​ 17ವರೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ರಾಜ್ಯಾದ್ಯಂತ 1,217 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು.

ಆರಂಭದಲ್ಲಿ ಏಪ್ರಿಲ್‌ 7ರಂದು ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ರಿಸಲ್ಟ್​ ಮುಂದೂಡಿಕೆ ಆದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಮೂಡಿತ್ತು. ಮೌಲ್ಯಮಾಪನದ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದ ಹಿನ್ನೆಲೆ ಫಲಿತಾಂಶ ತಡವಾಗಿದೆ ಎಂದು ಪ್ರಕಟಣೆ ವಿವರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani