Dailyhunt Logo
  • Light mode
    Follow system
    Dark mode
    • Play Story
    • App Story
ʻಈ ಹೀನಾಯ ಸೋಲು ಸ್ವೀಕಾರಾರ್ಹವಲ್ಲʼ-ದಾಖಲೆಯ ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್‌ ಆಕ್ರೋಶ!

ʻಈ ಹೀನಾಯ ಸೋಲು ಸ್ವೀಕಾರಾರ್ಹವಲ್ಲʼ-ದಾಖಲೆಯ ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್‌ ಆಕ್ರೋಶ!

Vishwavani 1 month ago

ನಾಟಿಂಗ್‌ಹ್ಯಾಮ್‌: ಬ್ಯಾಟಿಂಗ್‌ ವೈಫಲ್ಯದ ಪರಿಣಾಮವಾಗಿ ಭಾರತ ತಂಡ ಮೂರನೇ ಪಂದ್ಯದಲ್ಲಿ (IND vs ENG) 125 ರನ್‌ಗಳ ಸೋಲು ಅನುಭವಿಸಿತು. ಟಿ20ಐ ಇತಿಹಾಸದಲ್ಲಿಯೇ ಭಾರತ ತಂಡದ ಅತ್ಯಂತ ದೊಡ್ಡ ಅಂತರದ ಸೋಲು ಇದಾಗಿದೆ. ಆ ಮೂಲಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರು ಆಡಿದ ಐದು ಪಂದ್ಯಗಳಲ್ಲಿ ಇನ್ನೂ ಗೆಲುವು ಕಾಣದೆ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ಶ್ರೇಯಸ್‌ ಅಯ್ಯರ್‌, ಈ ಸೋಲು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ ಹಾಗೂ ಪ್ರತಿಯೊಬ್ಬರೂ ತಂಡದ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆದ ಬಳಿಕ ಸೂರ್ಯಕುಮಾರ್‌ ಯಾದವ್‌ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಆ ಮೂಲಕ 2028ರ ಐಸಿಸಿ ಟಿ20 ವಿಶ್ವಕಪ್‌ ಹಾಗೂ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ನಿಮಿತ್ತ ಶ್ರೇಯಸ್‌ ಅಯ್ಯರ್‌ಗೆ ಅವರಿಗೆ ನಾಯಕತ್ವವನ್ನು ನೀಡಲಾಗಿತ್ತು. ಆದರೆ, ಅವರ ನಾಯಕತ್ವದಲ್ಲಿ ಭಾರತ ತಂಡ ಆಡಿದ ಐದು ಪಂದ್ಯಗಳಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ, ಐರ್ಲೆಂಡ್‌ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿದ್ದ ಟೀಮ್‌ ಇಂಡಿಯಾ, ಇಂಗ್ಲೆಂಡ್‌ ವಿರುದ್ಧ ಅಷ್ಟೇ ಪಂದ್ಯಗಳನ್ನು ಸೋತಿದೆ. ಇನ್ನು ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

IND vs ENG: ಆರ್ಚರ್‌, ಟಂಗ್‌ ಮಾರಕ ದಾಳಿಗೆ ಭಾರತ ಉಡೀಸ್‌, ಇಂಗ್ಲೆಂಡ್‌ಗೆ ಸತತ ಎರಡನೇ ಜಯ!

ಜುಲೈ 7 ರಂದು ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ, ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 201 ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ಜೋಫ್ರಾ ಆರ್ಚರ್‌ ಹಾಗೂ ಜಾಶ್‌ ಟಂಗ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 76 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 125 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು.

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶ್ರೇಯಸ್‌ ಅಯ್ಯರ್‌, "ಈ ಸೋಲು ಅತ್ಯಂತ ಭೀಕರವಾಗಿತ್ತು.ಇಷ್ಟು ದೊಡ್ಡ ಅಂತರದಲ್ಲಿ ಸೋಲುವುದು ಸ್ವೀಕಾರಾರ್ಹವಲ್ಲ. ಮೊದಲನೇಯದಾಗಿ ನಾವು ಸೋಲನ್ನು ಸ್ವೀಕರಿಸಬೇಕು ಹಾಗೂ ಚಿತ್ರ ಬಿಡಿಸುವ ಹಲಗೆಗೆ ಹೋಗಬೇಕಾಗಿದೆ. 200 ರನ್‌ಗಳನ್ನು ಕಲೆ ಹಾಕುವ ವಿಎಟ್‌ ಇದಾಗಿರಲಿಲ್ಲ. ಪವರ್‌ಪ್ಲೇನಲ್ಲಿ 4 ವಿಕೆಟ್‌ ಕಳೆದುಕೊಳ್ಳುವುದರಿಂದ ಆವೇಗ ಸೃಷ್ಟಿಯಾಗುವುದಿಲ್ಲ.ನೀವು ಸಾಕಷ್ಟು ಯೋಜನೆ ಮಾಡಬಹುದು. ನೀವು ಒಮ್ಮೆ ಮೈದಾನಕ್ಕೆ ಬಂದರೆ, ನೀವು ಹೊಂದಿಕೊಳ್ಳಬೇಕು ಹಾಗೂ ಯಾವ ಲೆನ್ತ್‌ ಹಾಕಬೇಕೆಂದು ಅರಿತುಕೊಳ್ಳಬೇಕು. ಹಾರ್ಡ್‌ ಲೆನ್ತ್‌ ನೆರವು ನೀಡುತ್ತದೆ; ನಾವು ಅದನ್ನು ಕಾರ್ಯರೂಪಕ್ಕೆ ತರಲಿಲ್ಲ," ಎಂದು ಬೌಲರ್‌ಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ʻಟಿ20 ವಿಶ್ವಕಪ್‌ ಜಯದ ಹೀರೋʼ-ಸಂಜು ಸ್ಯಾಮ್ಸನ್‌ಗೆ ಕೊಕ್‌ ನೀಡಿದ ಬಿಸಿಸಿಐ ವಿರುದ್ಧ ಅಜಿಂಕ್ಯ ರಹಾನೆ ಕಿಡಿ!

ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು

202 ರನ್‌ಗಳ ಚೇಸಿಂಗ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲು ಜೋಫ್ರಾ ಆರ್ಚರ್‌ ಹಾಗೂ ಜಾಶ್‌ ಟಂಗ್‌ ಬಿಡಲಿಲ್ಲ. ಪವರ್‌ಪ್ಲೇನಲ್ಲಿಯೇ ಟೀಮ್‌ ಇಂಡಿಯಾ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಹಾಗೂ ಟೀಮ್‌ ಇಂಡಿಯಾ ಕಮ್‌ಬ್ಯಾಕ್‌ ಮಾಡಲು ಸಾಧ್ಯವಾಗಲಿಲ್ಲ. ಇಷ್ಟು ದೊಡ್ಡ ಮೊತ್ತದ ಚೇಸ್‌ನಲ್ಲಿ ಭಾರತ ತಂಡದ ತನ್ನ ಯೋಜನೆಯನ್ನಯು ಕಾರ್ಯರೂಪಕ್ಕೆ ತರಲಿಲ್ಲ ಎಂದು ಹೇಳಿದರು. ಆದರೆ, ತಂಡ ಖಂಡಿತವಾಗಿಯೂ ಕಮ್‌ಬ್ಯಾಕ್‌ ಮಾಡಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

"ನೀವು ಚೇಸಿಂಗ್‌ ವೇಳೆ, ನೀವು ಪ್ಯಾರ್ಟನ್‌ಗಳನ್ನು ಸೆಟ್‌ ಮಾಡಬೇಕಾಗುತ್ತದೆ, ಆದರೆ ನಾವು ಕಾರ್ಯರೂಪಗೊಳಿಸಿಲ್ಲ. ನಮಗೆ ಕಮ್‌ಬ್ಯಾಕ್‌ ಮಾಡಲು ಅದ್ಭುತ ಅವಕಾಶವಿದೆ. ನಾವು ಕೆಟ್ಟ ಕ್ರಿಕೆಟ್‌ ಆಡಿದ್ದೇವೆ ಹಾಗೂ ನಾವು ಸಾಕಷ್ಟು ಕಲಿಯಬೇಕಾಗಿದೆ. ಯಾವ ರೀತಿ ಇಂಪ್ಯಾಕ್ಟ್‌ ಮಾಡಬೇಕೆಂಬುದನ್ನು ಆಟಗಾರರು ಅರಿತುಕೊಳ್ಳಬೇಕಾಗಿದೆ. ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿ ಪ್ರಭಾವ ಬೀರಬೇಕಾಗಿದೆ," ಎಂದು ಶ್ರೇಯಸ್‌ ಅಯ್ಯರ್‌ ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani