Dailyhunt Logo
  • Light mode
    Follow system
    Dark mode
    • Play Story
    • App Story
ʻಎಲ್ಲಾ ಹುಡುಗ್ರು ಕಳ್ ನನ್ ಮಕ್ಕಳೇ..ʼ ಎಂದು ಹೇಳಿ ವಿವಾದಕ್ಕೆ ಸಿಲುಕಿದ ಸೋನು ಶ್ರೀನಿವಾಸ್ ಗೌಡ; ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ವಿರುದ್ಧ ದೂರು ದಾಖಲಾಗುತ್ತಾ?

ʻಎಲ್ಲಾ ಹುಡುಗ್ರು ಕಳ್ ನನ್ ಮಕ್ಕಳೇ..ʼ ಎಂದು ಹೇಳಿ ವಿವಾದಕ್ಕೆ ಸಿಲುಕಿದ ಸೋನು ಶ್ರೀನಿವಾಸ್ ಗೌಡ; ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ವಿರುದ್ಧ ದೂರು ದಾಖಲಾಗುತ್ತಾ?

Vishwavani 1 week ago

ವಿಿಶ್ವವಾಣಿ ಟಿವಿʼ ಯೂಟ್ಯೂಬ್‌ ಚಾನೆಲ್‌ನ ನೀಡಿದ ವಿಶೇಷ ಸಂದರ್ಶನದಲ್ಲಿ ಇಡೀ ಪುರುಷ ಸಮುದಾಯದ ವಿರುದ್ಧ ಅಸಭ್ಯ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದ ಮೇಲೆ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ ನಡೆದಿದೆ.

'ವಿಶ್ವವಾಣಿ ಟಿವಿ' ಚಾನೆಲ್‌ಗೆ ನೀಡಿದ ನಡೆದ ಸಂದರ್ಶನ ವೇಳೆ, "ಎಲ್ಲಾ ಹುಡುಗ್ರು ಕಳ್ಳ ನನ್ ಮಕ್ಕಳೇ" ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸೋನು ಗೌಡ ಪುರುಷರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೊಡ್ಡ ಮಟ್ಟದ ಚರ್ಚೆ ಹಾಗೂ ವಿರೋಧ ವ್ಯಕ್ತವಾಗುತ್ತಿದೆ.

ವಾಣಿಜ್ಯ ಮಂಡಳಿ ಮತ್ತು ಪೊಲೀಸ್ ಠಾಣೆಗೆ ದೂರು

ಈ ಹಿನ್ನೆಲೆಯಲ್ಲಿ ಇಡೀ ಪುರುಷ ಸಮುದಾಯಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಕನ್ನಡ ಚಿತ್ರರಂಗದ ಮುರುಳಿ ಸಿರಾ ಎಂಬುವವರ ಜೊತೆಗೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಜಂಟಿಯಾಗಿ ಪ್ರತಿಭಟಿಸಲು ಮುಂದಾಗಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ದೂರು ನೀಡಲು ಸಂಘಟನೆಗಳು ಹೋಗಿದ್ದವು. ಆದರೆ ಸೋನು ಶ್ರೀನಿವಾಸ್‌ ಗೌಡ ವಾಣಿಜ್ಯ ಮಂಡಳಿಯಲ್ಲಿ ಸದಸ್ಯರಲ್ಲದ ಕಾರಣದಿಂದ ದೂರು ಪಡೆಯಲಿಲ್ಲ. ಬದಲಿಗೆ, ಕಲಾವಿದರ ಸಂಘಕ್ಕೆ ದೂರು ನೀಡಿ ಎಂದು ಹೇಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಸೋನು ಕಲಾವಿದರ ಸಂಘದ ಸದಸ್ಯತ್ವವನ್ನೂ ಕೂಡ ಹೊಂದಿಲ್ಲ ಎಂಬ ಮಾಹಿತಿ ಇದೆ.

ʻಕೈ-ಕಾಲು ಹಿಡಿದಾದ್ರೂ ಡಿ ಬಾಸ್‌ನ ನನ್ ಸಿನಿಮಾ ಈವೆಂಟ್‌ಗೆ ಕರೆದುಕೊಂಡು ಬರ್ತಿದ್ದೆʼ; ಜನ್ಮದಿನದಂದು ದರ್ಶನ್‌ರನ್ನು ನೆನೆದ ಸೋನು ಶ್ರೀನಿವಾಸ್‌ ಗೌಡ

ಇನ್ನು, ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲೂ ಸೋನು ಶ್ರೀನಿವಾಸ್ ಗೌಡ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಈ ಕುರಿತು ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ. ಅಂದಹಾಗೆ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಹಾಗೂ ಒಂದು ಪುರುಷ ಸಮುದಾಯವನ್ನು ಗುರಿಯಾಗಿಸಿ ಅವಹೇಳನ ಮಾಡುವ ಇಂತಹ ಪ್ರವೃತ್ತಿಗೆ ಬ್ರೇಕ್ ಹಾಕಬೇಕು ಎಂದು ಆಗ್ರಹಿಸಿರುವ ಮುರುಳಿ ಸಿರಾ ಮತ್ತು ತಂಡ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.

ಸೋನು ಶ್ರೀನಿವಾಸ್‌ ಗೌಡ ನೀಡಿದ ಸಂದರ್ಶನ

Dailyhunt
Disclaimer: This content has not been generated, created or edited by Dailyhunt. Publisher: Vishwavani