Dailyhunt
EPFO 3.0: ಎಟಿಎಂ, ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವುದು ಹೇಗೆ? ಇಲ್ಲಿದೆ ವಿವರ

EPFO 3.0: ಎಟಿಎಂ, ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವುದು ಹೇಗೆ? ಇಲ್ಲಿದೆ ವಿವರ

Vishwavani 3 days ago

ಬೆಂಗಳೂರು: ಭವಿಷ್ಯ ನಿಧಿ ಖಾತೆ ಹೊಂದಿರುವ ನೌಕರರು ಪಿಎಫ್ ಹಣವನ್ನು ಸುಲಭವಾಗಿ ಪಡೆಯಲು ಇಪಿಎಫ್ ಒ 3.0 ಅನ್ನು ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಎಟಿಎಂ, ಯುಪಿಐ ಮೂಲಕ ಭವಿಷ್ಯ ನಿಧಿ ಖಾತೆಯಿಂದ ನೌಕರರು ಸುಲಭವಾಗಿ ಪಿಎಫ್ ಹಣವನ್ನು ಮರಳಿ ಪಡೆಯಬಹುದಾಗಿದೆ. ಇದು ಪಿಎಫ್ ಹಣವನ್ನು ಅತ್ಯಂತ ಸರಳ ವಿಧಾನದಲ್ಲಿ, ವೇಗವಾಗಿ, ಡಿಜಿಟಲ್ ಮೂಲಕ ಮರಳಿ ಪಡೆಯಲು ಅವಕಾಶ ಕಲ್ಪಿಸುತ್ತದೆ.

ಇದರ ಮೂಲಕ ಭವಿಷ್ಯ ನಿಧಿ ಖಾತೆ ಹೊಂದಿರುವ ನೌಕರರು ತಮ್ಮ ಖಾತೆಯಿಂದ ಶೇ. 50ರಷ್ಟು ಹಣವನ್ನು ಮರಳಿ ಪಡೆಯಬಹುದಾಗಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಇಪಿಎಫ್ ಒ 3.0 ಅಡಿಯಲ್ಲಿ ಬಳಕೆದಾರರು ಅತ್ಯಂತ ಶೀಘ್ರದಲ್ಲಿ ತಮ್ಮ ಪಿಎಫ್ ಹಣವನ್ನು ನೇರವಾಗಿ ಎಟಿಎಂ ಮತ್ತು ಯುಪಿಐ ಮೂಲಕ ಹಿಂಪಡೆಯಬಹುದಾಗಿದೆ. ಇದರಿಂದ ಉಳಿತಾಯವಾಗುವುದು ಮತ್ತು ಕಾಗದ ಪತ್ರಗಳ ಬಳಕೆ ಕಡಿಮೆಯಾಗುತ್ತದೆ.

ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ಆಕಾಸ ಏರ್‌

ಪಿಎಫ್ ಹಿಂಪಡೆಯುವಿಕೆಯಲ್ಲಿ ಮಾಡಿರುವ ಈ ಡಿಜಿಟಲ್ ಬದಲಾವಣೆಯು ವಿಶೇಷವಾಗಿ ತುರ್ತು ಹಣಕಾಸಿನ ಅಗತ್ಯಗಳ ಸಮಯದಲ್ಲಿ ಹೆಚ್ಚು ತ್ವರಿತ, ಅನುಕೂಲಕರ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನಗದು ಹಿಂಪಡೆಯುವಿಕೆಗೆ ಮಿತಿ ವಿಧಿಸಲಾಗುತ್ತಿದ್ದು, ತಮ್ಮ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 50ರಷ್ಟನ್ನು ಮಾತ್ರ ಹಿಂಪಡೆಯಲು ಅನುಮತಿ ನೀಡಲಾಗುತ್ತದೆ.

ಭವಿಷ್ಯದ ಅಗತ್ಯತೆಗಳು ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಉಳಿತಾಯದ ಒಂದು ಭಾಗವನ್ನು ಹಾಗೇ ಉಳಿಸುವಂತೆ ಈ ನಿರ್ಬಂಧವನ್ನು ವಿಧಿಸಲಾಗುತ್ತದೆ.

ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯಲು ಇಪಿಎಫ್‌ಒ ತನ್ನ ಸದಸ್ಯರಿಗೆ ನಿರ್ಧಿಷ್ಟ ಎಟಿಎಂ ಕಾರ್ಡ್‌ಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಕಾರ್ಡ್‌ಗಳನ್ನು ಗ್ರಾಹಕರ ಪಿಎಫ್ ಖಾತೆಗೆ ನೇರವಾಗಿ ಲಿಂಕ್ ಮಾಡಲಾಗುತ್ತದೆ. ಬಳಕೆದಾರರು ಈ ಕಾರ್ಡ್ ಅನ್ನು ಬಳಸಿ ಸಾಮಾನ್ಯ ಬ್ಯಾಂಕ್ ವಹಿವಾಟುಗಳಂತೆ ಎಟಿಎಂಗಳಿಂದ ಹಣವನ್ನು ಹಿಂಪಡೆಯಬಹುದಾಗಿದೆ.

ಯುಪಿಐ ಆಧಾರಿತ ಹಿಂಪಡೆಯುವಿಕೆಯಲ್ಲಿ ಎಟಿಎಂ ಬದಲಿಗೆ ಡಿಜಿಟಲ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಗ್ರಾಹಕರು ಸಾಂಪ್ರದಾಯಿಕ ಬ್ಯಾಂಕಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿಲ್ಲ.

ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯಲು ಗ್ರಾಹಕರು ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ಎಲ್ಲಾ ಬಳಕೆದಾರರಿಗೆ ಸಕ್ರಿಯ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಕಡ್ಡಾಯವಾಗಿರುತ್ತದೆ. ಯುಎಎನ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿರಬೇಕು. ಆಧಾರ್, ಪ್ಯಾನ್, ಬ್ಯಾಂಕ್ ಖಾತೆ ವಿವರಗಳು ಮತ್ತು ಐಎಫ್‌ಎಸ್‌ಸಿ ಕೋಡ್‌ನೊಂದಿಗೆ ಲಿಂಕ್ ಹೊಂದಿರಬೇಕು.

ಇರಾನ್ ಜತೆ ಟ್ರಂಪ್ 2 ವಾರಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ತೈಲ ಬೆಲೆಯಲ್ಲಿ ಭಾರಿ ಕುಸಿತ

ಸಂಬಳ ಪಡೆಯುವ ಉದ್ಯೋಗಿಗಳಿಗೆ ಇಪಿಎಫ್‌ಒ 3.0 ಹಲವಾರು ಉದ್ಯೋಗಿ ಸ್ನೇಹಿ ವಿಶೇಷತೆಗಳನ್ನು ಹೊಂದಿದೆ. ಈ ವ್ಯವಸ್ಥೆಯು ಕ್ಲೈಮ್‌ಗಳ ಸ್ವಯಂ ಇತ್ಯರ್ಥ ವಿಶೇಷತೆಯನ್ನು ಒಳಗೊಂಡಿರುತ್ತದೆ. ಇದು ಪಿಂಚಣಿ ವಿತರಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಸ್ವಯಂಚಾಲಿತ ಕ್ಲೈಮ್ ಇತ್ಯರ್ಥದ ಮಿತಿ 1 ಲಕ್ಷದಿಂದ 5 ಲಕ್ಷ ರೂ. ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇನ್ನು ಪಿಎಫ್ ಹೊಂದಿರುವ ಖಾತೆದಾರರು ಆಧಾರ್ ಆಧಾರಿತ ಒಟಿಪಿ ಪರಿಶೀಲನೆಯ ಮೂಲಕ ವೈಯಕ್ತಿಕ ವಿವರಗಳನ್ನು ನವೀಕರಿಸಲು ಮತ್ತುಕೆವೈಸಿ ಮಾಹಿತಿ ಸರಿಪಡಿಸಲು ಸಾಧ್ಯವಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani