Dailyhunt Logo
  • Light mode
    Follow system
    Dark mode
    • Play Story
    • App Story
ಎಥೆನಾಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಾ ?: ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?

ಎಥೆನಾಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಾ ?: ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?

Vishwavani 2 weeks ago

ವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ (Middle East crisis) ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ (oil market) ತೈಲ ಬೆಲೆ ಏರಿಕೆಯಾಗಿದೆ. ಇದು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಜೈವಿಕ ಇಂಧನ ಮಿಶ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ( Oil Minister Hardeep Puri) ಹೇಳಿದರು.

ವಾಹನಗಳಿಗೆ ಎಥೆನಾಲ್ (ethanol) ಮಿಶ್ರಣದ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ರೇಸಿಂಗ್ ಕಾರುಗಳಲ್ಲಿ ಕೂಡ ಎಥೆನಾಲ್ ಬಳಸಲಾಗುತ್ತಿದೆ. ಇದು ಅವುಗಳ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಜೈವಿಕ ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ ಎಂದು ಯಾರೋ ಹೇಳುತ್ತಿದ್ದಾರೆ. ಆದರೆ ರೇಸಿಂಗ್ ಕಾರುಗಳಲ್ಲಿಯೂ ಎಥೆನಾಲ್ ಅನ್ನು ಈಗ ಬಳಕೆ ಮಾಡಲಾಗುತ್ತಿದೆ. ಇದರಿಂದ ಮೈಲೇಜ್ ಚೆನ್ನಾಗಿದೆ. ವೇಗವರ್ಧನೆಯಲ್ಲೂ ಸುಧಾರಣೆ ಆಗುತ್ತಿದೆ.ಮೈಲೇಜ್ ಕಡಿಮೆಯಾಗಲು ಬೇರೆ ಬೇರೆ ಕಾರಣಗಳಿರುತ್ತವೆ. ಇಂಧನ ಒಂದೇ ಅಲ್ಲ ಎಂದು ತಿಳಿಸಿದರು.

International Plastic Bag Free Day: ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತಿ ದಿನ

ಜೈವಿಕ ಇಂಧನ ಬಳಕೆಯ ವಾಹನಗಳಿಗೆ ವಿಮೆಯ ಕುರಿತು ಸೈಮ ಮತ್ತು ಅರೈ ಸೇರಿದಂತೆ ಹಲವು ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಈ ಕುರಿತು ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ಸುಳ್ಳು ಮಾಹಿತಿ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಅವರು, ಭಾರತದ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಎಲ್ಲಾ ತಂತ್ರಜ್ಞಾನಗಳು ಸಹಬಾಳ್ವೆ ನಡೆಸಲು ಸಾಕಷ್ಟು ಅವಕಾಶವಿದೆ ಎಂದರು.

ನಮ್ಮಲ್ಲಿ ವಿದ್ಯುತ್ ವಾಹನಗಳು, ಜೈವಿಕ ಇಂಧನ ಮಿಶ್ರಿತ ವಾಹನಗಳಿಗೆ ಅವಕಾಶವಿದೆ. ಪ್ರಸ್ತುತ ನಾವು ಕೇವಲ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣದಲ್ಲಿದ್ದೇವೆ. ಇದನ್ನು ಇನ್ನಷ್ಟು ಹೆಚ್ಚಿಸಬೇಕಿದೆ.ಅದಕ್ಕಾಗಿ ಅಗತ್ಯವಿರುವ ಎಲ್ಲಾ ಪರೀಕ್ಷೆಗಳು ಪೂರ್ಣಗೊಳ್ಳಬೇಕು. ಬ್ರಿಡ್ ವಾಹನಗಳು ಮತ್ತು ಸಿಎನ್ ಜಿ ವಾಹನಗಳಿಗೂ ದೇಶದಲ್ಲಿ ಸಾಕಷ್ಟು ಅವಕಾಶವಿದೆ ಎಂದರು.

ಮಧ್ಯಪ್ರಾಚ್ಯ ಸಂಘರ್ಷದಿಂದ ತೈಲ ಬೆಲೆಗೆಳು ಏರಿಕೆಯಾಗಿದೆ. ಇದರಿಂದ ಕಳೆದ ತಿಂಗಳ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯನ್ನು ವೆಚ್ಚಕ್ಕಿಂತ ಕಡಿಮೆ ಮಾರಾಟ ಮಾಡಲಾಗಿದೆ. ಜೂನ್ 30 ರವರೆಗಿನ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮಾರಾಟ ಕಡಿಮೆ ಮಾಡಿದ್ದರಿಂದ ತೈಲ ಕಂಪನಿಗಳು 74,781 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ತಿಳಿಸಿದರು.

2026ರ ಏಪ್ರಿಲ್- ಜೂನ್ ನಡುವಿನ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮಾರಾಟದಿಂದ 1,88,871 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾಗದೇ ಇದ್ದರೂ ತೈಲ ಕಂಪೆನಿಗಳು ಇನ್ನೂ ಬಿಕ್ಕಟ್ಟನ್ನು ಎದುರಿಸುತ್ತಿವೆ. ಖರೀದಿಸಿದ ಸ್ಟಾಕ್‌ಗಳನ್ನು ಸಂಸ್ಕರಿಸುತ್ತಿವೆ. ಪ್ರಸ್ತುತ ನಾವು ಎರಡು ತಿಂಗಳ ಹಿಂದೆ ಖರೀದಿಸಿದ ಕಚ್ಚಾ ಪೆಟ್ರೋಲಿಯಂ ಸ್ಟಾಕ್ ಅನ್ನು ಬಳಸುತ್ತಿದ್ದೇವೆ ಎಂದು ಅವರು ಹೇಳಿದರು.

ಸದ್ಯಕ್ಕೆ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕಡಿತವಾಗುವುದಿಲ್ಲ ಎಂದ ಅವರು, ಬೆಲೆ ಇಳಿಕೆ ಮುಂದಿನ 2- 3 ತಿಂಗಳುಗಳ ಕಾಲ ಮುಂದುವರಿದರೆ ಆಗ ಬೆಲೆ ಕಡಿತದ ಬಗ್ಗೆ ಯೋಚಿಸಬಹುದು ಎಂದರು.

ಹಸಿರು ಅಮೋನಿಯಾ-ಮೆಥನಾಲ್‌ ಪೂರೈಕೆಗೆ ಭಾರತ-ಜಪಾನ್‌ ಒಪ್ಪಂದ; ಸಚಿವ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ

ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಸೇರಿದಂತೆ ಅನೇಕ ದೇಶಗಳ ಹೊಸ ವಾಹನಗಳು ಶೇಕಡಾ 100ರಷ್ಟು ಎಥೆನಾಲ್ ಅನ್ನು ನಿರ್ವಹಿಸುವ ಸಾಮರ್ಥ್ಯವಿರುವ ಫ್ಲೆಕ್ಸ್-ಇಂಧನವನ್ನು ಹೊಂದಿವೆ. ಕೆನಡಾ, ಥೈಲ್ಯಾಂಡ್, ಜಪಾನ್ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಕೂಡ ಇದನ್ನು ಅಳವಡಿಸಿಕೊಂಡಿವೆ. ಎಂದ ಅವರು ಭಾರತದಲ್ಲಿ ಎಥೆನಾಲ್ ಮಿಶ್ರಣ 2000ದ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ದೇಶದಲ್ಲಿ ತೈಲ ಉತ್ಪಾದನಾ ಸಾಮರ್ಥ್ಯವು 2013-14ರಲ್ಲಿ ಸುಮಾರು 38 ಕೋಟಿ ಲೀಟರ್‌ಗಳಿಂದ ವರ್ಷಕ್ಕೆ 2,000 ಕೋಟಿ ಲೀಟರ್‌ಗಳಿಗೆ ಏರಿಕೆಯಾಗಿದೆ. ಇದರಲ್ಲಿ ಎಥೆನಾಲ್ ಮಿಶ್ರಣ ಮಟ್ಟ ಕೇವಲ ಶೇಕಡಾ 1.5 ರಿಂದ ಶೇಕಡಾ 20 ಕ್ಕೆ ಏರಿದೆ. ಇದರಿಂದ 1.90 ಲಕ್ಷ ಕೋಟಿ ರೂ. ಗಿಂತ ಹೆಚ್ಚಿನ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani