Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ನಾಕೌಟ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿಕ್ಕ ದೇಶ ಕೇಪ್‌ ವರ್ಡೆ

ಫಿಫಾ ನಾಕೌಟ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿಕ್ಕ ದೇಶ ಕೇಪ್‌ ವರ್ಡೆ

Vishwavani 0 months ago

ಟ್ಲಾಂಟ(ಅಮೆರಿಕ), ಜೂ. 27: ಫಿಫಾ ವಿಶ್ವಕಪ್‌(FIFA World Cup 2026)ನಲ್ಲಿ ಇದೇ ಚೊಚ್ಚಲ ಬಾರಿಗೆ ಆಡುತ್ತಿರುವ ಸಣ್ಣ ದೇಶವಾದ ಕೇಪ್‌ ವರ್ಡೆ(Cape Verde) ತನ್ನ ಅಸಾಧಾರಣ ಪ್ರದರ್ಶನದ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಶನಿವಾರ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಯಾವುದೇ ಗೋಲುಗಳಿಲ್ಲದೇ ಡ್ರಾ ಸಾಧಿಸಿ ನಕೌಟ್‌ಗೆ ಲಗ್ಗೆಯಿಟ್ಟಿದೆ.

ಚೊಚ್ಚಲ ಪಂದ್ಯದಲ್ಲೇ ಮಾಜಿ ಚಾಂಪಿಯನ್‌ ಸ್ಪೇನ್‌ಗೆ ಶಾಕ್‌ ನೀಡುವ ಮೂಲಕ ಗೋಲುರಹಿತ(0-0) ಡ್ರಾ ಸಾಧಿಸಿದಗಲೇ ತಂಡದ ಮೇಲೆ ಭಾರೀ ನಿರೀಕ್ಷೆಯೊಂದನ್ನು ಮಾಡಲಾಗಿತ್ತು. ಅದರಂತೆ ಇದೀಗ ನಾಕೌಟ್‌ ಹಂತಕ್ಕೇರುವ ಮೂಲಕ ತನ್ನ ವಿಶ್ವಕಪ್‌ ಕನಸನ್ನು ಮುಂದುವರಿಸಿದೆ. 'ಹೆಚ್' ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಮುಂದಿನ ಹಂತಕ್ಕೇರಿತು. ಸ್ಪೇನ್ ಅಗ್ರಸ್ಥಾನದಲ್ಲಿದೆ.

ಕೇವಲ 550,000 ಜನಸಂಖ್ಯೆಯನ್ನು ಹೊಂದಿರುವ ಕೇಪ್ ವರ್ಡೆ, FIFA ವಿಶ್ವಕಪ್‌ನ ನಾಕೌಟ್ ಹಂತಗಳನ್ನು ತಲುಪಿದ ಇತಿಹಾಸದಲ್ಲಿ ಅಧಿಕೃತವಾಗಿ ಅತ್ಯಂತ ಚಿಕ್ಕ ರಾಷ್ಟ್ರವಾಗಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಕೇಪ್‌ ವರ್ಡೆ ತಂಡದಿಂದ ಈ ರೀತಿ ಪ್ರದರ್ಶನ ಬಹುತೇಕರು ಊಹಿಸಿರಲಿಲ್ಲ. ಆದರೆ ಪಂದ್ಯದ ಆರಂಭದಿಂದಲೂ ಸೌಧಿಗೆ ಗೋಲು ಗಳಿಕೆಯ ಎಲ್ಲಾ ಹಾದಿಯನ್ನು ಕೇಪ್‌ ವರ್ಡೆ ಡಿಫೆಂಡರ್‌ಗಳು ಬಂದ್‌ ಮಾಡಿದರು.

ಕೇಪ್ ವರ್ಡೆ ಜುಲೈ 3 ರಂದು ಮಿಯಾಮಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ವಿರುದ್ಧದ 32 ರ ಸುತ್ತಿನ ಪಂದ್ಯವನ್ನು ಆಡಲಿದೆ. "ನಾಳೆಯಿಂದ, ನಾವು ಮುಂದಿನ ಪಂದ್ಯದ ಮೇಲೆ ಕೇಂದ್ರೀಕರಿಸುತ್ತೇವೆ" ಎಂದು ಡುವಾರ್ಟೆ ಹೇಳಿದರು.

ದಿನದ ಮತ್ತೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 5-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಬೆಲ್ಜಿಯಂ ತಂಡ ಫಿಫಾ ವಿಶ್ವಕಪ್‌ನ 32ನೇ ಸುತ್ತಿನಲ್ಲಿ ಸ್ಥಾನ ಕಾಯ್ದಿರಿಸಿದರೆ. ಗ್ರೂಪ್ ಜಿ ಯ ಅಂತಿಮ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ 1-1 ಡ್ರಾ ಸಾಧಿಸಿದ ನಂತರ ಇರಾನ್ ತಮ್ಮ ನಾಕೌಟ್ ಭವಿಷ್ಯಕ್ಕಾಗಿ ಕಠಿಣ ಕಾಯುವಿಕೆಯನ್ನು ಎದುರಿಸಬೇಕಾಯಿತು.

ಪ್ರೊ ಲೀಗ್‌ ಹಾಕಿ; ಪಾಕಿಸ್ತಾನ ವಿರುದ್ಧ 7-1 ಅಂತರದಿಂದ ಗೆದ್ದ ಭಾರತ

ಲಿಯಾಂಡ್ರೊ ಟ್ರಾಸಾರ್ಡ್ ಎರಡು ಗೋಲುಗಳನ್ನು ಗಳಿಸಿದರು ಮತ್ತು ಕೆವಿನ್ ಡಿ ಬ್ರೂಯ್ನ್ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರು. ಬೆಲ್ಜಿಯಂ ಗೋಲು ವ್ಯತ್ಯಾಸದಲ್ಲಿ ಈಜಿಪ್ಟ್ ಅನ್ನು ಹಿಂದಿಕ್ಕಿ ಗ್ರೂಪ್ ಜಿ ನಲ್ಲಿ ಅಗ್ರಸ್ಥಾನ ಗಳಿಸಿತು. ಈ ಫಲಿತಾಂಶವು ಬೆಲ್ಜಿಯಂ ಮತ್ತು ಈಜಿಪ್ಟ್ ಎರಡನ್ನೂ ಅಂತಿಮ 32 ರೊಳಗೆ ಕಳುಹಿಸಿತು, ಆದರೆ ಇರಾನ್ ಈಗ ಪಂದ್ಯಾವಳಿಯ ಎಂಟು ಅತ್ಯುತ್ತಮ ಮೂರನೇ ಸ್ಥಾನದಲ್ಲಿರುವ ತಂಡಗಳಲ್ಲಿ ಒಂದಾಗಿ ಮುನ್ನಡೆಯುತ್ತದೆಯೇ ಎಂದು ಕಾಯಬೇಕು.

Dailyhunt
Disclaimer: This content has not been generated, created or edited by Dailyhunt. Publisher: Vishwavani