Dailyhunt Logo
  • Light mode
    Follow system
    Dark mode
    • Play Story
    • App Story
First Liver Nodule clinic: ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಲಿವರ್ ನಾಡ್ಯೂಲ್ ಕ್ಲಿನಿಕ್ ಆರಂಭ

First Liver Nodule clinic: ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಲಿವರ್ ನಾಡ್ಯೂಲ್ ಕ್ಲಿನಿಕ್ ಆರಂಭ

Vishwavani 2 weeks ago

ಕೃತ್ತಿನಲ್ಲಿ ಕಂಡುಬರುವ ಗಂಟು / ಗೆಡ್ಡೆಗಳ ತಪಾಸಣೆ ಮತ್ತು ಚಿಕಿತ್ಸೆಗೆ ಲಿವರ್ ನೊಡ್ಯೂಲ್ ಕ್ಲಿನಿಕ್‌ನ ಒಂದೇ ಸೂರಿನಡಿ ತಜ್ಞರ ಸಮಗ್ರ ಸೇವೆ

ರೋಗಿಗಳಿಗೆ ಚಿಕಿತ್ಸೆಯಲ್ಲಿನ ವಿಳಂಬ ತಪ್ಪಿಸಿ ಚಿಕಿತ್ಸೆ ಸರಳಗೊಳಿಸುವ ವಿಶೇಷ ಪ್ರಯತ್ನ

ಬೆಂಗಳೂರು: ನಗರದ ಕೆಂಗೇರಿಯಲ್ಲಿರುವ ಫೋರ್ಟಿಸ್‌ ಹೆಲ್ತ್‌ಕೇರ್‌ ಜಾಲದ ಭಾಗವಾಗಿರುವ ಗ್ಲೆನೆಗಲ್ಸ್‌ ಬಿಜಿಎಸ್‌ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಪ್ರತ್ಯೇಕ ಯಕೃತ್ತು ಗೆಡ್ಡೆ ಚಿಕಿತ್ಸಾ ಕೇಂದ್ರ (ಲಿವರ್ ನೊಡ್ಯೂಲ್ ಕ್ಲಿನಿಕ್) ಆರಂಭಿಸಲಾಗಿದ

ಯಕೃತ್ತಿನಲ್ಲಿ ಕಂಡುಬರುವ ಗಂಟು / ಗೆಡ್ಡೆಗಳು ಅಥವಾ ಅಸಹಜ ಬೆಳವಣಿಗೆ ಕಂಡುಬರುವ ರೋಗಿಗಳಿಗೆ ಸಮನ್ವಯದ ತಪಾಸಣೆ, ನಿಖರ ರೋಗನಿರ್ಣಯ ಮತ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ಸೇವೆಯು ಈ ಕ್ಲಿನಿಕ್‌ನಲ್ಲಿ ದೊರೆಯಲಿದೆ.

ರೋಗಿಗಳು ಬೇರೆ ಬೇರೆ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಹಲವು ಪರೀಕ್ಷೆಗಳನ್ನು ಪುನರಾ ವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಈ ಕ್ಲಿನಿಕ್‌ನ ಮುಖ್ಯ ಉದ್ದೇಶವಾಗಿದೆ. ಒಂದೇ ಸಮಗ್ರ ಚಿಕಿತ್ಸಾ ವ್ಯವಸ್ಥೆಯ ಮೂಲಕ ತಜ್ಞರ ಅಭಿಪ್ರಾಯ ಮತ್ತು ರೋಗಿಯ ಅಗತ್ಯಕ್ಕೆ ಅನುಗುಣ ವಾದ ವೈಯಕ್ತಿಕ ಚಿಕಿತ್ಸಾ ಸಲಹೆ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರತಿವರ್ಷ ಸಾವಿರಾರು ಜನರಲ್ಲಿ ಯಕೃತ್ತಿನ ಗೆಡ್ಡೆಗಳು ಪತ್ತೆಯಾಗುತ್ತವೆ. ಅನೇಕ ಬಾರಿ ಸಾಮಾನ್ಯ ಆರೋಗ್ಯ ತಪಾಸಣೆ ಅಥವಾ ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ನಡೆಸುವ ತಪಾಸಣೆ ವೇಳೆ ಇವು ಪತ್ತೆಯಾಗುತ್ತವೆ. ಬಹುತೇಕ ಗೆಡ್ಡೆಗಳು ಅಪಾಯಕಾರಿ ಆಗಿರುವುದಿಲ್ಲ. ಕೆಲವು ಗೆಡ್ಡೆಗಳಿಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಥವಾ ತಕ್ಷಣದ ಚಿಕಿತ್ಸೆಯ ಅಗತ್ಯ ಕಂಡು ಬರಬಹುದು.

Health Tips: ಆಯಾಸವೇ? ದೈಹಿಕ, ಮಾನಸಿಕ ಚೈತನ್ಯಕ್ಕೆ ಕಪ್ಪು ಎಳ್ಳು ಸೇವಿಸಿ

ಇಂತಹ ಸಂದರ್ಭಗಳಲ್ಲಿ ಮೊದಲು ಯಾವ ತಜ್ಞ ವೈದ್ಯರನ್ನು ಭೇಟಿ ಮಾಡಬೇಕು ಎಂಬುದೇ ಅನೇಕ ರೋಗಿಗಳಿಗೆ ಗೊಂದಲ ಮೂಡಿಸುತ್ತದೆ. ಇದರಿಂದ ಒಬ್ಬ ವೈದ್ಯರಿಂದ ಮತ್ತೊಬ್ಬ ವೈದ್ಯರ ಬಳಿಗೆ ಹೋಗುವುದು, ಒಂದೇ ರೀತಿಯ ಪರೀಕ್ಷೆಗಳನ್ನು ಮತ್ತೆ, ಮತ್ತೆ ಮಾಡಿಸಿಕೊಳ್ಳುವುದು, ರೋಗನಿರ್ಣಯದಲ್ಲಿ ವಿಳಂಬವಾಗುವುದು ಮತ್ತು ಅನಗತ್ಯ ಆತಂಕ ಮನೆ ಮಾಡುವುದು ಸಾಮಾನ್ಯವಾಗಿದೆ.

ಒಂದೇ ಸೂರಿನಡಿ ಹಲವು ತಜ್ಞರ ಸಮಗ್ರ ಚಿಕಿತ್ಸೆ: ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶ ದಿಂದ ಲಿವರ್ ನೊಡ್ಯೂಲ್ ಕ್ಲಿನಿಕ್, ಮೊದಲ ಭೇಟಿಯಿಂದಲೇ ಹಲವು ವೈದ್ಯಕೀಯ ವಿಭಾಗಗಳ ತಜ್ಞರನ್ನು ಒಳಗೊಂಡ ಸಮಗ್ರ ಚಿಕಿತ್ಸಾ ವ್ಯವಸ್ಥೆಯನ್ನು ಒದಗಿಸುತ್ತದೆ. ಪ್ರತಿಯೊಬ್ಬ ರೋಗಿ ಯನ್ನೂ ಸಮಗ್ರವಾಗಿ ತಪಾಸಣೆ ಮಾಡಿದ ನಂತರ, ಯಕೃತ್ತಿನ ತಜ್ಞರು, ಯಕೃತ್ತು-ಪಿತ್ತನಾಳ-ಮೆದೊಜಿರಕ ಗ್ರಂಥಿ ಹಾಗೂ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಾ ತಜ್ಞರು, ಜಠರ-ಕರುಳಿನ ತಜ್ಞರು, ರೇಡಿಯಾಲಜಿಸ್ಟ್‌ಗಳು, ಕ್ಯಾನ್ಸರ್ ತಜ್ಞರು, ರೋಗನಿರ್ಣಯ ರೇಡಿಯಾಲಜಿಸ್ಟ್‌ಗಳು, ರೋಗಶಾಸ್ತ್ರ ತಜ್ಞರು ಮತ್ತು ಪೌಷ್ಟಿಕ ಆಹಾರ ತಜ್ಞರು ಒಟ್ಟಾಗಿ ರೋಗಿಯ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ನಂತರ ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ಅನುಗುಣವಾಗಿ ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು ರೂಪಿಸಲಾಗುತ್ತದೆ.

ರೋಗಿಯ ಚಿಕಿತ್ಸಾ ಪಯಣದ ಆರಂಭದಲ್ಲೇ ಅಗತ್ಯವಿರುವ ಎಲ್ಲ ತಜ್ಞರನ್ನು ಒಂದೇ ಕಡೆಗೆ ಕರೆತರುವ ಮೂಲಕ ರೋಗನಿರ್ಣಯದ ನಿಖರತೆಯನ್ನು ಹೆಚ್ಚಿಸುವುದು, ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಕ್ಲಿನಿಕ್‌ನ ಮುಖ್ಯ ಉದ್ದೇಶವಾಗಿದೆ.

ಕ್ಲಿನಿಕ್‌ನಲ್ಲಿ ಯಕೃತ್ತಿನ ವಿವಿಧ ರೀತಿಯ ಗೆಡ್ಡೆಗಳು ಮತ್ತು ಅಸಹಜ ಬೆಳವಣಿಗೆಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಅಪಾಯಕಾರಿಯಲ್ಲದ ಯಕೃತ್ತಿನ ಚೀಲಗಳು, ರಕ್ತನಾಳದ ಗೆಡ್ಡೆಗಳು, ಫೋಕಲ್ ನೊಡ್ಯುಲರ್ ಹೈಪರ್‌ಪ್ಲಾಸಿಯಾ, ಯಕೃತ್ತಿನ ಹಾನಿಕಾರಕವಲ್ಲದ ಗೆಡ್ಡೆ, ಸ್ಪಷ್ಟವಾಗಿ ಗುರುತಿಸಲಾಗದ ಯಕೃತ್ತಿನ ಗಾಯಗಳು, ಯಕೃತ್ತಿನ ಕ್ಯಾನ್ಸರ್, ದೇಹದ ಇತರ ಭಾಗಗಳಿಂದ ಯಕೃತ್ತಿಗೆ ಹರಡಿರುವ ಕ್ಯಾನ್ಸರ್ ಗೆಡ್ಡೆಗಳು, ಯಕೃತ್ತಿನ ಸಂಕೀರ್ಣ ಗೆಡ್ಡೆಗಳು ಹಾಗೂ ಯಕೃತ್ತಿನ ಕಸಿ ಅಗತ್ಯವಿದೆಯೇ ಎಂಬ ಪರೀಕ್ಷೆಗೆ ಕಾದಿರುವ ರೋಗಿಗಳು ಸೇರಿರುತ್ತಾರೆ.

ರೋಗಿಯ ಚಿಕಿತ್ಸಾ ಪಯಣದ ಆರಂಭದಲ್ಲೇ ಅಗತ್ಯವಿರುವ ಎಲ್ಲ ತಜ್ಞರನ್ನು ಒಂದೇ ಕಡೆಗೆ ಕರೆತರುವ ಮೂಲಕ ರೋಗನಿರ್ಣಯದ ನಿಖರತೆಯನ್ನು ಹೆಚ್ಚಿಸುವುದು, ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕ್ಲಿನಿಕ್‌ನ ಮುಖ್ಯ ಉದ್ದೇಶವಾಗಿದೆ.

ದಿ ಲಿವರ್‌ ಗಂಟು ಚಿಕಿತ್ಸಾ ಕೇಂದ್ರವನ್ನು ಬಹುವಿಶೇಷಜ್ಞರನ್ನೊಳಗೊಂಡ (Multidisciplinary) ತಂಡದ ವೈದ್ಯಕೀಯ ತಜ್ಞರು ಉದ್ಘಾಟಿಸಿದರು. ತಂಡದಲ್ಲಿ ಡಾ. ಆದರ್ಶ್ ಸಿ. ಕೆ., ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ಸಲಹೆಗಾರರು - ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಅಡ್ವಾನ್ಸ್ಡ್ ಎಂಡೋಸ್ಕೋಪಿ; ಡಾ. ಮಹೇಶ್ ಗೋಪಶೆಟ್ಟಿ, ವಿಭಾಗದ ಮುಖ್ಯಸ್ಥರು ಮತ್ತು ಪ್ರಮುಖ ಸಲಹೆಗಾರರು - ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ; ಡಾ. ಧರ್ಮ ಕುಮಾರ್ ಕೆ. ಜಿ., ಸಲಹೆಗಾರರು - ಸರ್ಜಿಕಲ್ ಆಂಕಾಲಜಿ; ಡಾ. ಸಿಂಧು ವಿ. ಎ., ಹಿರಿಯ ಸಲಹೆ ಗಾರರು - ಸರ್ಜಿಕಲ್ ಆಂಕಾಲಜಿ; ಡಾ. ನವೀನ್ ಚಂದ್ರಶೇಖರ್, ಸಲಹೆಗಾರರು - ಇಂಟರ್ವೆನ್ಷನಲ್ ರೇಡಿಯಾಲಜಿ; ಡಾ. ರವೀಂದ್ರ ನಿಡೋನಿ, ಸಲಹೆಗಾರರು - ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ; ಡಾ. ವಿನಯ್ ಕುಮಾರ್ ಬಿ.ಆರ್., ಸಲಹೆಗಾರರು - ಹೆಪಟಾಲಜಿ; ಡಾ. ಮನೀಶ್ ಜೋಶಿ, ಹಿರಿಯ ಸಲಹೆಗಾರರು - ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ; ಡಾ. ಜೀವನ್ ಜಿ. ಎಂ., ಸಹಾಯಕ ಸಲಹೆಗಾರರು - ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕಾಲಜಿ; ಹಾಗೂ ಡಾ. ಸಂಜೀವ್ ಶೆಟ್ಟಿ, ಸಲಹೆಗಾರರು - ಮಿನಿಮಲ್ ಆಕ್ಸೆಸ್ ಜಿಐ, ಬೇರಿಯಾಟ್ರಿಕ್ ಮತ್ತು ಜನರಲ್ ಸರ್ಜರಿ.

ವೈದ್ಯಕೀಯ ಜಠರರೋಗ ಶಾಸ್ತ್ರ, ಯಕೃತ್ತಿನ ಚಿಕಿತ್ಸಾ ವಿಭಾಗ ಮತ್ತು ಸುಧಾರಿತ ಎಂಡೊಸ್ಕೋಪಿ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಸಲಹೆಗಾರರಾಗಿರುವ ಡಾ. ಆದರ್ಶ್ ಸಿ.ಕೆ. ಅವರು ಮಾತನಾಡಿ, 'ನಿಯಮಿತವಾಗಿ ತಪಾಸಣೆ ಮತ್ತು ಇತರ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಯಕೃತ್ತಿನ ಗೆಡ್ಡೆಗಳು ಮತ್ತು ದ್ರವ ತುಂಬಿದ ಚೀಲಗಳು ಆಕಸ್ಮಿಕವಾಗಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಇವುಗಳಲ್ಲಿ ಅನೇಕವು ಅಪಾಯಕಾರಿಯಲ್ಲ

. ಆದರೆ, ಕೆಲವು ಗೆಡ್ಡೆಗಳು ಯಕೃತ್ತಿನಲ್ಲಿರುವ ಕಾಯಿಲೆ ಅಥವಾ ಆರಂಭಿಕ ಹಂತದ ಯಕೃತ್ತಿನ ಕ್ಯಾನ್ಸರ್‌ನ ಸೂಚನೆಯಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡುವುದು ಅತ್ಯಂತ ಮುಖ್ಯ. ಯಾವ ಗೆಡ್ಡೆಗಳಿಗೆ ಚಿಕಿತ್ಸೆಯ ಅಗತ್ಯವಿದೆ ಮತ್ತು ಯಾವುದನ್ನು ಸುರಕ್ಷಿತವಾಗಿ ಕೇವಲ ಮೇಲ್ವಿಚಾರಣೆ ಮಾಡಬಹುದು ಎಂಬುದನ್ನು ಗುರುತಿಸುವುದೇ ದೊಡ್ಡ ಸವಾಲಾಗಿದೆ.

ನಮ್ಮ ಲಿವರ್ ನೊಡ್ಯೂಲ್ ಕ್ಲಿನಿಕ್‌ನಲ್ಲಿ ಆರಂಭದಿಂದಲೇ ವಿವಿಧ ವಿಭಾಗಗಳ ತಜ್ಞರನ್ನು ಒಂದೇ ಕಡೆಗೆ ಕರೆತರುತ್ತೇವೆ. ಇದರಿಂದ ವೇಗವಾಗಿ ರೋಗನಿರ್ಣಯ ಮಾಡಲು, ವೈದ್ಯಕೀಯ ನಿರ್ಧಾರ ಗಳಲ್ಲಿ ಹೆಚ್ಚಿನ ಸ್ಪಷ್ಟತೆ ಪಡೆಯಲು ಮತ್ತು ಪ್ರತಿಯೊಬ್ಬ ರೋಗಿಗೂ ಮುಂದಿನ ಚಿಕಿತ್ಸೆಯ ಸ್ಪಷ್ಟ ಮಾರ್ಗವನ್ನು ರೂಪಿಸಲು ಸಾಧ್ಯವಾಗಲಿದೆ' ಎಂದು ಹೇಳಿದ್ದಾರೆ.

ಯಕೃತ್ತಿನ ಕಸಿ ಮತ್ತು ಯಕೃತ್ತು-ಪಿತ್ತನಾಳ-ಮೆದೊಜಿರಕ ಗ್ರಂಥಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ರು ಹಾಗೂ ಪ್ರಮುಖ ಸಲಹೆಗಾರರಾಗಿರುವ ಡಾ. ಮಹೇಶ್ ಗೋಪಸೆಟ್ಟಿ ಅವರು ಮಾತನಾಡಿ, "ಯಕೃತ್ತಿನ ಗೆಡ್ಡೆಗೆ ಚಿಕಿತ್ಸೆ ಅಗತ್ಯವಿದ್ದಾಗ, ಸರಿಯಾದ ಸಮಯದಲ್ಲಿ ಮತ್ತು ನಿಖರವಾಗಿ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯ. ಶಸ್ತ್ರಚಿಕಿತ್ಸೆಯ ನಿರ್ಧಾರವು ಗೆಡ್ಡೆಯ ಗಾತ್ರ ಮತ್ತು ಅದು ಇರುವ ಸ್ಥಳದ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ. ಯಕೃತ್ತಿನ ಕಾರ್ಯಕ್ಷಮತೆ ಮತ್ತು ರೋಗಿಯ ಒಟ್ಟಾರೆ ಆರೋಗ್ಯವನ್ನೂ ಪರಿಗಣಿಸಬೇಕು. ಆರಂಭದಲ್ಲೇ ವಿವಿಧ ತಜ್ಞರು ಮತ್ತು ಅಗತ್ಯ ಪರೀಕ್ಷೆಗಳನ್ನು ಒಳಗೊಂಡ ಸಮಗ್ರ ವೈದ್ಯಕೀಯ ಮೌಲ್ಯಮಾಪನ ನಡೆಸುವುದರಿಂದ, ಪ್ರತಿಯೊಂದು ಪ್ರಕರಣವನ್ನೂ ಸಂಪೂರ್ಣವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರ ಪ್ರಯೋಜನ ಪಡೆದುಕೊಂಡಿರುವ ರೋಗಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಬಹುದು. ಹಾಗೆಯೇ, ಔಷಧಿ ಅಥವಾ ನಿಯಮಿತ ಮೇಲ್ವಿಚಾರಣೆಯಂತಹ ಸಂರಕ್ಷಣಾತ್ಮಕ ಚಿಕಿತ್ಸೆಯೇ ಸೂಕ್ತವಾಗಿರುವ ಸಂದರ್ಭ ಗಳಲ್ಲಿ ಅನಗತ್ಯ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು' ಎಂದು ಹೇಳಿದ್ದಾರೆ.

ಗ್ಲೆನೆಗಲ್ಸ್‌ ಬಿಜಿಎಸ್‌ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಮಾತನಾಡಿ, 'ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಿರುವುದು ರೋಗಿ ಕೇಂದ್ರಿತ ಮತ್ತು ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಆರೋಗ್ಯ ಸೇವೆ ಒದಗಿಸುವ ನಮ್ಮ ಬದ್ಧತೆಗೆ ನಿದರ್ಶನವಾಗಿದೆ. ರೋಗಿಗಳ ಚಿಕಿತ್ಸಾ ಪಯಣವನ್ನು ಸರಳಗೊಳಿಸುವುದರ ಜೊತೆಗೆ, ಅತ್ಯಾಧು ಿಕ ವೈದ್ಯಕೀಯ ಪರಿಣತಿಯನ್ನು ಅವರಿಗೆ ಲಭ್ಯವಾಗುವಂತೆ ಮಾಡಲು ನಾವು ನಿರಂತರವಾಗಿ ವಿಶೇಷ ಚಿಕಿತ್ಸಾ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಈ ಕ್ಲಿನಿಕ್ ಕೂಡ ಉತ್ತಮ ಚಿಕಿತ್ಸಾ ಫಲಿತಾಂಶ ಮತ್ತು ರೋಗಿಗಳ ಅನುಭವ ಸುಧಾರಿಸುವ ನಿಟ್ಟಿನಲ್ಲಿ ಸಮನ್ವಯದ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಿತ ವೈದ್ಯಕೀಯ ಸೇವೆ ಒದಗಿಸುವ ನಮ್ಮ ಪ್ರಯತ್ನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ' ಎಂದು ಬಣ್ಣಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani