Dailyhunt Logo
  • Light mode
    Follow system
    Dark mode
    • Play Story
    • App Story
Gauribidanur News: ಕಾರ್ಮಿಕರಿಗೆ ಅಗತ್ಯ ನೆರವು ನ್ಯಾಯಾಲಯದಿಂದ ದೊರೆಯಲಿದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್

Gauribidanur News: ಕಾರ್ಮಿಕರಿಗೆ ಅಗತ್ಯ ನೆರವು ನ್ಯಾಯಾಲಯದಿಂದ ದೊರೆಯಲಿದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್

Vishwavani 1 month ago

ಗೌರಿಬಿದನೂರು : ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಮತ್ತು ಅವರಿಗೆ ಅಗತ್ಯವಿರುವ ಕಾನೂನು ನೆರವು ನೀಡಲು ನ್ಯಾಯಾಲಯ ಸದಾ ಬದ್ದವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್(Chief Civil Judge Ganesh.N.) ತಿಳಿಸಿದರು.
ನಗರದ ಸಿಲ್ವರ್ ಪಾರ್ಕ್ ಅಪಿರಿಯನ್ಸ್ ಪ್ರವೇಟ್ ಲಿಮಿಟೆಡ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಮತ್ತು ತಾ.

ಆಡಳಿತ, ತಾ. ಪಂ. ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಕಾರ್ಮಿಕರ ಅವಶ್ಯಕತೆ ಇನ್ನೂ ಇರುವುದರಿಂದ ಅವರಿಗೆ ಪ್ರಾಮುಖ್ಯತೆ ನೀಡುವುದು ಅತ್ಯವಶ್ಯಕವಾಗಿದೆ. ಬಡ ಕಾರ್ಮಿಕರಿಗೆ ಉಚಿತವಾಗಿ ಕಾನೂನು ಸಲಹೆ ಮತ್ತು ನೆರವನ್ನು ನೀಡಲು ತಾ. ಕಾನೂನು ಸೇವಾ ಸಮಿತಿ ಸಿದ್ದವಿದೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ಕಾನೂನು ಸಲಹೆ ನೆರವನ್ನು ನೀಡಲಾಗುತ್ತದೆ, ಕಾರ್ಮಿಕರು ಯಾವುದೇ ಸಂಕೋಚವಿಲ್ಲದೆ ತಮಗೆ ಎದುರಾಗಿ ರುವ ಕಾನೂನು `ಸಮಸ್ಯೆಗಳಾದ ಆಸ್ತಿ ವಿವಾದಗಳು, ಕುಟುಂಬ ಕಲಹ ಅಥವಾ ವೈಯಕ್ತಿಕ ಸಮಸ್ಯೆಗಳ ಕುರಿತು ಕಾನೂನು ನೆರವು ಪಡೆಯಬಹುದು. ನಮ್ಮ ದೇಶದ ಆರ್ಥಿಕ ಬೆನ್ನುಲುಬು ಗಳೆಂದರೆ ರೈತರು ಮತ್ತು ಕಾರ್ಮಿಕರು ಮಾತ್ರ. ಆದ್ದರಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸು ವುದು ನಮ್ಮ ಆದ್ಯತೆ ಎಂದು ಹೇಳಿದರು.

Gauribidanur News: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಶಾಖೆಯಿಂದ ಪ್ರತಿಭಟನೆ
ತಾ. ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್.ಟಿ.ಪಿ ಮಾತನಾಡಿ, ಸಮಾಜ ಹಾಗೂ ನಗರ ಮತ್ತು ರಾಷ್ಟ್ರದ ಅಭಿವೃದ್ಧಿಯ ಹಿಂದೆ ಕಾರ್ಮಿಕರ ಅವಿರತ ಶ್ರಮವಿದೆ. ಕಾರ್ಮಿಕ ನಿರೀಕ್ಷಕ ಹರೀಶ್ ಕುಮಾರ್. ಎಸ್ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ, ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿ ಪಡಿಸಲಾಗಿದ್ದು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆಯಾಗ ದಂತೆ ವೇತನ ನೀಡಬೇಕು 7ನೇ ತಾರೀಕಿನೊಳಗೆ ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರು ಇದ್ದಲ್ಲಿ 10 10 ತಾರೀಕಿನೊಳಗೆ ವೇತನ ಪಾವತಿಯಾಗಬೇಕು, ಎಂಟು ಗಂಟೆಯ ಕೆಲಸದ ನಂತರ ಹೆಚ್ಚುವರಿ ಯಾಗಿ ಕೆಲಸ ಮಾಡಿದರೆ ಡಬಲ್ ವೇತನ ನೀಡಬೇಕು. ಜೊತೆಗೆ 20 ದಿನ ಕೆಲಸ ಮಾಡಿದರೆ ಒಂದು ದಿನದ ರಜೆಯನ್ನು ಪಡೆಯಬಹುದು ಎಂದರು.
ಇದನ್ನು ಕೆಲಸ ಬಿಡುವಾಗ ಅಥವಾ ವರ್ಷದ ಕೊನೆಯಲ್ಲಿ ಪಡೆಯಬಹುದು. ಮಹಿಳಾ ಕಾರ್ಮಿಕರ ವಿಶೇಷ ಕಾನೂನು ಸುರಕ್ಷತೆಗಾಗಿ ಕ್ರಮಗಳಿವೆ. ಹೆಚ್ಚಿನ ಕಾರ್ಮಿಕರು ಇರುವ ಕಾರ್ಖಾನೆಗಳಲ್ಲಿ ಶಿಶು ಪಾಲನಾ ಕೇಂದ್ರಗಳು ಹಾಗೂ ಕ್ಯಾಂಟೀನ್ ವ್ಯವಸ್ಥೆ ಕಡ್ಡಾಯವಾಗಿದ್ದು, ಮಹಿಳೆಯರ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಕಿರುಕುಳ ಅಥವಾ ಅಸಭ್ಯ ವರ್ತನೆಯಾದಲ್ಲಿ 'ಶೀ ಪೋರ್ಟಲ್' ಮೂಲಕ ಗೌಪ್ಯವಾಗಿ ದೂರು ದಾಖಲಿಸಬಹುದು.
ಇಂತಹ ದೂರುಗಳ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇತ್ತೀಚೆಗೆ ಕನಿಷ್ಠ ವೇತನದಲ್ಲಿ ಪರಿಷ್ಕರಣೆಯಾಗಿದ್ದು, ಕಾರ್ಮಿಕರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಹಾಗೂ ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.
ಈ ಸಮಾರಂಭದಲ್ಲಿ ಸಿಲ್ವರ್ ಪಾರ್ಕ್ ಅಪಿಯರೆನ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜರ್ ದಿಲೀಪ್ ಕುಮಾರ್ ರೆಡ್ಡಿ, ವಕೀಲರ ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಬಿ.ಲಿಂಗಪ್ಪ, ವಕೀಲರು ಹಾಗೂ ಸಿಲ್ವರ್ ಪಾರ್ಕ್ ಅಪಿರಿಯನ್ಸ್ ಲಿಮಿಟೆಡ್ ನ ಸಿಬ್ಬಂದಿ, ಕಾರ್ಮಿಕರು, ತಾಂತ್ರಿಕ ವರ್ಗದವರು ಸೇರಿದಂತೆ ಹಲವು ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani