Dailyhunt
Gauribidanur News: ವಿಜೃಂಭಣೆಯಿಂದ ನಡೆದ ಕೋಟೆ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

Gauribidanur News: ವಿಜೃಂಭಣೆಯಿಂದ ನಡೆದ ಕೋಟೆ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

Vishwavani 1 month ago

ಗೌರಿಬಿದನೂರು: ನಗರದಲ್ಲಿ ಕೋಟೆ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶ್ರೀ ರಾಮೋತ್ಸವ ಮತ್ತು ಬ್ರಹ್ಮರಥೋತ್ಸವ ಕೋಟೆಯ ಎಲ್ಲಾ ಮುಖಂಡರು ಹಾಗೂ ಭಕ್ತಾದಿಗಳು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ನಗರದ ಕೋಟೆಯಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವದ ಆಶೀರ್ವಾದ ದಾರಿ ಉದ್ದಕ್ಕೂ ಭಕ್ತಾದಿಗಳು ಪಡೆದರು.

ದಾರಿಯ ಉದ್ದಕ್ಕೂ ಜೈ ಶ್ರೀರಾಮ್. ಜೈ ಶ್ರೀರಾಮ್ ಎಂದು ರಾಮನನ್ನು ತಪಿಸುತ್ತಾ ರಾಮೋತ್ಸವದ ಮೇಲೆ ಬಾಳೆ ಹಣ್ಣು ದವಣ ಹಾಕುವ ಮೂಲಕ ದೇವರನ್ನು ಸ್ಮರಿಸಿದರು.

Gauribidanur News: ಮನುಷ್ಯನ ಆರೋಗ್ಯಕ್ಕೆ ನಡಿಗೆ ಬಹಳ ಮುಖ್ಯ: ಮಾನಸ ಅಸ್ಪತ್ರೆ ವೈದ್ಯ ಡಾ.ಶಶಿಧರ್ ಸಲಹೆ

ಭಗವಾನ್ ಚಿದ್ದಗನಾನಂದ ಮಹರ್ಷಿಯವರ ಆಶ್ರಮ ಮತ್ತು ಕೋಟಿ ಕೋದಂಡರಾಮ ಟ್ರಸ್ಟ್. ಹಾಗೂ ಕೋಟೆ ಕೋದಂಡರಾಮಸ್ವಾಮಿ ಕನ್ನಡ ಯುವಕರ ಬಳಗ ಮತ್ತು ಬಕ್ತ ಮಂಡಳಿ. ಹಾಗೂ ಯೋಗಿ ನಾರಾಯಣ ಅನ್ನದಾನ ಟ್ರಸ್ಟ್, ಮತ್ತು ಬಲಿಜ ಯುವ ಗರ್ಜನೆ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನಗರದಲ್ಲಿ ಅದ್ದೂರಿಯಾಗಿ ದೇವರ ವಿವಿಧ ರೀತಿಯ ಪೂಜೆ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಭಕ್ತಾದಿಗಳು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಸ್ವಾಮಿಜಿ. ಎ. ಮೋಹನ್. ಅಶ್ವತ್ಥ್‌ ನಾರಾಯಣಪ್ಪ, ರವೀಂದ್ರನಾಥ. ಚಾರಿ. ಅನಿಲ್ ಕುಮಾರ್. ಜಿ ಎ ಪ್ರದೀಪ್.ಮನು. ಪರಮೇಶ್ ಜಯಣ್ಣ, ರಾಜೇಶ್ ಹಾಜರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani