
1/5
ಈ ಬಾರಿಯ ಜೆನ್ ಜಿ ಮಾನ್ಸೂನ್ ಫ್ಯಾಷನ್‌ನಲ್ಲಿ ವೈವಿಧ್ಯಮಯ ಫಂಕಿ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಟಿನೇಜ್-ಕಾಲೇಜ್ ಯುವಕ-ಯುವತಿಯರನ್ನು ಸವಾರಿ ಮಾಡತೊಡಗಿವೆ.

2/5
ಟ್ರೆಂಡಿಯಾಗಿರುವ ಫಂಕಿ ಜಾಕೆಟ್ಸ್
ಈ ಸೀಸನ್‌ನಲ್ಲಿ ಹೆಚ್ಚಾಗಿ ಅಬ್ಸ್ಟ್ರಾಕ್ಟ್ ಪ್ರಿಂಟ್ಸ್, ಜೆಮೆಟ್ರಿಕಲ್, ಇಲ್ಯೂಷನ್ ಕ್ರಿಯೇಟ್ ಮಾಡುವಂತಹ ಡಿಸೈನ್ಸ್, ಅಸ್ಸೆಮ್ಮಿಟ್ರಿಕಲ್, ಫನ್ನಿ ಕ್ಯಾರೆಕ್ಟರ್ ಚಿತ್ರಣ ಇರುವಂತ ಫಂಕಿ ಡಿಸೈನ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ.

3/5
ಫಂಕಿ ಜಾಕೆಟ್ಸ್ ಆಗರ
ಇನ್ನು, ಆನ್ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಂತೂ ಮಾನ್ಸೂನ್‌ನಲ್ಲಿ ಈ ಜನರೇಷನ್ ಕಾಲೇಜ್ ಹುಡುಗ-ಹುಡುಗಿಯರಿಗೆಂದೇ ಲೆಕ್ಕವಿಲ್ಲದಷ್ಟು ಬಗೆಯ ಫಂಕಿ ಜಾಕೆಟ್‌ಗಳು ಬಿಡುಗಡೆಗೊಂಡಿವೆ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿಗಳಾದ ರಾಘವ್, ದೀನಾ ಹಾಗೂ ಮೋಕ್ಷಾ.

4/5
ಓವರ್ ಸೈಜ್ ಫಂಕಿ ಜಾಕೆಟ್ಸ್ ಜಮಾನ
ಅಚ್ಚರಿ ಎಂಬಂತೆ, ಓವರ್ ಸೈಜ್ ಫಂಕಿ ಜಾಕೆಟ್‌ಗಳೂ ಕೂಡ ಟ್ರೆಂಡಿಯಾಗಿವೆ. ಅವುಗಳಲ್ಲಿ ಯೂನಿಸೆಕ್ಸ್ ವಿನ್ಯಾಸದವು ಪ್ರಚಲಿತದಲ್ಲಿವೆ. ಹುಡುಗ-ಹುಡುಗಿಯರು ಎಂಬ ಭೇದ-ಭಾವವಿಲ್ಲದೇ ಇವನ್ನು ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5
ಹೇಗಿರಬೇಕು ಫಂಕಿ ಜಾಕೆಟ್ಸ್
- ತೀರಾ ಟ್ರೆಡಿಷನಲ್ ಔಟ್‌ಫಿಟ್‌ಗೆ ಧರಿಸುವುದು ಬೇಡ.
- ಕ್ಯಾಶುವಲ್ ಸ್ಟೈಲಿಂಗ್‌ಗೆ ಮಾತ್ರ ಧರಿಸಬೇಕು
- ಫನ್ನಿಯಾಗಿದ್ದರೂ ಅವಾಚ್ಯ ಪದಗಳ ಪ್ರಿಂಟ್ಸ್ ಹೊಂದಿರಬಾರದು.
- ಯೂನಿಸೆಕ್ಸ್ ಫಂಕಿ ಜಾಕೆಟ್ಸ್ ಓವರ್‌ಸೈಝ್ ಆದರೂ ಟ್ರೆಂಡಿ ಫ್ಯಾಷನ್‌ನಲ್ಲಿದೆ.
- ಫಂಕಿ ಹೆಸರಲ್ಲಿ ಹುಚ್ಚುಹುಚ್ಚಾಗಿ ಮಿಕ್ಸ್ ಮ್ಯಾಚ್ ಮಾಡಕೂಡದು.
- ಓವರ್‌ಸೈಜ್ ಟ್ರೆಂಡಿಯಾಗಿದೆ ಎಂದು ತೀರಾ ದೊಗಲೆಯದ್ದನ್ನು ಧರಿಸುವುದು ಬೇಡ!

