Dailyhunt
Good Friday: ಗುಡ್‌ ಫ್ರೈಡೆ ಅಂಗವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ದಿನಸಿ ವಿತರಿಸಿದ ಸಂದೀಪ್‌ ರೆಡ್ಡಿ

Good Friday: ಗುಡ್‌ ಫ್ರೈಡೆ ಅಂಗವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ದಿನಸಿ ವಿತರಿಸಿದ ಸಂದೀಪ್‌ ರೆಡ್ಡಿ

Vishwavani 1 week ago

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಎಲ್ಲಾ ಸಮುದಾಯದೊಟ್ಟಿಗೆ ನೆರವಿಗೆ ನಿಲ್ಲುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬರಲಾಗಿದ್ದು, ಗುಡ್‌ ಫ್ರೈಡೆ(Good Friday) ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ಸಮುದಾ ಯಕ್ಕೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಸಂದೀಪ್‌ರೆಡ್ಡಿ ತಿಳಿಸಿದರು.

ನಗರದ ಸಿಎಸ್‌ಐ ಚರ್ಚ್ ಸಭಾಂಗಣದಲ್ಲಿ ಗುರುವಾರ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

OTT Friday releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಕನ್ನಡ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಿವು!

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಸೇವಾ ಕಾರ್ಯಗಳ ಮೂಲಕ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಬೆಸೆಯುವ ಕೆಲಸವನ್ನು ನಿರ್ವಂಚನೆಯಿಂದ ಮಾಡುತ್ತಾ ಬಂದಿದೆ. ರಂಜಾನ್ ಹಬ್ಬಕ್ಕೆ ಮುಸ್ಲಿಂ ಸಮುದಾಯಕ್ಕೆ ನೆರವು ನೀಡಿದಂತೆ ಶುಕ್ರವಾರ ನಡೆಯುವ ಗುಡ್‌ ಫ್ರೈಡೆ ಅಂಗವಾಗಿ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಹಿಂದು ಗಳಿಗೂ ಕೂಡ ಗಣೇಶೋತ್ಸವ ಸೇರಿದಂತೆ ನಾನಾ ಸಂದರ್ಭಗಳಲ್ಲಿ ನೆರವಿಗೆ ನಿಲ್ಲುವ ಕೆಲಸ ಮಾಡಲಾಗಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು.

ಪ್ರತಿಯೊಂದು ಧರ್ಮಕ್ಕೂ ತಮ್ಮದೇ ಆದ ಆಚಾರ-ವಿಚಾರಗಳಿದ್ದರೂ, ಒಟ್ಟಾಗಿ ಸೇರಿದಾಗ' ನಾವು ಒಂದೇ' ಎಂಬ ಸಂದೇಶವನ್ನು ಸಮಾಜಕ್ಕೆ ನೀಡಬೇಕು. ಈ ನಿಟ್ಟಿನಲ್ಲಿ ನಾವು ಎಲ್ಲ ಧರ್ಮದವರೊಂದಿಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಈ ಒಗ್ಗಟ್ಟನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.

ನನಗೆ ಎಲ್ಲ ಧರ್ಮ ಮತ್ತು ಜನಾಂಗದವರೊAದಿಗೆ ಉತ್ತಮ ಸಂಬಂಧವಿದೆ. ಶಾಂತಿ ಸಂದೇಶ ಸಾರುವ ಕ್ರೈಸ್ತ ಧರ್ಮದ ಅನೇಕ ಜನರೊಂದಿಗೆ ನನ್ನ ಒಡನಾಟವೂ ಇದೆ. ಅವರ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿವೆ. ನಾನು ಹಿಂದಿನಿಂದಲೂ ಎಲ್ಲಾ ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇದರಿಂದ ನನ್ನ ವ್ಯಕ್ತಿತ್ವ ಸಮಾಜಮುಖಿಯಾಗಿ ಬೆಳೆಯಲು ನೆರವಾಗಿದೆ ಎಂದರು.

ಈ ಸಂದರ್ಭದಲ್ಲಿ ಚರ್ಚಿನ ಸಭಾಪಾಲಕ ಪ್ರವೀಣ್ ಮಾತನಾಡಿ, ಪವಿತ್ರ ಶುಕ್ರವಾರ ಕ್ರೈಸ್ತರಿಗೆ ಮಹತ್ವದ ದಿನವಾಗಿದೆ. ತಾನು ಸುಖಕರ ಜೀವನ ನಡೆಸುವುದರ ಜೊತೆಗೆ ಇತರ ರಿಗೆ ಸೇವೆ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಇರಬೇಕು ಎಂಬುದು ಕ್ರೈಸ್ತ ಧರ್ಮದ ಸಾರ ವಾಗಿದೆ. ಇಂತಹ ಸೇವಾ ಕಾರ್ಯವನ್ನು ಸಂದೀಪ್ ರೆಡ್ಡಿ ಅವರು ನೆರವೇರಿಸಿರುವುದು ಶ್ಲಾಘನೀಯ. ಎಲ್ಲ ಧರ್ಮ, ಜನಾಂಗದವರು ಸಹಬಾಳ್ವೆಯಿಂದ ಇರಬೇಕು ಎಂಬ ಅವರ ಆಲೋಚನೆ ಶ್ರೇಷ್ಠವಾಗಿದೆ. ದೇವರು ಅವರ ಈ ಸೇವಾ ಕಾರ್ಯವನ್ನು ಮೆಚ್ಚಿ ಆಶೀರ್ವದಿ ಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಸಿಎಸ್‌ಐ ಚರ್ಚಿನ ಕಾರ್ಯದರ್ಶಿ ವಿ ದಾಸ್, ಖಜಾಂಚಿ ಹೆನ್ರಿ ಪ್ರಸನ್ನ ಕುಮಾರ್, ಕಾರ್ಯಕ್ರಮ ಸಂಯೋಜಕ ಅರುಣ್ ಕುಮಾರ್, ಭಜನಾ ಕಾರ್ಯದರ್ಶಿ ಪಾಲ್ ಅಬ್ರಹಾಮ್,ಸಂಚಾಲಕರಾದ ಕಿರಣ್ ವಿಕ್ಟರ್ ಎನ್.ಕೆ. ಆದರ್ಶ್, ಸ್ವಾಮಿ ದಾಸ್ ಎಸ್.ಸಂದೀಪ್, ಶಶಿಕಲಾ ಸೈಮನ್, ಶರ್ಮಿಳಾ ಹೆನ್ರಿ, ಎಸ್,ರಾಜಶೇಖರ್, ಏಂಜಲೀನ್ ಜೆಸ್ಸಿ ಇತರರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani