Dailyhunt Logo
  • Light mode
    Follow system
    Dark mode
    • Play Story
    • App Story
ಗ್ರ್ಯಾಂಡ್‌ ಚೆಸ್‌ ಟೂರ್‌ ಫೈನಲ್ಸ್‌ ಗೆದ್ದು ಇತಿಹಾಸ ನಿರ್ಮಿಸಿದ ಆರ್‌.ಪ್ರಜ್ಞಾನಂದ

ಗ್ರ್ಯಾಂಡ್‌ ಚೆಸ್‌ ಟೂರ್‌ ಫೈನಲ್ಸ್‌ ಗೆದ್ದು ಇತಿಹಾಸ ನಿರ್ಮಿಸಿದ ಆರ್‌.ಪ್ರಜ್ಞಾನಂದ

Vishwavani 1 week ago

ಸೇಂಟ್ ಲೂಯಿಸ್ (ಅಮೆರಿಕ), ಆ.28: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಜ್ಞಾನಂದ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಗ್ರ್ಯಾಂಡ್‌ ಚೆಸ್‌ ಟೂರ್‌ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಅದ್ಭುತ ಕಮ್‌ಬ್ಯಾಕ್ ಮಾಡಿ ಈ ಗಮನಾರ್ಹ ಸಾಧನೆ ಮಾಡಿದರು.

ಕ್ಲಾಸಿಕಲ್ ಪಂದ್ಯಗಳ ನಂತರ ಪ್ರಜ್ಞಾನಂದ ಅಂತಿಮ ದಿನದಾಟಕ್ಕೆ ಕರುವಾನಗಿಂತ ಆರು ಪಾಯಿಂಟ್‌ಗಳ ಹಿಂದಿದ್ದರು. 3-9 ಹಿನ್ನಡೆಯಲ್ಲಿದ್ದರು. ದಿನದ ಆರಂಭದಲ್ಲಿ ಪ್ರಗ್ನಾನಂದ ಆರು ಅಂಕಗಳ ಕೊರತೆಯನ್ನು ನೀಗಿಸಿದರು. ರ‍್ಯಾಪಿಡ್‌, ನಾಲ್ಕು ಬ್ಲಿಟ್ಝ್ ವಿಭಾಗದಲ್ಲಿ ಎರಡೂ ತ್ವರಿತ ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿದರು. ಅಂತಿಮವಾಗಿ 15-13 ಜಯ ಸಾಧಿಸಿದರು.

ತಮ್ಮ ಚೊಚ್ಚಲ ಪ್ರಶಸ್ತಿ ಗೆದ್ದ ಪ್ರಜ್ಞಾನಂದ ಸುಮಾರು 2 ಕೋಟಿ ರೂ. ಬಹುಮಾನದ ಮೊತ್ತ ಪಡೆದುಕೊಂಡರು. ಗೆಲುವಿನ ಬಳಿಕ ಮಾತನಾಡಿದ ಅವರು, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇವತ್ತು ನನಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ ಎಂದು ನಾನು ಭಾವಿಸಿದ್ದೆ. ಆರು ಅಂಕಗಳ ಕೊರತೆ ತುಂಬಾನೇ ಒತ್ತಡ ಉಂಟು ಮಾಡಿತು. ಆದರೆ ಅಂತಿಮವಾಗಿ ಗೆಲುವು ಒಲಿಯಿತು" ಎಂದು ಪ್ರಜ್ಞಾನಂದ ನಗುತ್ತಾ ಹೇಳಿದರು.

'ಟೆಸ್ಟ್ ಕ್ರಿಕೆಟ್ ಗೆದ್ದಿದೆ': ಕೊಲಂಬೊ ಟೆಸ್ಟ್‌ ಡ್ರಾ ಬಳಿಕ ಶುಭಮನ್ ಗಿಲ್ ಹೇಳಿಕೆ

ಪ್ರಜ್ಞಾನಂದ ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ 0-6 ಅಂತರದಲ್ಲಿ ಸೋತರು ಮತ್ತು ಎರಡನೇ ಗೇಮ್‌ನಲ್ಲಿ 3-3 ಅಂತರದಲ್ಲಿ ಡ್ರಾ ಮಾಡಿಕೊಂಡರು. ನಂತರ ಅವರು ಎರಡೂ ರ‍್ಯಾಪಿಡ್ ಸ್ಪರ್ಧೆಗಳನ್ನು ಗೆದ್ದರು ಮತ್ತು ನಾಲ್ಕು ಬ್ಲಿಟ್ಜ್ ಪಂದ್ಯಗಳಲ್ಲಿ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು.

ಎರಡನೇ ಕ್ಲಾಸಿಕಲ್ ಆಟದಲ್ಲಿ ಚೆನ್ನೈನ ಆಟಗಾರ ಗೆಲುವಿನ ಕೆಲವು ಅವಕಾಶಗಳಲ್ಲಿ ಎಡವಿದ ಪರಿಣಾಮ ಅಮೆರಿಕದ ಫ್ಯಾಬಿಯಾನೊ ಕರುವಾನ ಜಿಸಿಟಿ ಫೈನಲ್‌ನ ಎರಡನೇ ಕ್ಲಾಸಿಕಲ್ ಆಟವನ್ನು ಬುಧವಾರ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರು ಮುಂದಿನ ವರ್ಷದ ಗ್ರ್ಯಾಂಡ್‌ ಚೆಸ್ ಟೂರ್‌ (ಜಿಸಿಟಿ) ನೇರ ಪ್ರವೇಶ ಪಡೆದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani