Dailyhunt
Gudibande News: ಮಹಾವೀರರ ಆದರ್ಶಗಳು, ಅಹಿಂಸಾ ಮಾರ್ಗ ಪಾಲಿಸೋಣ: ಗುಂಪು ಮರದ ಆನಂದ್

Gudibande News: ಮಹಾವೀರರ ಆದರ್ಶಗಳು, ಅಹಿಂಸಾ ಮಾರ್ಗ ಪಾಲಿಸೋಣ: ಗುಂಪು ಮರದ ಆನಂದ್

Vishwavani 0 months ago

ಗುಡಿಬಂಡೆ: ವಿಶ್ವಶಾಂತಿ ಮತ್ತು ಸಮಸ್ತ ಮಾನವ ಕಲ್ಯಾಣಕ್ಕಾಗಿ ಭಗವಾನ ಮಹಾ ವೀರರು ಸಾವಿರಾರು ವರ್ಷಗಳ ಹಿಂದೆಯೇ ಬೋಧಿಸಿದ ಅಹಿಂಸಾ ತತ್ವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್(State award winning group Marada Anand) ತಿಳಿಸಿದರು.

ಪಟ್ಟಣದ ತಿರುಮಲ ನಗರದ 5ನೇ ವಾರ್ಡ್‌ನ ಏಡುಗರ ಅಕ್ಕಮ್ಮ ಲೇಔಟ್‌ನಲ್ಲಿ ಮಹಾ ವೀರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜೈನ ಧರ್ಮದ 24ನೇ ಹಾಗೂ ಕೊನೆಯ ತೀರ್ಥಂಕರರಾದ ಮಹಾವೀರರ ಜನ್ಮದಿನವು ಅತ್ಯಂತ ಪವಿತ್ರವಾದದ್ದು. ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು ಜನಿಸಿದ ಮಹಾವೀರರು, ಅಹಿಂಸೆ ಮತ್ತು ಸಮಾನತೆಯ ಮಹಾನ್ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.

Gudibande News: ಗುಡಿಬಂಡೆಯಲ್ಲಿ ಸಡಗರದ ರಂಜಾನ್ ಆಚರಣೆ, ಸಸಿ ನೆಟ್ಟು ರಂಜಾನ್ ಆಚರಿಸಿದ ಪರಿಸರ ಪ್ರೇಮಿಗಳು

ಮಹಾವೀರರು ಸಾವಿರಾರು ವರ್ಷಗಳ ಹಿಂದೆ ಬೋಧಿಸಿದ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರು ಜೈನ ಸಮಾಜಕ್ಕೆ ಮಾತ್ರ ಬೋಧನೆ ಮಾಡಲಿಲ್ಲ. ಇಡೀ ಮಾನವ ಕಲ್ಯಾಣ ಬಯಸಿ, ಸನ್ಮಾರ್ಗ ತೋರಿದ್ದರು. ಅವರ ತತ್ವಾದರ್ಶಗಳು ಸರ್ವಕಾಲಿಕವಾದುದು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಇಂತಹ ಸುಸಂದರ್ಭದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಇನ್ನೂ ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹಾವೀರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಈ ವೇಳೆ ಮಹಾವೀರರ ಕುರಿತು ಬಿಇಒ ಕೃಷ್ಣಕುಮಾರಿ ಮಾತನಾಡಿ, ಭಗವಾನ್ ಮಹಾವೀರ ಬೋಧಿಸಿದ ಅಹಿಂಸೆ, ಸತ್ಯ, ಅಪರಿಗ್ರಹ, ಅಚೌರ್ಯ, ಬ್ರಹ್ಮಚರ್ಯ ಮೊದ ಲಾದ ತತ್ವಗಳನ್ನು ನಾವು ನಿತ್ಯವೂ ಜೀವನದಲ್ಲಿ ಅನುಷ್ಠಾನ ಮಾಡಿ ಧರ್ಮ ಮಾರ್ಗದಲ್ಲಿ ನಡೆಯಬೇಕು. ಜಾಗತಿಕವಾಗಿ ಶಾಂತಿ ನೆಲೆಸಬೇಕಾದರೆ, ನಾವು ಮಹಾವೀರರು ಪ್ರತಿಪಾದಿ ಸಿದ ಅಹಿಂಸೆಯ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.

ಈ ವೇಳೆ, ಪಪಂ ಮುಖ್ಯಾಧಿಕಾರಿ ಆರತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ, ಕೃಷಿ ಇಲಾಖೆಯ ಕೇಶವರೆಡ್ಡಿ, ಕೆಡಿಪಿ ಸದಸ್ಯ ರಿಯಾಜ್, ಕಂದಾಯ ಇಲಾಖೆಯ ಶಿವ ಕುಮಾರ್, ಪರಿಸರವಾದಿಗಳಾದ ಚಾಂದ್ ಪಾಷ, ರಘು, ಪೊಲೀಸ್ ದೇವರಾಜ್, ವೆಂಕಟೇಶ್, ನಿತಿನ್ ಸೇರಿದಂತೆ ಹಲವರು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani