Dailyhunt Logo
  • Light mode
    Follow system
    Dark mode
    • Play Story
    • App Story
ಹೈಕೋರ್ಟ್ ಹೇಳಿದೆ ಜಾಹೀರಾತಲ್ಲಿದೆ: ಎಚ್.ಡಿ.ಕುಮಾರಸ್ವಾಮಿ ನೈಸ್‌ ಉವಾಚ

ಹೈಕೋರ್ಟ್ ಹೇಳಿದೆ ಜಾಹೀರಾತಲ್ಲಿದೆ: ಎಚ್.ಡಿ.ಕುಮಾರಸ್ವಾಮಿ ನೈಸ್‌ ಉವಾಚ

Vishwavani 1 hr ago

ಟೋಲ್ ದೊಡ್ಡ ಹಗರಣ ಜಾಹೀರಾತಿಗೆ ಕೇಂದ್ರ ಸಚಿವ ಪ್ರತಿಕ್ರಿಯೆ

ಮಂಡ್ಯ: ನೈಸ್ ರಸ್ತೆ ಟೋಲ್ ಸಂಗ್ರಹ ರಾಜ್ಯದ ಅತಿದೊಡ್ಡ ಹಗರಣವೆಂದು ಭಾನುವಾರ ವಿವಿಧ ಪತ್ರಿಕೆ ಗಳಲ್ಲಿ ಪ್ರಕಟವಾಗಿರುವ ಜಾಹೀರಾತು ಹೈಕೋರ್ಟ್ ನಲ್ಲಿ ದಾಖಲಾಗಿರುವ ಅಭಿ ಪ್ರಾಯಗಳನ್ನೇ ಆಧರಿಸಿದೆ, ಅದು ಕಪೋಲಕಲ್ಪಿತವಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ( H D Kumaraswamy ) ಹೇಳಿದ್ದಾರೆ.

NICE Road: ನೈಸ್ ರಸ್ತೆ ಹಗರಣದ ವಿರುದ್ಧ ಇಡೀ ರಾಜ್ಯದ ಜನರು ಎದ್ದು ನಿಲ್ಲಬೇಕು: ಎಚ್‌ಡಿಕೆ ಕರೆ

ಮಂಡ್ಯದ ಮೇಲುಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಹೀರಾತನ್ನು ಯಾರು ಕೂಡ ಕಲ್ಪನೆ ಮಾಡಿ ಕೊಟ್ಟಿಲ್ಲ. ಇತ್ತೀಚೆಗೆ ಹೈಕೋರ್ಟ್‌ʼನ ದ್ವಿಸದಸ್ಯ ಪೀಠ ನೈಸ್ ಯೋಜನೆ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಅದೇ ಇವತ್ತು ಜಾಹೀರಾತು ರೂಪದಲ್ಲಿ ಪ್ರಕಟವಾಗಿದೆ. ಈ ಸರಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ ಎಂದಿದ್ದಾರೆ.

ಖೇಣಿಯಿಂದ ಏನೂ ಆಗಬೇಕಿಲ್ಲ ಅಶೋಕ್ ಖೇಣಿ ನೀಡಿದ್ದಾರೆನ್ನಲಾದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರನ್ನು ಕಟ್ಟಿಕೊಂಡು ನನಗೆ ಏನೂ ಆಗ ಬೇಕಿಲ್ಲ. ನಾನು ಆತನಿಗಲ್ಲ, ಸರಕಾರಕ್ಕೆ ಹೇಳುತ್ತಿರುವುದು ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani