Dailyhunt Logo
  • Light mode
    Follow system
    Dark mode
    • Play Story
    • App Story
Hari Paraak Column: ದರ್ಶನ್ ಕೇಳ್ತಾ ಇರೋ ಸುದ್ದಿ- 'ಪ್ರದೋಷ' ಸಮಾಚಾರ

Hari Paraak Column: ದರ್ಶನ್ ಕೇಳ್ತಾ ಇರೋ ಸುದ್ದಿ- 'ಪ್ರದೋಷ' ಸಮಾಚಾರ

Vishwavani 1 month ago

ತುಂಟರಗಾಳಿ

ಸಿನಿಗನ್ನಡ

ವಾರ ಸೋ ಕಾಲ್ಡ್ ಕನ್ನಡದ ಸಿನಿಮಾ ಟಾಕ್ಸಿಕ್ ರಿಲೀಸ್ ಆಗ್ತಾ ಇದೆ. ಜಗತ್ತಿನಾದ್ಯಂತ ಟಾಕ್ಸಿಕ್ ಸಿನಿಮಾ ಸುದ್ದಿ ಮಾಡುತ್ತಿದೆ. ಹಾಗಾಗಿ ಇದನ್ನು ಪ್ಯಾನ್ ವರ್ಲ್ಡ್ ಸಿನಿಮಾ ಎಂದರೂ ತಪ್ಪಿಲ್ಲ. ಯಶ್ ಅವರ ಜೀವನದ ಅತಿ ಮುಖ್ಯ ಸಿನಿಮಾಗಳಲ್ಲಿ ಒಂದು ಎನಿಸಿಕೊಳ್ಳಬಹುದಾದ ಈ ಚಿತ್ರ ಯಶ್ ಅವರ ವೃತ್ತಿ ಜೀವನವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯ ಉಳ್ಳದ್ದು.

ಟಾಕ್ಸಿಕ್ ಟ್ರೈಲರ್ ನೋಡಿ ಸಿನಿಮಾದ ಬಗ್ಗೆ ಏನೇನೆಲ್ಲ ಸಿಕ್ ಮಾತಾಡಿದವರೂ ಕೂಡಾ ಈಗಾಗಲೇ ಅಡ್ವಾ ಬುಕ್ಕಿಂಗ್ ಮಾಡಿದ್ದಾರೆ. ಸಿನಿಮಾದ ಸೆಳೆತವೇ ಅಂಥದು. ಸಿನಿಮಾದ ಬಗ್ಗೆ ಆಸಕ್ತಿ ಇಲ್ಲ ಅಂದ್ರೆ ಯಾರು ಏನೇ ತಲೆಗೊಂದು ಹೊಗಳಿಕೆಯ ಮಾತಾಡಿದ್ರೂ ಥಿಯೇಟರ್ ಕಡೆ ಜನ ತಲೆ ಹಾಕಲ್ಲ. ಆದರೆ ಸಿನಿಮಾ ನೋಡಬೇಕು ಅಂತ ಅವನಿಗೇ ಅನ್ನಿಸಿದ್ರೆ ಅವನನ್ನು ಸಿನಿಮಾ ನೋಡುವುದರಿಂದ ತಡೆಯೋದು ಯಾರಿಗೂ ಸಾಧ್ಯ ಇಲ್ಲ. ಟಾಕ್ಸಿಕ್ ವಿಚಾರದಲ್ಲೂ ಅದೇ ಆಗ್ತಿದೆ. ಯಾರು ಏನೇ ಕೊಂಕು ಮಾತಾಡಿದ್ರೂ ಒಂದ್ಸಲ ನಾವೇ ನೋಡಿಬಿಡೋಣ ಅನ್ನುವ ಹುಮ್ಮಸ್ಸಿ ನಲ್ಲಿ ಪ್ರೇಕ್ಷಕ ಇದ್ದಾನೆ.

ಇದನ್ನೇ ಪ್ರಚಾರದ ವೈಖರಿ ಅನ್ನೋದು. ಈ ವಾರ ನಮ್ಮ ಜೀವನದಲ್ಲಿ ಬೇರೆ ಏನೂ ಇಲ್ಲ ಅನ್ನು ವಷ್ಟರ ಮಟ್ಟಿಗೆ ಅದ್ದೂರಿ ಚಿತ್ರಗಳ ಬಂಡವಾಳದಾರರು ಸಿನಿಮಾವನ್ನು ಪ್ರಚಾರ ಮಾಡುತ್ತಾರೆ. ಹಾಗೆ ನೋಡಿದರೆ ಕಳೆದ ಎರಡು ವರ್ಷಗಳಿಂದಲೂ ಟಾಕ್ಸಿಕ್ ಸಿನಿಮಾಗೆ ಸಿಕ್ಕ ಪ್ರಚಾರ ಏನೂ ಕಡಿಮೆ ಅಲ್ಲ. ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿ ಮತ್ತೆ ಮತ್ತೆ ಪೋಪೋನ್ ಆಗಿದ್ದಕ್ಕೆ ಪ್ರೇಕ್ಷಕ ಬೇಸರಗೊಂಡಿದ್ದರೂ ಕೊನೆಗೆ ಈಗ ತನಗೆ ಬೇಕಾಗಿದ್ದು ಸಿಗುವ ಹಂತಕ್ಕೆ ಬಂದಿzನೆ. ಇನ್ನೇನಿದ್ದರೂ ಸಿನಿಮಾ ನೋಡಿ ಅವನ ತೀರ್ಪು ಹೇಳೋದಷ್ಟೇ ಬಾಕಿ.

Hari Paraak Column: ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು

ಲೂಸ್ ಟಾಕ್-ದರ್ಶನ್

ಏನ್ ದರ್ಶನ್ ಅವ್ರೇ, ನಿಮ್ಮ ವಿರುದ್ಧ ಮಾಫಿ ಸಾಕ್ಷಿ ಹೇಳೋಕೆ ನಿಮ್ಮ ಸ್ನೇಹಿತರೇ ರೆಡಿ ಆಗಿದ್ದಾರೆ. ಏನನ್ನಿಸ್ತಾ ಇದೆ?

-ನಂಗಂತೂ ಎಷ್ಟು ಚೀಪ್ ಅನ್ನಿಸಿಬಿಡ್ತು ಅಂದ್ರೆ...

ಮೀಡಿಯಾಗಳಲ್ಲೂ ಇದರ ಬಗ್ಗೆ ಘಂಟಾಘೋಷವಾಗಿ ದರ್ಶನ್‌ಗೆ ಮತ್ತೆ ಸಂಕಟ ಅಂತ ಸುದ್ದಿ ಆಗ್ತಾ ಇದೆಯಲ್ಲ?

ಏನ್ರೀ ಮೀಡಿಯಾ...

ನಿಮ್ಮ ವಿರುದ್ಧ ಸಾಕ್ಷಿ ಹೇಳೋಕೆ ರೆಡಿ ಆಗಿರೋ ಪ್ರದೋಷ್‌ಗೆ ಏನ್ ಹೇಳ್ತೀರಾ?

-ಅಯ್ಯೋ, ತಗಡೇ

ಅವನಿಗೆ ನೀವು ಏನಂತ ಧಮಕಿ ಹಾಕಿದ್ರಿ?

-ಲೇ ಪ್ರದೋಷ, ನಿನ್ನ ದೋಷ ಇಟ್ಕೊಂಡು ನನ್ನ ವಿರುದ್ಧ ಸಾಕ್ಷಿ ಹೇಳ್ತಿಯಲ್ಲಲೇ, ನಿನ್ನಮ...

ಇರ್ಲಿ, ಇರ್ಲಿ, ಸಾಕು, ಸಾಕು, ನೀವು ಮುಂದೆ ಏನ್ ಹೇಳ್ತೀರಾ ಅಂತ ಗೊತ್ತು. ಆದ್ರೆ, ಪ್ರದೋಷ್ ನಿಮಗೆ ಕಂಟಕ ಆಗ್ತಾನೆ ಅಂತ ನಿಮಗೂ ಅನ್ಸುತ್ತಾ?

-ಅವ್ನೇನು ದೊಡ್ಡ ಪುಡುಂಗಾ, ಎರಡು ಕೊಂಬೈತಾ ಅವನಿಗೆ

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಸೈಂಟಿಸ್ಟ್ ಆಗಿದ್ದ ಖೇಮು ಜನಸಂಖ್ಯಾ ನಿಯಂತ್ರಣಕ್ಕೆ ಒಂದು ಹೊಸ ಫಾರ್ಮ್ಯುಲಾ ಕಂಡು ಹಿಡಿದ. ಅವನಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಆದರೆ ಭಾರತಕ್ಕಿಂತ ಅದು ಪಾಕಿಸ್ತಾನದಲ್ಲಿ ಹೆಚ್ಚು ಉಪಯೋಗವಾಗುತ್ತದೆ ಎಂಬ ನಂಬಿಕೆಯಲ್ಲಿ ಖೇಮು ಪಾಕಿಸ್ತಾನಕ್ಕೆ ಹೋದ. ಅಲ್ಲಿನ ಪ್ರೆಸಿಡೆಂಟ್ ಅನ್ನು ಕಂಡು ಮಾತನಾಡಿಸಿ ತನ್ನ ಪ್ಲಾನ್ ಬಗ್ಗೆ ಹೇಳಿದ. ಅವರು, ಇದಕ್ಕೆ ನಮ್ಮ ಜನ ಒಪ್ಪಲ್ಲ ಅಂದ್ರು. ಆದ್ರೂ ಕೊನೆಗೆ ಖೇಮು ಅವರನ್ನ ಕನ್‌ವಿನ್ಸ್ ಮಾಡಿದ. ಆದರೆ ಖೇಮು ಪ್ಲಾನ್ ಹೇಗೆ ವರ್ಕ್ ಆಗುತ್ತೆ ಎಂದು ಎಲ್ಲರಿಗೂ ಕುತೂಹಲ ಇತ್ತು. ಹಾಗಾಗಿ ಅದನ್ನು ಪ್ರಾಯೋಗಿಕವಾಗಿ ತೋರಿಸಲು ಹೇಳಿದರು. ಸರಿ ಅದಕ್ಕಾಗಿ 12 ಮಕ್ಕಳಿದ್ದ ಒಬ್ಬನನ್ನು ಕರೆತಂದರು. ಸರಿ ಖೇಮು ತನ್ನ ಪ್ಲಾನ್ ಅನ್ನು ಹೇಳಿದ. ಒಂದು ಖಾಲಿ ಬಿಯರ್ ಕ್ಯಾನ್‌ನಲ್ಲಿ ದೊಡ್ಡದೊಂದು ಪಟಾಕಿ ಇಟ್ಟು ಅದಕ್ಕೆ ಬೆಂಕಿ ತಗುಲಿಸಿ ಅದನ್ನು ಕಿವಿ ಹತ್ತಿರ ಹಿಡಿದುಕೊಂಡು ಇನ್ನೊಂದು ಕೈ ಬೆರಳುಗಳಿಂದ ಒಂದರಿಂದ ಹತ್ತರವರೆಗೂ ಎಣಿಸಬೇಕು ಎಂಬುದು ಅವನ ಯೋಜನೆ. ಆದರೆ ಇದು ಕುಟುಂಬ ಯೋಜನೆ ಹೇಗಾಗುತ್ತೆ ಎಂತ ಎಲ್ಲರ ಡೌಟು. ನೀವು ಟ್ರೈ ಮಾಡಿ, ಹೆಂಗ್ ವರ್ಕ್ ಆಗುತ್ತೆ ಅಂತ ನಾ ಹೇಳ್ತೀನಿ ಅಂದ ಖೇಮು. ಸರಿ ಬಂದಿದ್ದ ಆ 12 ಮಕ್ಕಳ ತಂದೆ ಪಟಾಕಿ ಹಚ್ಚಿದ ಬಿಯರ್ ಕ್ಯಾನ್ ಅನ್ನು ಒಂದು ಕೈಯಿಂದ ಕಿವಿಯ ಹತ್ತಿರ ಇಟ್ಟುಕೊಂಡು ಇನ್ನೊಂದು ಕೈಯಿಂದ ಈ 1,2,3,4,5 ಎಣಿಸಿದ. ಮುಂದೆ ಎಣಿಸೋಕೆ ಹೊರಟಾಗ ಅಭ್ಯಾಸ ಬಲದಂತೆ ಬಿಯರ್ ಕ್ಯಾನ್ ಅನ್ನು ತನ್ನ ತೊಡೆಯ ಸಂದಿಯಲ್ಲಿ ಇಟ್ಟುಕೊಂಡು ಉಳಿದ 5ರಿಂದ ಹತ್ತರವರೆಗೆ ಎಣಿಸಿದ. ಅಷ್ಟೇ... ಪ್ಲ್ಯಾನ್ ಸಕ್ಸಸ್.

ಲೈನ್ ಮ್ಯಾನ್

ಎಸ್ಸೆಸ್ಸೆಲ್ಸಿ ಫೈಲ್ ಆಗಿದ್ದರೂ, ನೋಡಲು ಚೆನ್ನಾಗಿಲ್ಲದಿದ್ದರೂ ನಾನು ಮದುವೆ ಆಗುವ ಹುಡುಗ ಫಾರಿನ್ನಲ್ಲಿರಬೇಕು, ಕೋಟ್ಯಧಿಪತಿ ಆಗಿರಬೇಕು ಎಂದು ಬಯಸುವ ಹುಡುಗಿ

-ಭ್ರಮೆಗಳಲ್ಲಿ ಮದುಮಗಳು

ಬಟಾಣಿಯನ್ನು ಹೆಚ್ಚಾಗಿ ಬೆಳೆಯುವ ಪ್ರದೇಶ

- ʼPeas'ಫುಲ್ ಏರಿಯಾ

ಆಸ್ಪತ್ರೆ ಅಂದ್ರೆ?

-ಬಡವರನ್ನು ಶ್ರೀಮಂತರನ್ನು ಭಿನ್ನವಾಗಿ 'ಟ್ರೀಟ್' ಮಾಡೋ ಜಾಗ

ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವವರಿಗೆ ಹೇಳಬಾರದ ಮಾತು

-'ಬೀ ಪೇಷೆಂಟ್'

ಕ್ರಿಕೆಟ್ ಆಡುವಾಗ ರಿಟೈರ್ಡ್ ಹರ್ಟ್ ಆಗಿ ಔಟ್ ಆಗುವ ಬ್ಯಾಟ್ಸ್‌ಮನ್

-'ಔಟ್' ಪೇಷೆಂಟ್

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸತ್ತರೆ ಅವನು

-ಅವನೂ 'ಔಟ್' ಪೇಷಂಟ್

ಆಸತ್ರೆಯವರು ಸಿನಿಮಾ ನೋಡಲು ಇಷ್ಟಪಡುವ ಜಾಗ

-ಆಪರೇಶನ್ ಥಿಯೇಟರ್

ವ್ಯತ್ಯಾಸ

-ಸಿನಿಮಾದವರು ಥಿಯೇಟರ್ ಖಾಲಿ ಇದ್ರೂ ಸಿನಿಮಾಗಳನ್ನ ಓಡಿಸ್ತಾರೆ- ಆಸ್ಪತ್ರೆಯಲ್ಲಿ ವಾರ್ಡ್ ಖಾಲಿ ಬೀಳುತ್ತೆ ಅನ್ನೋ ಕಾರಣಕ್ಕೆ ಪೇಷಂಟ್ಸ್ ಗುಣ ಆಗಿದ್ರೂ ಡಿಸ್ಚಾರ್ಜ್ ಮಾಡೋದಿಲ್ಲ.

ಸಂಬಂಧಗಳಿಗೆ ಬೆಲೆ ಇಲ್ಲ ಅಂತ ಯಾರು ಹೇಳಿದ್ದು?

-ಆಸ್ಪತ್ರೆಗಳಲ್ಲಿ ಡಾಕ್ಟರ್, ಪೇಷಂಟ್ ಸಂಬಂಧಗಳು 'ಧನಾ'ತ್ಮಕವಾಗಿರುತ್ತವೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani