Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗು ಹೊಡೆದುರುಳಿಸಲು ಡೊನಾಲ್ಡ್‌ ಟ್ರಂಪ್ ಆದೇಶ

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗು ಹೊಡೆದುರುಳಿಸಲು ಡೊನಾಲ್ಡ್‌ ಟ್ರಂಪ್ ಆದೇಶ

Vishwavani 6 months ago

ವಾಷಿಂಗ್ಟನ್‌, ಏ. 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Us President Donald) ಗುರುವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಮೈನ್‌ಗಳನ್ನು (ಸಮುದ್ರ ಬಾಂಬ್) ಇಡುತ್ತಿರುವ ಇರಾನ್‌ನ ಯಾವುದೇ ದೋಣಿಗಳ ಮೇಲೆ ಗುಂಡು ಹಾರಿಸಲು ಅಮೆರಿಕ ನೌಕಾಪಡೆಗೆ ಸೂಚಿಸಿದ್ದಾರೆ.

ವಿಶ್ವದ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಈ ಆಯಕಟ್ಟಿನ ಜಲಮಾರ್ಗದಲ್ಲಿ ಅಮೆರಿಕ ಮತ್ತು ಇರಾನ್ (US-Iran) ನಡುವಿನ ಉದ್ವಿಗ್ನತೆ ಈಗ ಮತ್ತಷ್ಟು ತಾರಕಕ್ಕೇರಿದೆ.

ತಮ್ಮ 'ಟ್ರುತ್ ಸೋಷಿಯಲ್' ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, "ಹೊರ್ಮುಜ್ ಜಲಸಂಧಿಯ ನೀರಿನಲ್ಲಿ ಮೈನ್‌ಗಳನ್ನು ಇಡುತ್ತಿರುವ ಸಣ್ಣ ದೋಣಿಗಳೂ ಸೇರಿದಂತೆ ಯಾವುದೇ ಬೋಟ್‌ಗಳನ್ನು ಕಂಡ ಕೂಡಲೇ ಗುಂಡಿಕ್ಕಿ ಕೊಲ್ಲಲು ನಾನು ಅಮೆರಿಕ ನೌಕಾಪಡೆಗೆ ಆದೇಶ ನೀಡಿದ್ದೇನೆ. ಇರಾನ್‌ನ ಎಲ್ಲ 159 ನೌಕೆಗಳು ಈಗ ಸಮುದ್ರದ ತಳ ಸೇರಲಿವೆ! ಈ ವಿಷಯದಲ್ಲಿ ಯಾವುದೇ ಹಿಂಜರಿಕೆ ಬೇಡ" ಎಂದು ಗುಡುಗಿದ್ದಾರೆ. ಅಲ್ಲದೆ, ಜಲಸಂಧಿಯಲ್ಲಿ ಮೈನ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮೂರು ಪಟ್ಟು ಹೆಚ್ಚಿಸುವಂತೆ ಅವರು ಆದೇಶಿಸಿದ್ದಾರೆ.

ಇರಾನ್ ವಿರುದ್ಧ ಯುದ್ಧ ಮಾಡಲು ಮೂವರು ಅಮೆರಿಕ ಮಾಜಿ ಅಧ್ಯಕ್ಷರ ಬಳಿ ಬೇಡಿಕೆ ಇಟ್ಟಿದ್ದ ನೆತನ್ಯಾಹು!

ಇರಾನ್‌ನಿಂದ ಸರಕು ನೌಕೆಗಳ ವಶ

ಇರಾನ್‌ನ ರೆವಲ್ಯೂಷನರಿ ಗಾರ್ಡ್ (IRGC) ಕಮಾಂಡೋಗಳು ಹೊರ್ಮುಜ್ ಜಲಸಂಧಿಯಲ್ಲಿ ಎರಡು ಪ್ರಮುಖ ಸರಕು ನೌಕೆಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಮಾಸ್ಕ್ ಧರಿಸಿದ ಇರಾನ್ ಸೈನಿಕರು 'MSC-ಫ್ರಾನ್ಸೆಸ್ಕಾ' ಎಂಬ ಕಂಟೇನರ್ ಹಡಗನ್ನು ಏರುತ್ತಿರುವ ವಿಡಿಯೋಗಳನ್ನು ಇರಾನ್ ಮಾಧ್ಯಮಗಳು ಪ್ರಸಾರ ಮಾಡಿವೆ. ಇದರೊಂದಿಗೆ 'ಎಪಾಮಿನೋಡ್ಸ್' ಎಂಬ ಮತ್ತೊಂದು ನೌಕೆಯನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಈ ಹಡಗುಗಳಲ್ಲಿದ್ದ 15 ಫಿಲಿಪೈನ್ಸ್ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ತೈಲ ಮಾರ್ಗದಲ್ಲಿ ಉದ್ವಿಗ್ನತೆ

ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲವಾದ ನಂತರ ಟ್ರಂಪ್ ಜಲಸಂಧಿಗೆ ಸಂಪೂರ್ಣ ನೌಕಾ ದಿಗ್ಬಂಧನ ಘೋಷಿಸಿದ್ದರು. ಇರಾನ್ ಈ ಮಾರ್ಗದಲ್ಲಿ ಸಾಗುವ ಹಡಗುಗಳಿಂದ ಸುಂಕ ವಸೂಲಿ ಮಾಡುತ್ತಿದ್ದು, ಇದನ್ನು ಟ್ರಂಪ್ "ವಿಶ್ವ ಸುಲಿಗೆ" ಎಂದು ಕರೆದಿದ್ದಾರೆ. ಜಲಸಂಧಿಯಲ್ಲಿ ಇರಾನ್ ಸಣ್ಣ ದೋಣಿಗಳ ಮೂಲಕ ಸಮುದ್ರ ಬಾಂಬ್‌ಗಳನ್ನು ಹರಡುತ್ತಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳು ಈ ಮಾರ್ಗದಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಕಾಪಾಡಲು ಪ್ರಯತ್ನಿಸುತ್ತಿವೆ. ಆದರೆ ಟ್ರಂಪ್ ಅವರ ಈ 'ಶೂಟ್-ಟು-ಕಿಲ್' ಆದೇಶವು ವಿವಾದವನ್ನು ನ್ಯಾಯಾಲಯಕ್ಕಿಂತ ಹೆಚ್ಚಾಗಿ ನೇರ ಯುದ್ಧಭೂಮಿಯಲ್ಲಿ ಬಗೆಹರಿಸುವ ಮುನ್ಸೂಚನೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani