Dailyhunt Logo
  • Light mode
    Follow system
    Dark mode
    • Play Story
    • App Story
IND vs ENG: ಈ ಹುಡುಗರು ವಿರಾಟ್‌ ಕೊಹ್ಲಿಯಿಂದ ಏನು ಕಲಿತಿಲ್ಲವಾ? ಹರ್ಷಲ್‌ ಗಿಬ್ಸ್‌ ಪ್ರಶ್ನೆ!

IND vs ENG: ಈ ಹುಡುಗರು ವಿರಾಟ್‌ ಕೊಹ್ಲಿಯಿಂದ ಏನು ಕಲಿತಿಲ್ಲವಾ? ಹರ್ಷಲ್‌ ಗಿಬ್ಸ್‌ ಪ್ರಶ್ನೆ!

Vishwavani 1 week ago

ವದೆಹಲಿ: ಮಂಗಳವಾರ (ಜುಲೈ 7) ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ (IND vs ENG) ಭಾರತ 125 ರನ್‌ಗಳ ಭಾರೀ ಅಂತರದಿಂದ ಸೋತ ಬಳಿಕ, ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಹಾಗೂ ದಿಗ್ಗಜ ಹರ್ಷಲ್ ಗಿಬ್ಸ್ (Harchelle Gibbs) ಅವರು ವೈಭವ್ ಸೂರ್ಯವಂಶಿ ಸೇರಿದಂತೆ ಭಾರತದ ಬ್ಯಾಟರ್‌ಗಳ ಪ್ರದರ್ಶನದ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

202 ರನ್‌ಗಳ ಗುರಿ ಬೆನ್ನತ್ತಿದ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆಯಿತು. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿ 14 ರನ್ ಗಳಿಸಿದ್ದ ವೈಭವ್ ಸೂರ್ಯವಂಶಿ, ಮಂಗಳವಾರದ ಪಂದ್ಯದಲ್ಲಿ 13 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಲೆಗ್ ಸ್ಟಂಪ್‌ನ ಹೊರಭಾಗಕ್ಕೆ ಬಂದ ಶಾರ್ಟ್ ಬಾಲ್‌ಗೆ ಪುಲ್ ಶಾಟ್ ಆಡಲು ಯತ್ನಿಸಿದ ಅವರು, ಚೆಂಡನ್ನು ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರ ಕೈಗೆ ನೀಡಿ ನಿರ್ಗಮಿಸಿದರು.

ಸೂರ್ಯವಂಶಿ ಅವರ ವಿಕೆಟ್ ಪತನದ ಕುರಿತು 'ಎಕ್ಸ್'ನಲ್ಲಿ ಅಭಿಮಾನಿಯೊಬ್ಬರು ಮಾಡಿದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹರ್ಷಲ್ ಗಿಬ್ಸ್, 15 ವರ್ಷದ ಯುವ ಆಟಗಾರ ಸೇರಿದಂತೆ ಭಾರತದ ಇತರ ಬ್ಯಾಟರ್‌ಗಳು ಗುರಿ ಬೆನ್ನಟ್ಟುವ ವಿಧಾನವನ್ನು ಕಲಿಯಲು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.

IND vs ENG: ʻಸಂಜು ನಮಗೆ ಬೇಕುʼ-ಟ್ರೆಂಟ್‌ ಬ್ರಿಡ್ಜ್‌ ಹೊರಗಡೆ ಘೋಷಣೆ ಕೂಡಿದ ಫ್ಯಾನ್ಸ್‌! ವಿಡಿಯೊ

ಗುರಿ ಬೆನ್ನಟ್ಟುವ ಸಂದರ್ಭಗಳಲ್ಲಿ ತಾಳ್ಮೆ, ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್‌ ಮಾಡುವುದು ಹಾಗೂ ಪಂದ್ಯವನ್ನು ಮುನ್ನಡೆಸುವ ಕೌಶಲವನ್ನು ವಿರಾಟ್ ಕೊಹ್ಲಿ ಅವರಿಂದ ಕಲಿಯಬಹುದು ಎಂಬುದು ಗಿಬ್ಸ್ ಅವರ ಅಭಿಪ್ರಾಯಪಟ್ಟಿದ್ದಾರೆ.

"ಈ ಆಟಗಾರರು ವಿರಾಟ್‌ನಿಂದ ಏನನ್ನೂ ಕಲಿತಿಲ್ಲವೇ? ಅವರು ಯಾವಾಗಲೂ ಚೇಸ್‌ ಮಾಡುವಾಗ ಅಥವಾ ಮೊತ್ತವನ್ನು ಕಲೆಹಾಕುವಾಗ ಕ್ರೀಸ್‌ನಲ್ಲಿ ತಮ್ಮನ್ನು ತಾವು ನೆಲೆಗೊಳ್ಳಲು ಹೆಚ್ಚಿನ ಅವಕಾಶ ನೀಡುತ್ತಿದ್ದರು. ಅವರು ಎಂದಿಗೂ ಆತುರಪಡುತ್ತಿರಲಿಲ್ಲ," ಎಂದು ಹರ್ಷೆಲ್ ಗಿಬ್ಸ್ ಅವರ ಹೇಳಿದ್ದಾರೆ.

IND vs ENG: ಆರ್ಚರ್‌, ಟಂಗ್‌ ಮಾರಕ ದಾಳಿಗೆ ಭಾರತ ಉಡೀಸ್‌, ಇಂಗ್ಲೆಂಡ್‌ಗೆ ಸತತ ಎರಡನೇ ಜಯ!

ಭಾರತದ ಬ್ಯಾಟರ್‌ಗಳ ವಿರುದ್ಧ ಹರ್ಷಲ್ ಗಿಬ್ಸ್ ಕಿಡಿ

ಅದೇ ಪೋಸ್ಟ್‌ಗೆ ನೀಡಿದ ಮತ್ತೊಂದು ಪ್ರತಿಕ್ರಿಯೆಯಲ್ಲಿ ಹರ್ಷಲ್ ಗಿಬ್ಸ್ ಅವರು 202 ರನ್‌ಗಳ ಗುರಿ ಬೆನ್ನಟ್ಟುವ ವೇಳೆ ಭಾರತದ ಬ್ಯಾಟರ್‌ಗಳು ತೋರಿದ ಅತಿಯಾದ ಆತುರ ಮತ್ತು ತಾಳ್ಮೆಯ ಕೊರತೆಯನ್ನು ಟೀಕಿಸಿದ್ದಾರೆ.

ಇಂಗ್ಲೆಂಡ್‌ ನೀಡಿದ್ದ ಆ ಗುರಿ ಅಷ್ಟು ಕಠಿಣವಾಗಿರಲಿಲ್ಲ. ಆದರೆ ಭಾರತೀಯ ಬ್ಯಾಟರ್‌ಗಳು ತಾಳ್ಮೆಯಿಂದ ಆಡದೆ, ವಿಕೆಟ್‌ಗಳನ್ನು ಕಳೆದುಕೊಂಡಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಗಿಬ್ಸ್ ಅಭಿಪ್ರಾಯಪಟ್ಟಿದ್ದಾರೆ.

"ಗುರಿ ದೊಡ್ಡದಾಗಿರಲಿಲ್ಲ. ಆದರೆ ಅವರ ಎಲ್ಲಾ ಬ್ಯಾಟರ್‌ಗಳು ಮೊದಲು ಕ್ರೀಸ್‌ನಲ್ಲಿ ನೆಲೆಗೊಳ್ಳುವ ತಾಳ್ಮೆ ತೋರಿಸಲಿಲ್ಲ. ಮೂಲ ನಿಯಮವೇನೆಂದರೆ, ನೀವು ಮೊದಲು ಕ್ರೀಸ್‌ನಲ್ಲಿ ನೆಲೆಗೊಳ್ಳದಿದ್ದರೆ ರನ್ ಗಳಿಸಲು ಸಾಧ್ಯವಿಲ್ಲ," ಎಂದು ಹರ್ಷೆಲ್ ಗಿಬ್ಸ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani