Dailyhunt Logo
  • Light mode
    Follow system
    Dark mode
    • Play Story
    • App Story
IND vs ENG: ಹೀನಾಯ ಸೋಲಿನ ಬಳಿಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ ತಂಡ!

IND vs ENG: ಹೀನಾಯ ಸೋಲಿನ ಬಳಿಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ ತಂಡ!

Vishwavani 1 month ago

1/5

ಟೀಮ್ ಇಂಡಿಯಾದ ಎರಡನೇ ಕನಿಷ್ಠ ಸ್ಕೋರ್

ಭಾರತದ ಇನ್ನಿಂಗ್ಸ್ ಕೇವಲ 76 ರನ್‌ಗಳಿಗೆ ಅಂತ್ಯಗೊಂಡಿತು. ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡದ ಎರಡನೇ ಕನಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮೊದಲು, 2008 ರಲ್ಲಿ, ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 74 ರನ್‌ಗಳಿಗೆ ಆಲೌಟ್ ಆಗಿತ್ತು.

2/5

ಐದು ಪಂದ್ಯಗಳಲ್ಲಿ ಗೆಲುವು ಕಾಣದ ಭಾರತ

ಭಾರತ ತಂಡ ತನ್ನ ಕೊನೆಯ ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದರಲ್ಲಿಯೂ ಗೆದ್ದಿಲ್ಲ. ಭಾರತ ತಂಡ ಐರ್ಲೆಂಡ್‌ ವಿರುದ್ಧ 2 ಪಂದ್ಯಗಳಲ್ಲಿ ಸೋತರೆ, ಇಂಗ್ಲೆಂಡ್‌ ಎದುರು ಎರಡರಲ್ಲಿ ಸೋತಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

3/5

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ವೇಗದ ಆಲೌಟ್

ಇಂಗ್ಲೆಂಡ್‌ನ ಬೌಲರ್‌ಗಳು ಕೇವಲ 11.4 ಓವರ್‌ಗಳಲ್ಲಿ ಟೀಮ್ ಇಂಡಿಯಾದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದರು. ಇದಕ್ಕೂ ಮೊದಲು, 2015 ರಲ್ಲಿ ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 17.2 ಓವರ್‌ಗಳಲ್ಲಿ ಭಾರತ ಕುಸಿದಿತ್ತು.

4/5

ಟಿ20ಐನಲ್ಲಿ ಭಾರತಕ್ಕೆ ಅತಿ ದೊಡ್ಡ ಸೋಲು

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ಭಾರತ ತಂಡ 100 ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಸೋತಿದೆ. ಈ ಹಿಂದೆ ಅತಿದೊಡ್ಡ ಸೋಲು 2019 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 80 ರನ್‌ಗಳಿಂದ ಸೋತಿತ್ತು.

5/5

ಪವರ್‌ಪ್ಲೇಯಲ್ಲಿ 5 ವಿಕೆಟ್‌ ಪತನ

ಭಾರತ ತಂಡ ಪವರ್‌ಪ್ಲೇ ಒಳಗೆ ತನ್ನ ಮೊದಲ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಐದನೇ ವಿಕೆಟ್ ಆಗಿ ಪತನವಾದರು. ಟಿ20 ಅಂತಾರಾಷ್ಟ್ರೀಯ ಪಂದ್ಯದ ಪವರ್‌ಪ್ಲೇ ಸಮಯದಲ್ಲಿ ಭಾರತ ತನ್ನ ಮೊದಲ ಐದು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದೇ ಮೊದಲು.

Dailyhunt
Disclaimer: This content has not been generated, created or edited by Dailyhunt. Publisher: Vishwavani