Dailyhunt Logo
  • Light mode
    Follow system
    Dark mode
    • Play Story
    • App Story
IND vs ENG: ಸಂಜು ಸ್ಯಾಮ್ಸನ್‌ಗೆ ಇದು ಕೊನೆಯ ಟಿ20ಐ ಸರಣಿ? ಸ್ಪಷ್ಟನೆ ನೀಡಿದ ಗೌತಮ್‌ ಗಂಭೀರ್‌!

IND vs ENG: ಸಂಜು ಸ್ಯಾಮ್ಸನ್‌ಗೆ ಇದು ಕೊನೆಯ ಟಿ20ಐ ಸರಣಿ? ಸ್ಪಷ್ಟನೆ ನೀಡಿದ ಗೌತಮ್‌ ಗಂಭೀರ್‌!

Vishwavani 1 month ago

ನಾಟಿಂಗ್‌ಹ್ಯಾಮ್‌: ಭಾರತ ತಂಡ ಮೂರನೇ ಟಿ20ಐ ಪಂದ್ಯದಲ್ಲಿಯೂ (IND vs ENG) ಸೋಲು ಅನುಭವಿಸಿತು. 125 ರನ್‌ಗಳ ಇಷ್ಟು ದೊಡ್ಡ ಅಂತರದಲ್ಲಿ ಇದೇ ಮೊದಲ ಬಾರಿ ಭಾರತ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಅಂತ್ಯಕ್ಕೆ ಟೀಮ್‌ ಇಂಡಿಯಾ ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ.

ಪಂದ್ಯದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ (Gautam Gambhir) ಹಲವು ಪ್ರಶ್ನೆಗಳು ಎದುರಾದವು. ಅವುಗಳ ಪೈಕಿ ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಪ್ಲೇಯಿಂಗ್‌ XIನಿಂದ ಕೈಬಿಟ್ಟಿರುವುದು ಕೂಡ ಒಂದಾಗಿತ್ತು. ಇದಕ್ಕೆ ಅವರು ಸೂಕ್ತ ಕಾರಣವನ್ನು ನೀಡಿದ್ದಾರೆ.

ಇಂಗ್ಲೆಂಡ್‌ ನೀಡಿದ್ದ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಜಾಶ್‌ ಆರ್ಚರ್‌ ಹಾಗೂ ಜಾಶ್‌ ಟಂಗ್‌ ಮಾರಕ ದಾಳಿಗೆ ನಲುಗಿತು ಹಾಗೂ ಕೇವಲ 76 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ವೈಯಕ್ತಿಕವಾಗಿ 20 ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಆಡಿದ ಐದು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.

ಭಾರತ ತಂಡದ ನಾಲ್ಕನೇ ಸೋಲಿನ ಬಳಿಕ ಎಲ್ಲರಿಗೂ ನೆನಪಾಗಿದ್ದು ಸಂಜು ಸ್ಯಾಮ್ಸನ್‌. ಕೇರಳ ಬ್ಯಾಟರ್‌ ಆಡಬೇಕಾಗಿತ್ತು ಎಂಬ ಭಾವನೆ ಎಲ್ಲರಿಗೂ ಉಂಟಾಗಿತ್ತು. ಏಕೆಂದರೆ ಸಂಜು ಸ್ಯಾಮ್ಸನ್‌ ಮೊದಲನೇ ಪಂದ್ಯದ ಬಳಿಕ ಪ್ಲೇಯಿಂಗ್‌ XIನಿಂದ ಕೈ ಬಿಡಲಾಗಿತ್ತು. ಇವರ ಸ್ಥಾನದಲ್ಲಿ ವೈಭವ್‌ ಸೂರ್ಯವಂಶಿಗೆ ಅವಕಾಶವನ್ನು ನೀಡಲಾಗಿದೆ. ಆದರೆ, ಅವರು ಸಿಕ್ಕ ಎರಡೂ ಅವಕಾಶಗಳನ್ನು ಕೈಚೆಲ್ಲಿಕೊಂಡಿದ್ದಾರೆ. ಸಂಜು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು ಎಂಬುದನ್ನು ನಾವು ಮರೆಯಬಾರದು.

ಸದ್ಯ ಗೌತಮ್‌ ಗಂಭೀರ್‌ ಹಾಗೂ ಶ್ರೇಯಸ್‌ ಅಯ್ಯರ್‌ ಜೋಡಿಯ ಅಡಿಯಲ್ಲಿ ಭಾರತ ಹೊಸ ತಂಡ ರೂಪವನ್ನು ಪಡೆಯುತ್ತಿದೆ. ಅಂದ ಹಾಗೆ ಸಂಜು ಸ್ಯಾಮ್ಸನ್‌ ಅವರನ್ನು ಜಿಂಬಾಬ್ವೆ ಪ್ರವಾಸದಿಂದಲೂ ಕೈಬಿಡಲಾಗಿದೆ. ಈ ಬಗ್ಗೆ ಪಂದ್ಯದ ಬಳಿಕ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಸ್ಪಷ್ಟನೆ ನೀಡಿದ್ದಾರೆ. ಸಂಜು ಭಾರತ ತಂಡದ ಯೋಜನೆಗಳಲ್ಲಿ ಇದ್ದಾರೆಂದು ತಿಳಿಸಿದ್ದಾರೆ.

"ಮೊದಲನೇ ಸಂಗತಿ ಏನೆಂದರೆ ಸಂಜು ಸ್ಯಾಮ್ಸನ್‌ಗೆ ಮೊದಲು ಸ್ಪಷ್ಟನೆ ನೀಡುವುದು ಅಗತ್ಯವಿತ್ತು ಹಾಗೂ ನಾನು ಆ ಕೆಲಸವನ್ನು ಈಗಾಗಲೇ ಮಾಡಿದ್ದೇನೆ. ಆಟಗಾರರು ಹಾಗೂ ಹೆಡ್‌ ಕೋಚ್‌ ನಡುವೆ ಆ ರೀತಿಯ ಕಟ್ಟು ನಿಟ್ಟಿನ ಸಂಭಾಷಣೆ ಇದ್ದೇ ಇರುತ್ತದೆ. ಆ ಸಂಭಾಷಣೆ ಏನೆಂಬನ್ನು ನಾನು ರಿವೀಲ್‌ ಮಾಡಲು ಸಾಧ್ಯವಿಲ್ಲ," ಎಂದು ಗೌತಮ್‌ ಗಂಭೀರ್‌ ಹೇಳಿದ್ದಾರೆ.

ಸಂಜು ಕೊಡುಗೆಯನ್ನು ನಾವು ಮರೆತಿಲ್ಲ: ಗಂಭೀರ್‌

ಸಂಜು ಸ್ಯಾಮ್ಸನ್‌ ಅವರು ಭಾರತ ತಂಡಕ್ಕೆ ನೀಡಿರುವ ಕೊಡುಗೆಯನ್ನು ಮರೆತಿಲ್ಲ ಆದರೆ, ಅವರ ಫಾರ್ಮ್‌ ಇಲ್ಲಿ ಪ್ರಮುಖ ಪಾತ್ರವಹಿಸಿದೆ. ಫಾರ್ಮ್‌ ವಿಷಯದಲ್ಲಿ ಅವರನ್ನು ಕೈಬಿಡಲಾಗಿದೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

"ಸಂಜು ಸ್ಯಾಮ್ಸನ್‌ ಬಗ್ಗೆ ಹೇಳುವುದಾದರೆ, ಅವರು ಭಾರತ ತಂಡಕ್ಕೆ ನೀಡಿರುವ ಅದ್ಭುತ ಕೊಡುಗೆ ಸ್ಪಷ್ಟವಾಗಿದೆ ಹಾಗೂ ಅದು ನಮ್ಮ ಗಮನದಲ್ಲಿದೆ. ಆದರೆ, ಕೆಲವೊಮ್ಮೆ ಕೆಲವು ಆಟಗಾರರ ಫಾರ್ಮ್‌ ಅನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವರು ಈ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡದಂಥಾ ಹಿಂದೆ ಇದ್ದ ಯಾವುದೇ ಕಠಿಣ ನಿಯಮ ನಮ್ಮಲ್ಲಿ ಇಲ್ಲ," ಎಂದು ಹೇಳುವ ಮೂಲಕ ಅವರು ಸಂಜು ಪ್ಲೇಯಿಂಗ್‌ XIಗೆ ಮರಳಬಹುದು ಎಂಬ ಸುಳಿವನ್ನು ನೀಡಿದ್ದಾರೆ.

ತಂಡದ ಸಂಯೋಜನೆಯನ್ನು ಸಮರ್ಥಿಸಿಕೊಂಡ ಗಂಭೀರ್‌

ಭಾರತ ತಂಡದ ಆಯ್ಕೆಯ ತತ್ವವನ್ನು ಹೆಡ್‌ ಕೋಚ್‌ ಸಮರ್ಥಿಸಿಕೊಂಡರು ಹಾಗೂ ಪ್ರತಿಯೊಬ್ಬ ಆಟಗಾರ ಕೂಡ ತಂಡದಲ್ಲಿ ಅವಕಾಶ ಪಡೆಯಬೇಕೆಂದು ತಿಳಿಸಿದ್ದಾರೆ.

"ಅಂತಾರಾಷ್ಟ್ರೀಯ ಕ್ರಿಕೆಟ್‌ ಎಂದರೆ ಫಲಿತಾಂಶಗಳು, ಆ ಫಲಿತಾಂಶಗಳಿಗಾಗಿ ಅತ್ಯುತ್ತಮ ಸಂಯೋಜನೆಯನ್ನು ಕಣಕ್ಕೆ ಇಳಿಸಬೇಕೆಂಬುದು ನಮ್ಮ ಭಾವನೆಯಾಗಿರುತ್ತದೆ. ಅದರಂತೆ ತಂಡದ ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಸ್ಥಾನವನ್ನು ಪಡೆಯಬೇಕು ಹಾಗೂ ಭಾರತ ತಂಡದ ಪರ ಆಡುವ ಹಕ್ಕನ್ನು ಹೊಂದಿದ್ದರೆಂದು ನಾನು ಸದಾ ನಂಬಿದ್ದೇನೆ," ಎಂದು ಗೌತಮ್‌ ಗಂಭೀರ್‌ ಹೇಳಿದ್ದಾರೆ.

ನಾಟಿಂಗ್‌ಹ್ಯಾಮ್‌: ಭಾರತ ತಂಡ ಮೂರನೇ ಟಿ20ಐ ಪಂದ್ಯದಲ್ಲಿಯೂ (IND vs ENG) ಸೋಲು ಅನುಭವಿಸಿತು. 125 ರನ್‌ಗಳ ಇಷ್ಟು ದೊಡ್ಡ ಅಂತರದಲ್ಲಿ ಇದೇ ಮೊದಲ ಬಾರಿ ಭಾರತ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಅಂತ್ಯಕ್ಕೆ ಟೀಮ್‌ ಇಂಡಿಯಾ ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಪಂದ್ಯದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ (Gautam Gambhir) ಹಲವು ಪ್ರಶ್ನೆಗಳು ಎದುರಾದವು. ಅವುಗಳ ಪೈಕಿ ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಪ್ಲೇಯಿಂಗ್‌ XIನಿಂದ ಕೈಬಿಟ್ಟಿರುವುದು ಕೂಡ ಒಂದಾಗಿತ್ತು. ಇದಕ್ಕೆ ಅವರು ಸೂಕ್ತ ಕಾರಣವನ್ನು ನೀಡಿದ್ದಾರೆ.

IND vs ENG: ಆರ್ಚರ್‌, ಟಂಗ್‌ ಮಾರಕ ದಾಳಿಗೆ ಭಾರತ ಉಡೀಸ್‌, ಇಂಗ್ಲೆಂಡ್‌ಗೆ ಸತತ ಎರಡನೇ ಜಯ!

ಸಂಜು ಕೊಡುಗೆಯನ್ನು ನಾವು ಮರೆತಿಲ್ಲ: ಗಂಭೀರ್‌

ʻಟಿ20 ವಿಶ್ವಕಪ್‌ ಜಯದ ಹೀರೋʼ-ಸಂಜು ಸ್ಯಾಮ್ಸನ್‌ಗೆ ಕೊಕ್‌ ನೀಡಿದ ಬಿಸಿಸಿಐ ವಿರುದ್ಧ ಅಜಿಂಕ್ಯ ರಹಾನೆ ಕಿಡಿ!

ತಂಡದ ಸಂಯೋಜನೆಯನ್ನು ಸಮರ್ಥಿಸಿಕೊಂಡ ಗಂಭೀರ್‌

Dailyhunt
Disclaimer: This content has not been generated, created or edited by Dailyhunt. Publisher: Vishwavani