Dailyhunt
IND vs PAK: ಪಾಕ್‌ ಸ್ಪಿನ್ನರ್‌ ಉಸ್ಮಾನ್‌ ತಾರಿಖ್‌ಗೆ ಕೌಂಟರ್‌ ನೀಡುವುದೇಗೆಂದು ಸಲಹೆ ನೀಡಿದ ಆರ್‌ ಅಶ್ವಿನ್‌!

IND vs PAK: ಪಾಕ್‌ ಸ್ಪಿನ್ನರ್‌ ಉಸ್ಮಾನ್‌ ತಾರಿಖ್‌ಗೆ ಕೌಂಟರ್‌ ನೀಡುವುದೇಗೆಂದು ಸಲಹೆ ನೀಡಿದ ಆರ್‌ ಅಶ್ವಿನ್‌!

Vishwavani 1 month ago

ವದೆಹಲಿ: ಫೆಬ್ರವರಿ 15ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ (IND vs PAK) ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಹೂವೋಲ್ಟೇಜ್‌ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin), ಪಾಕ್‌ ಸ್ಪಿನ್ನರ್‌ ಉಸ್ಮಾನ್‌ ತಾರಿಖ್‌ (Usman Tariq) ಅವರ ಬಗ್ಗೆ ಟೀಮ್‌ ಇಂಡಿಯಾಗೆ ಮಹತ್ವದ ಸಲಹೆ ನೀಡಿದ್ದಾರೆ.

ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್‌ ಈ ಟೂರ್ನಿಯಲ್ಲೇ ಅತ್ಯಂತ ಅಪಾಯಕಾರಿ ಸ್ಪಿನ್ ಅಸ್ತ್ರವೆಂದು ಪರಿಗಣಿಸಲಾಗುತ್ತಿದೆ. ಭಾರತ ತಂಡ ಇದೇ ಮೊದಲ ಬಾರಿ ಅವರನ್ನು ಎದುರಿಸಲು ಸಜ್ಜಾಗುತ್ತಿದೆ. ಹಾಗಾಗಿ ಆರ್‌ ಅಶ್ವಿನ್, ಪಾಕ್‌ ಸ್ಪಿನ್ನರ್‌ ಅನ್ನು ಹೇಗೆ ಎದುರಿಸಬೇಕೆಂದು ಸಲಹೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಕಾರ್ಯಕ್ರಮ 'ಆಶ್ ಕಿ ಬಾತ್'ನಲ್ಲಿ ಮಾತನಾಡಿದ ಅಶ್ವಿನ್, ಭಾರತ ತಾರಿಖ್‌ ಅವರನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಚಾಣಾಕ್ಷ ತಂತ್ರವೊಂದನ್ನು ಮುಂದಿಟ್ಟಿದ್ದಾರೆ. ಈ ವಿಧಾನ ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದು, ಬ್ಯಾಟರ್‌ಗಳು ಅದನ್ನು ಬಳಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.

IND vs PAK: ʻಅಭಿಷೇಕ್‌ ಶರ್ಮಾ ತಾಂತ್ರಿಕವಾಗಿ ಉತ್ತಮ ಬ್ಯಾಟ್ಸ್‌ಮನ್‌ ಅಲ್ಲʼ-ಮೊಹಮ್ಮದ್‌ ಆಮಿರ್‌ ಅಚ್ಚರಿ ಹೇಳಿಕೆ!

ಉಸ್ಮಾನ್‌ ತಾರಿಖ್‌ ಅವರು ಚೆಂಡನ್ನು ಡೆಲಿವರಿ ಮಾಡುವುದಕ್ಕೂ ಮುನ್ನ ತೆಗೆದುಕೊಳ್ಳುವ ವಿರಾಮವನ್ನು ಗಮನಿಸಿ, ಅದನ್ನೇ ಅವರ ವಿರುದ್ಧ ಪ್ರಮುಖ ಅಸ್ತ್ರವನ್ನಾಗಿ ಉಪಯೋಗಿಸಬಹುದು ಎಂದು ಅಶ್ವಿನ್, ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸೂಚಿಸಿದ್ದಾರೆ. ಭಾರತೀಯ ಬ್ಯಾಟರ್‌ಗಳು ತಾರಿಖ್‌ ಅವರ ಈ ವಿರಾಮಕ್ಕೆ ತಕ್ಕಂತೆ ತಮ್ಮ ಚಲನೆ ಹಾಗೂ ಮನೋಭಾವವನ್ನು ಹೊಂದಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಉಸ್ಮಾನ್‌ ತಾರಿಖ್‌ ಬಗ್ಗೆ ಆರ್‌ ಅಶ್ವಿನ್‌ ಹೇಳಿದ್ದೇನು?

"ಒಂದು ವಿಷಯವನ್ನು ನಾನು ನೋಡಲು ಬಯಸುತ್ತೇನೆ. ಅದನ್ನು ಮಾಡಲು ಯಾರು ಧೈರ್ಯ ತೋರಿಸುತ್ತಾರೆ?" ಎಂದು ಹೇಳಿದ ಅಶ್ವಿನ್‌, "ತಾರಿಖ್‌ ಎಸೆತಕ್ಕೂ ಮುನ್ನ ವಿರಾಮ ತೆಗೆದುಕೊಂಡರೆ, ಬ್ಯಾಟರ್‌ಗೆ ಕ್ರೀಸ್‌ನಿಂದ ಹಿಂದೆ ಸರಿಯುವ ಹಕ್ಕು ಇದೆ. 'ಬಾಲ್ ಯಾವಾಗ ಬರುತ್ತದೆ ಗೊತ್ತಿಲ್ಲ, ಅದಕ್ಕಾಗಿ ನಾನು ಹಿಂದೆ ಸರಿದೆ' ಎಂದು ಬ್ಯಾಟರ್ ಹೇಳಬಹುದು," ಎಂದು ಅಶ್ವಿನ್ ವಿವರಿಸಿದರು.

IND vs PAK: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ನಲ್ಲಿ ಮಾಡುತ್ತಿರುವ ತಪ್ಪನ್ನು ತಿಳಿಸಿದ ಸುನೀಲ್‌ ಗವಾಸ್ಕರ್‌!

"ಅದು ಆಸಕ್ತಿದಾಯಕ ಸಂಗತಿಯಾಗುತ್ತದೆ ಮತ್ತು ಅಂಪೈರ್‌ಗೆ ದೊಡ್ಡ ತಲೆನೋವಾಗಬಹುದು. ಅಂಪೈರ್ ಬೌಲರ್‌ಗೆ ಎಚ್ಚರಿಕೆ ನೀಡಬೇಕೋ ಅಥವಾ ಬ್ಯಾಟರ್‌ಗೆ ನೀಡಬೇಕೋ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಆಗಿರುವಂತೆ, ಮೊದಲು ಬೌಲರ್‌ಗೆ ಎಚ್ಚರಿಕೆ ನೀಡುವ ಸಾಧ್ಯತೆಯೇ ಹೆಚ್ಚು," ಎಂದು ಅವರು ಸೇರಿಸಿದರು.

"ಇದು ಅತ್ಯಂತ ದೊಡ್ಡ ಪಂದ್ಯ ಎಂದು ಕಲ್ಪನೆ ಮಾಡಿ. ತಾರಿಖ್‌ ಪಂದ್ಯದ ಗಮನ ಸೆಳೆಯಬಲ್ಲ ಬೌಲರ್‌. ಅವರು 24 ಎಸೆತಗಳನ್ನು ಹಾಗೆ ಎಸೆಯಬೇಕಾಗುತ್ತದೆ. ಬ್ಯಾಟರ್ ಹಿಂದಕ್ಕೆ ಸರಿದರೆ, ತಾರಿಖ್‌ ಮೇಲೆ ಒತ್ತಡ ಬೀಳುತ್ತದೆ. ಅವರು ಪಂದ್ಯದ ಮಧ್ಯದಲ್ಲಿ ತನ್ನ ಬೌಲಿಂಗ್ ಶೈಲಿಯನ್ನು ಬದಲಾಯಿಸಬೇಕಾಗಬಹುದು. ಪಾಕಿಸ್ತಾನದ ಪ್ರಮುಖ ಅಸ್ತ್ರವೇ ನಿರರ್ಥಕವಾಗಬಹುದು," ಎಂದು ಅಶ್ವಿನ್‌ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani