Dailyhunt Logo
  • Light mode
    Follow system
    Dark mode
    • Play Story
    • App Story
ಇಂದಿನ ಭಾರತ-ಇಂಗ್ಲೆಂಡ್‌ 2ನೇ ಟಿ20ಗೂ ಮಳೆ ಭೀತಿ ಇದೆಯಾ?

ಇಂದಿನ ಭಾರತ-ಇಂಗ್ಲೆಂಡ್‌ 2ನೇ ಟಿ20ಗೂ ಮಳೆ ಭೀತಿ ಇದೆಯಾ?

Vishwavani 3 weeks ago

ಮ್ಯಾಂಚೆಸ್ಟರ್‌, ಜು. 4: ಇಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಟಿ20ಐನಲ್ಲಿ ಇಂಗ್ಲೆಂಡ್(England vs India 2nd T20I) ತಂಡ ಭಾರತವನ್ನು ಎದುರಿಸಲಿದೆ. ಡರ್ಹಾಮ್‌ನಲ್ಲಿ ನಡೆದ ಮೊದಲ ಟಿ20ಐ ಭಾರತದ ಇನ್ನಿಂಗ್ಸ್ ಮಾತ್ರ ಪೂರ್ಣಗೊಳ್ಳುವಷ್ಟರಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು.

ಇದೀಗ ಎರಡನೇ ಪಂದ್ಯದ ಹವಾಮಾನ ವರದಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಓಲ್ಡ್ ಟ್ರಾಫರ್ಡ್ ಈ ಹಿಂದೆ ಇಂಗ್ಲೆಂಡ್ ಮತ್ತು ಭಾರತ ನಡುವೆ ಎರಡು ಟಿ20 ಪಂದ್ಯಗಳನ್ನು ಆಯೋಜಿಸಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿದೆ. ಹೀಹಾಗಿ ಶನಿವಾರದ ಹಣಾಹಣಿ ತೀವ್ರ ಪೈಪೋಟಿಯಿಂದ ನಿರೀಕ್ಷಿಸಬಹುದು.

ಶೇ.30ರಷ್ಟು ಮಳೆ ಸಾಧ್ಯತೆ

ಪಂದ್ಯವು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ (ಸ್ಥಳೀಯ ಕಾಲಮಾನ ಮಧ್ಯಾಹ್ನ 2:30) ಆರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಗಂಟೆಗೆ (ಸ್ಥಳೀಯ ಕಾಲಮಾನ ಮಧ್ಯಾಹ್ನ 2:00) ನಡೆಯಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಸಂಜೆಯ ನಂತರ (ಸ್ಥಳೀಯ ಕಾಲಮಾನ ರಾತ್ರಿ 8:00 ರ ಸುಮಾರಿಗೆ) ಮಳೆಯಾಗುವ ಸಾಧ್ಯತೆ ಶೇ. 30 ರಷ್ಟು ಇದ್ದರೂ, ಲಘು ಮಳೆ ಮಾತ್ರ ಬೀಳುವ ಮುನ್ಸೂಚನೆ ಇದೆ ಮತ್ತು ಪೂರ್ಣ ಪ್ರಮಾಣದ ಪಂದ್ಯ ನಡೆಯುವ ನಿರೀಕ್ಷೆಯಿದೆ.

ಪಿಚ್ ವರದಿ

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸಾಮಾನ್ಯವಾಗಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ಗೆ ಸಮನಾದ ಸ್ಪರ್ಧೆ ಇರುವ ಮೇಲ್ಮೈಗಳನ್ನು ಒದಗಿಸುತ್ತದೆ. ಪವರ್ ಪ್ಲೇ ಓವರ್‌ಗಳು ಎರಡೂ ತಂಡಗಳಿಗೆ ಪ್ರಮುಖವಾಗುತ್ತವೆ. ಎರಡೂ ತಂಡಗಳಲ್ಲಿ ಕೆಲವು ಪ್ರತಿಭಾನ್ವಿತ ಸ್ವಿಂಗ್ ಬೌಲರ್‌ಗಳಿದ್ದಾರೆ, ವಿಶೇಷವಾಗಿ ಅನುಕೂಲಕರ ಪರಿಸ್ಥಿತಿಗಳಲ್ಲಿ ಅವರು ಮೇಲುಗೈ ಸಾಧಿಸಬಹುದು.

ಎರಡನೇ ಟಿ20ಯಲ್ಲಿ ಮಹತ್ವದ ದಾಖಲೆ ಬರೆಯುವ ಸನಿಹ ಅಕ್ಷರ್‌ ಪಟೇಲ್‌; ಒಂದು ವಿಕೆಟ್‌ ಅಗತ್ಯ

ಉಭಯ ತಂಡಗಳು

ಇಂಗ್ಲೆಂಡ್‌: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿ.ಕೀ.), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟಂಗ್.

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani