Dailyhunt Logo
  • Light mode
    Follow system
    Dark mode
    • Play Story
    • App Story
IPL 2026: ʻಅದು ಮೂರ್ಖ ಪ್ರಶ್ನೆʼ-ರಿಪೋರ್ಟರ್‌ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಗುಡುಗಿದ ಗ್ಲೆನ್‌ ಫಿಲಿಪ್ಸ್!

IPL 2026: ʻಅದು ಮೂರ್ಖ ಪ್ರಶ್ನೆʼ-ರಿಪೋರ್ಟರ್‌ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಗುಡುಗಿದ ಗ್ಲೆನ್‌ ಫಿಲಿಪ್ಸ್!

Vishwavani 2 weeks ago

ರ್ಮಶಾಲಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 92 ರನ್‌ಗಳ ಸೋಳು ಅನುಭವಿಸಿದ ಬಳಿಕ ಗುಜರಾತ್‌ ಟೈಟನ್ಸ್‌ ಆಲ್‌ರೌಂಡರ್‌ ಗ್ಲೆನ್‌ ಫಿಲಿಪ್ಸ್‌ (Glenn Phillips) ಸುದ್ದಿಗಾರರ ಮೇಲೆ ಗರಂ ಆದ ಘಟನೆ ನಡೆಯಿತು.

ಸುದ್ದಿಗಾರರು ಕೇಳಿದ ಪ್ರಶ್ನೆಯನ್ನು ಕಿವೀಸ್‌ ಆಟಗಾರ, ಮೂರ್ಖತನಕ ಪ್ರಶ್ನೆ ಎಂದು ವ್ಯಗ್ಯವಾಡಿದ್ದರು. ಅಂದ ಹಾಗೆ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸೋಲುವ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಜಿಟಿ ತಂಡ, ಇದೀಗ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ಆಡಲು ಸಜ್ಜಾಗುತ್ತಿದೆ.

ಮೇ 26 ರಂದು ನಡೆದಿದ್ದ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆರ್‌ಸಿಬಿ ತಂಡ, ರಜತ್‌ ಪಾಟಿದಾರ್‌ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 254 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಗುಜರಾತ್‌ ಟೈಟನ್ಸ್‌ ತಂಡ 164 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು. ಈ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ಲೆನ್‌ ಫಿಲಿಪ್ಸ್‌ಗೆ ಸುದ್ದಿಗಾರರೊಬ್ಬರು, ಚೇಸ್‌ ಮಾಡಲು ಮೈದಾನಕ್ಕೂ ಆಗಮಿಸುವುದಕ್ಕೂ ಮುನ್ನ ನೀವು ಪಂದ್ಯವನ್ನು ಬಿಟ್ಟುಕೊಟ್ಟಿದ್ದೀರಾ? ಎಂದು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಜಿಟಿ ಆಲ್‌ರೌಂಡರ್‌ ಗರಂ ಆದರು.

IPL 2026: ʻನ್ಯೂ ಸಿಕ್ಸ್‌ ಮಷಿನ್‌ʼ-ವೈಭವ್‌ ಸೂರ್ಯವಂಶಿಗೆ ಹೊಸ ಹೆಸರು ನಾಮಕರಣ ಮಾಡಿದ ಕ್ರಿಸ್‌ ಗೇಲ್‌!

"ಇದು ಮೂರ್ಖತನಕ ಪ್ರಶ್ನೆ. ಇದು ನಿಜವಾಗಲೂ ಮೂರ್ಖತನದ ಪ್ರಶ್ನೆ. ಯಾವುದೇ ಆಟಗಾರ ಮೈದಾನಕ್ಕೆ ಹೋಗಿ 'ಸರಿ, ಈ ಬಾರಿ ನಾವು ಕೈಬಿಡೋಣ' ಎಂದುಕೊಂಡು ಹೋಗುವುದಿಲ್ಲ. ವೃತ್ತಿಪರ ಕ್ರಿಕೆಟಿಗರಾಗಿ ನಾವು ಹಾಗೆ ಏಕೆ ಮಾಡಬೇಕು?" ಎಂದು ಗ್ಲೆನ್‌ ಫಿಲಿಫ್ಸ್‌ ಹೇಳುವ ಮೂಲಕ ಸುದ್ದಿಗಾರರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಆಟಗಾರರು ಸಂಪೂರ್ಣ ವೃತ್ತಿಪರರಾಗಿದ್ದು, ಪಂದ್ಯ ಫಲಿತಾಂಶ ಏನೇ ಆಗಿರಲಿ ಗುರಿ ಬೆನ್ನಟ್ಟಲು ತಮ್ಮ ತಂಡ ಎಲ್ಲವನ್ನೂ ನೀಡಿದೆ ಎಂದು ನ್ಯೂಜಿಲೆಂಡರ್ ತಿಳಿಸಿದ್ದಾರೆ.

"ಅದು ಒಂದು ಕೆಟ್ಟ ಪ್ರಶ್ನೆ. ನಾವು ಅಲ್ಲಿಗೆ ಹೋಗಿ ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಹಾಕಿದ್ದೇವೆ. 250 ರನ್‌ಗಳನ್ನು ಬೆನ್ನಟ್ಟುವಾಗ ಎಲ್ಲವೂ ಸರಿಯಾಗಿ ನಡೆಯಬೇಕು. ನಾವು ಕೂಡ ಅದನ್ನು ಸಾಧಿಸಲು ಪ್ರಯತ್ನಿಸಿದ್ದೆವು, ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ," ಎಂದು ಗ್ಲೆನ್‌ ಫಿಲಿಪ್ಸ್‌ ಹೇಳಿದ್ದಾರೆ.

IPL 2026: ಗುಜರಾತ್‌ ಟೈಟನ್ಸ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಬಾರಿ ಫೈನಲ್‌ಗೇರಿದ ಆರ್‌ಸಿಬಿ!

ಗುಜರಾತ್‌ ಟೈಟನ್ಸ್‌ ತಂಡ 255 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಅವರ ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಇನಿಂಗ್ಸ್‌ ಅಥವಾ ದೊಡ್ಡ ಜೊತೆಯಾಟಗಳು ಮೂಡಿಬರಲಿಲ್ಲ. ಜೇಕಬ್‌ ಡಫಿ, ಭುವನೇಶ್ವರ್‌ ಕುಮಾರ್‌, ಜಾಶ್‌ ಹೇಝಲ್‌ವುಡ್‌ ಸೇರಿದಂತೆ ಆರ್‌ಸಿಬಿ ಬೌಲರ್‌ಗಳು ಜಿಟಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಅಂತಿಮವಾಗಿ ಗುಜರಾತ್‌ ಟೈಟನ್ಸ್‌ ತಂಡ ಕೇವಲ 164 ರನ್‌ಗಳಿಗೆ ಆಲೌಟ್ ಆಯಿತು.

ಆರ್‌ಆರ್‌ ಎದುರು ಎರಡನೇ ಕ್ವಾಲಿಫೈಯರ್‌ ಆಡಲು ಜಿಟಿ ಸಜ್ಜು

ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೋಲು ಅನುಭವಿಸಿದ ಗುಜರಾತ್‌ ಟೈಟನ್ಸ್‌, ಇದೀಗ ಮೇ 29 ರಂದು ನವಚಂಡೀಗಢದ ಮುಲ್ಲಾನ್‌ಪುರದಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಎಲಿಮಿನೇಟರ್‌ ಪಂದ್ಯವನ್ನು ಗೆದ್ದಿದ್ದ ರಾಜಸ್ಥಾನ್‌ ರಾಯಲ್ಸ್‌ ಎದುರು ಜಿಟಿ ಆಡಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani